Site icon Vistara News

MS Dhoni: ಆ ಒಂದು ರನ್​​ ಔಟ್ ನನ್ನ ​​ ಕ್ರಿಕೆಟ್​ ವೃತ್ತಿ ಜೀವನದ ಅತ್ಯಂತ ಕೆಟ್ಟ ಕ್ಷಣ; ವಿಶ್ವ ಕಪ್​ ಆಘಾತವನ್ನು ವಿವರಿಸಿದ ಧೋನಿ

MS Dhoni

ನವದೆಹಲಿ: 2019ರ ಏಕ ದಿನ ವಿಶ್ವ ಕಪ್​ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿರುವುದು ತಮ್ಮ ವೃತ್ತಿ ಜೀವನದ ಅತ್ಯಂತ ‘ಹೃದಯ ವಿದ್ರಾವಕ ಕ್ಷಣ’ ಎಂಬುದಾಗಿ ಧೋನಿ (MS Dhoni) ಹೇಳಿದ್ದಾರೆ. 2019 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವು ಶತಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಬೇಸರಕ್ಕೆ ನೂಕಿತ್ತು. ಜುಲೈ ರಂದು ನಡೆದ ಈ ಪಂದ್ಯವು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನು ಕೆರಳಿಸಿತ್ತು. ಭಾರತಕ್ಕೆ ನಾಟಕೀಯ ಸೋಲಾಗಿತ್ತು. ಇದು ಕೇವಲ ನಷ್ಟವಲ್ಲ, ಇದು ಶತಕೋಟಿ ಕನಸುಗಳ ಅಂತ್ಯವಾಗಿತ್ತು. ಯಾಕೆಂದರೆ ಅದು ಧೋನಿ ಆ ಪಂದ್ಯದಲ್ಲಿ ರನ್​ ಔಟ್ ಆಗಿದ್ದು ಸೋಲಿಗೆ ಕಾರಣವಾಗಿತ್ತು.

2004 ರಲ್ಲಿ ಚೊಚ್ಚಲ ಪಂದ್ಯದಲ್ಲೇ ರನ್ ಔಟ್ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ವಿಕೆಟ್ ಕೀಪರ್-ಬ್ಯಾಟರ್​ ತಮ್ಮ ಏಕದಿನ ವೃತ್ತಿಜೀವನವನ್ನು ರನ್​ಔಟ್​ ಆಗುವ ಮೂಲಕ ಕೊನೆಗೊಳಿಸಿದ್ದರು. ಆ ವಿಶ್ವ ಕಪ್​ ಬಳಿಕ ಧೋನಿ ವಿದಾಯ ಹೇಳಿದ್ದರು.

2019ರ ವಿಶ್ವ ಕಪ್​ನಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತವು ಹೆಚ್ಚಿನ ಭರವಸೆ ಹೊಂದಿತ್ತು. ಆದಾಗ್ಯೂ, ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್​ನಲ್ಲಿ ನಡೆದ ಸೆಮಿಫೈನಲ್ ಭಾರತ ಸೋತಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಗೆ 240 ರನ್ ಗಳ ಟಾರ್ಗೆಟ್ ಭಾರತಕ್ಕೆ ನೀಡಿತ್ತು. ಮಳೆಯಿಂದಾಗಿ ಪಂದ್ಯವನ್ನು ಮೀಸಲು ದಿನಕ್ಕೆ ವಿಸ್ತರಿಸಲಾಗಿತ್ತು. ಭಾರತ ಗೆಲುವಿನ ನೆಚ್ಚಿನ ತಂಡವಾಗಿತ್ತು.

ಇದನ್ನೂ ಓದಿ: SL vs IND : ಲಂಕಾಗೆ ಗಾಯದ ಸಂಕಟ; ಏಕದಿನ ಸರಣಿಯಿಂದ ದಿಲ್ಶಾನ್ ಮಧುಶಂಕಾ, ಮತೀಶಾ ಪಥಿರಾನಾ ಔಟ್

ಭಾರತದ ಚೇಸಿಂಗ್​ ಕೆಟ್ಟದಾಗಿ ಪ್ರಾರಂಭವಾಯಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸೇರಿದಂತೆ ಅಗ್ರ ಕ್ರಮಾಂಕದ ಬ್ಯಾಟರ್​ಗಳು ವಿಫಲಗೊಂಡರು. ಈ ವೇಳೆ ಅಭಿಮಾನಿಗಳಲ್ಲಿ ಅಪನಂಬಿಕೆಯ ಭಾವನೆ ಹರಡಿತು. ನಂತರ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ಇನ್ನಿಂಗ್ಸ್ ಕಟ್ಟುವ ಕೆಲಸ ಆರಂಭಿಸಿದರು. ಇದು ತಂಡದಲ್ಲಿ ಹಾಗೂ ಅಭಿಮಾನಿಗಳಿಗೆ ಭರವಸೆ ಮೂಡಿಸಿತು.

ಜಡೇಜಾ 59 ಎಸೆತಗಳಲ್ಲಿ 77 ರನ್ ಗಳಿಸಿದರು. ಅವರು ಔಟಾದ ನಂತರ ಭಾರತಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್​ಗಳ ಅವಶ್ಯಕತೆಯಿತ್ತು. ಕೂಲ್ ಆಟಗಾರ ಧೋನಿ ರಾಷ್ಟ್ರದ ಭರವಸೆಗಳ ಭಾರವನ್ನು ಹೊತ್ತಿದ್ದರು. ಗೆಲುವಿಗೆ 10 ಎಸೆತಗಳಲ್ಲಿ 25 ರನ್​ಗಳ ಅವಶ್ಯಕತೆಯಿತ್ತು. ಅದು ಕಷ್ಟವಾಗಿರಲಿಲ್ಲ.

ಧೋನಿ ರನೌಟ್

ಮಾರ್ಟಿನ್ ಗಪ್ಟಿಲ್ ಅವರ ಫೀಲ್ಡಿಂಗ್​ ಧೋನಿಯನ್ನು ಕ್ರೀಸ್ ನಿಂದ ಹೊರಗಿಡಿತು. ಧೋನಿಯ ರನೌಟ್ ಭಾರತದ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತು. ಅವರು ಪೆವಿಲಿಯನ್ ಗೆ ಹಿಂತಿರುಗುತ್ತಿದ್ದಂತೆ ಸ್ಟೇಡಿಯಮ್​ ಮೌನವಾಯಿತು. ಪ್ರಪಂಚದಾದ್ಯಂತದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.

ಈ ಸೋಲು ಹೃದಯ ವಿದ್ರಾವಕ ಘಟನೆ ಎಂದು ಧೋನಿ ಒಪ್ಪಿಕೊಂಡಿದ್ದಾರೆ. “ಇದು ಕಷ್ಟಕರವಾಗಿತ್ತು ಏಕೆಂದರೆ ಇದು ನನ್ನ ಕೊನೆಯ ವಿಶ್ವಕಪ್ ಎಂದು ನನಗೆ ತಿಳಿದಿತ್ತು. ಆದ್ದರಿಂದ ಗೆಲುವು ನನಗ ಅನಿವಾರ್ಯವಾಗಿತ್ತು. ಆದರೆ ರನ್​ಔಟ್​​ ಹೃದಯ ವಿದ್ರಾವಕ ಕ್ಷಣವಾಗಿತ್ತು, “ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ವಿಶ್ವ ಕಪ್​ ಅತ್ಯುತ್ತಮ ಸಮಯವಾಗಿತ್ತು. ಆದರೆ, ರನ್​ಔಟ್ ಬಳಿಕ ಆದ ಸೋಲು ಬೇಸರ ಮೂಡಿತು. ಅದರಿಂದ ಸುಧಾರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ. ಅದರ ನಂತರ ನಾನು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ, ಆದ್ದರಿಂದ ನನಗೆ ಸಾಕಷ್ಟು ಸಮಯ ಸಿಕ್ಕಿತು ಎಂದು ಧೋನಿ ಹೇಳಿದ್ದಾರೆ.

Exit mobile version