Site icon Vistara News

MS Dhoni : ಧೋನಿ ಮುಟ್ಟಿದ್ದೆಲ್ಲ ದಾಖಲೆ, ಲಕ್ನೊ ವಿರುದ್ಧವೂ ಮತ್ತೊಂದು ರೆಕಾರ್ಡ್​​

MS Dhoni

ಲಖನೌ: ಐಪಿಎಲ್ 2024 ರ 34 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಸಿಎಸ್​ಕೆ ತಂಡ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಕೇವಲ ಒಂಬತ್ತು ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದ್ದರು. ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ಅವರ ಎರಡು ದೊಡ್ಡ ಓವರ್​ಗಳಲ್ಲಿ ಅವರು ಅಬ್ಬರಿಸಿದ್ದರು. ಹೀಗಗಿ ಸಿಎಸ್​ಕೆ 176 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ವಿಶೇಷವೆಂದರೆ, ಎಂಎಸ್ ಧೋನಿ ಲಕ್ನೋದ ಏಕನಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಇನಿಂಗ್ಸ್​ ಫಿನಿಶ್ ಮಾಡುವ ಸಮಯದಲ್ಲಿ ಗಮನಾರ್ಹ ಐಪಿಎಲ್ ಬ್ಯಾಟಿಂಗ್ ದಾಖಲೆ ನಿರ್ಮಿಸಿದ್ದರು.

2008 ರಲ್ಲಿ ಐಪಿಎಲ್​​ಗೆ ಪಾದಾರ್ಪಣೆ ಮಾಡಿದ ಎಂಎಸ್ ಧೋನಿ, 2024 ರಲ್ಲಿ ಎಲ್ಎಸ್​ಜಿ ವಿರುದ್ಧ ಒಂಬತ್ತು ಎಸೆತಗಳಲ್ಲಿ 28* ರನ್ ಗಳಿಸುವ ಮೂಲಕ ವಿಕೆಟ್ ಕೀಪರ್-ಬ್ಯಾಟರ್​​ ಆಗಿ ತಮ್ಮ ಪಂದ್ಯಾವಳಿಯ ವೃತ್ತಿಜೀವನದ 5,000 ನೇ ರನ್ ಗಳಿಸಿದರು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 257ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, 42 ವರ್ಷದ ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಸುಮಾರು 40 ರ ಅದ್ಭುತ ಸರಾಸರಿಯಲ್ಲಿ 5,169 ರನ್ ಗಳಿಸಿದ್ದಾರೆ.

ಇದಕ್ಕೂ ಮುನ್ನ ಸಿಎಸ್​ಕೆ ಆರಂಭಿಕ ಬ್ಯಾಟರ್​ ಅಜಿಂಕ್ಯ ರಹಾನೆ 36 ರನ್ ಗಳಿಸಿದರು. ಆದರೆ ರಚಿನ್ ರವೀಂದ್ರ, ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಬೇಗ ಔಟಾದರು. ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿ ರನ್​ ಗಳಿಸುವ ಜವಾಬ್ದಾರಿ ವಹಿಸಿಕೊಂಡರು. ಸಹ ಆಲ್ರೌಂಡರ್ ಮೊಯಿನ್ ಅಲಿ ಅವರಿಂದ ಹೆಚ್ಚಿನ ಸಹಾಯ ಸಿಕ್ಕಿತು.

ಇದನ್ನೂ ಓದಿ: MS Dhoni : ಸಿಎಸ್​ಕೆ ವಾರ್ಷಿಕೋತ್ಸವದಂದೇ 101 ಮೀಟರ್ ಸಿಕ್ಸರ್ ಬಾರಿಸಿದ ಧೋನಿ!

ಇನ್ನಿಂಗ್ಸ್ ನಲ್ಲಿ ಕೇವಲ ಎರಡು ಓವರ್ ಗಳು ಬಾಕಿ ಇರುವಾಗ ಮೊಯೀನ್ ಅವರನ್ನು ಆಯುಷ್ ಬದೋನಿ ಕ್ಯಾಚ್ ಹಿಡಿದು ಔಟ್ ಮಾಡಿದರು. ಎಂಎಸ್ ಧೋನಿ ಸಿಎಸ್ ಕೆ ತಂಡವನ್ನು 141-6 ರಿಂದ 176 ರನ್ ಗಳಿಗೆ ಮುನ್ನುಗ್ಗಿಸಿದರು.

KL Rahul : ಐಪಿಎಲ್​ನಲ್ಲಿ ಧೋನಿಯ ದಾಖಲೆಯೊಂದನ್ನು ಮುರಿದ ಕೆ. ಎಲ್ ರಾಹುಲ್​

ಲಕ್ನೋ: ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವಿನ ನಗೆ ಬೀರಿತು. ಎಲ್ಎಸ್​ಜಿ ನಾಯಕ ಆಕ್ರಮಣಕಾರಿ ಇನ್ನಿಂಗ್ಸ್ ಪ್ರಾರಂಭಿಸಿದರು. ಅವರ 82 ರನ್ ಗಳು ಎಲ್​​ಎಸ್​​ಜಿ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ರವೀಂದ್ರ ಜಡೇಜಾ ಅವರ ಅದ್ಭುತ ಕ್ಯಾಚ್​ನಿಂದಾಗಿ ಔಟ್ ಆಗುವ ಮೊದಲು ಅವರು 9 ಬೌಂಡರಿಗಳು ಮತ್ತು 3 ಸಿಕ್ಸರ್​ಗಳನ್ನು ಬಾರಿಸಿದ್ದರು.

Exit mobile version