Site icon Vistara News

IPL 2024 : ಅಪರೂಪಕ್ಕೆ ಧೋನಿಯನ್ನು ಹೊಗಳಿದ ಗೌತಮ್ ಗಂಭೀರ್​

MS Dhoni

ಚೆನ್ನೈ, : ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಐಪಿಎಲ್​ 2024ರ ಪಂದ್ಯಕ್ಕೂ (IPL 2024 ) ಮುನ್ನ ಗೌತಮ್ ಗಂಭೀರ್ ಅವರು ಎಂಎಸ್ ಧೋನಿ ಅವರನ್ನು ಶ್ಲಾಘಿಸಿದ್ದಾರೆ. 2012 ಮತ್ತು 2014ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಪ್ರಶಸ್ತಿ ಗೆಲ್ಲಲು ಗಂಭೀರ್ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದ ಅವಧಿಯಲ್ಲಿ ಕೆಕೆಆರ್ () ತಂಡ ಧೋನಿ ನೇತೃತ್ವದ ಸಿಎಸ್​ಕೆ ವಿರುದ್ಧ ಮುಖಾಮುಖಿಯಾಗಿದ್ದಾಗ ಬಿಗ್ ಫೈಟ್​ ನಡೆಯುತ್ತಿದ್ದವು. ಸೋಮವಾರ ನಡೆಯಲಿರುವ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್​​ನ ಇಬ್ಬರು ಐಕಾನ್​ಗಳು ತಮ್ಮ ತಂಡಗಳಿಗಾಗಿ ವಿಭಿನ್ನ ಪಾತ್ರಗಳನ್ನು ವಹಿಸಲಿದ್ದಾರೆ. ಏಕೆಂದರೆ ಗಂಭೀರ್ ಕೆಕೆಆರ್​​ಗೆ ಮೆಂಟರ್ ಆಗಿದ್ದರೆ ಆದರೆ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಕೆಆರ್ ಪರ ಆಡಲಿದ್ದಾರೆ.

ನಾನು ನಾಯಕನಾಗಿದ್ದಾಗ ಪ್ರತಿ ಬಾರಿಯೂ ಗೆಲ್ಲಲು ಬಯಸಿದ್ದೆ. ನನ್ನ ಮನಸ್ಸಿನಲ್ಲಿ ಬಹಳ ಸ್ಪಷ್ಟವಾಗಿತ್ತು. ನೀವು ಧೋನಿಯನ್ನು ಕೇಳಿದರೆ ಅವರೂ ಬಹುಶಃ ಅದೇ ಉತ್ತರವನ್ನು ನೀಡುತ್ತಾರೆ. ನಿಸ್ಸಂಶಯವಾಗಿ, ಎಂಎಸ್ ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ. 3 ಐಸಿಸಿ ಟ್ರೋಫಿಗಳನ್ನು ಗೆಲ್ಲುವ ಮೂಲಕ ಗರಿಷ್ಠ ಗೌರವ ಪಡೆದುಕೊಂಡಿದ್ದಾರೆ ,” ಎಂದು ಗಂಭೀರ್ ಸ್ಟಾರ್ ಸ್ಪೋಟ್ಸ್ಸ್​​ನ ಸಂದರ್ಶನದಲ್ಲಿ ಹೇಳಿದ್ದಾರೆ.

ಉತ್ತಮ ಫಿನಿಶರ್​

42 ವರ್ಷದ ಗಂಭೀರ್ ಅವರು ತಮ್ಮ ಆಟದ ದಿನಗಳಲ್ಲಿ ಧೋನಿ ಮತ್ತು ಅವರ ತಂಡದ ವಿರುದ್ಧ ಆಡುವುದನ್ನು ಸಾಕಷ್ಟು ಇಷ್ಟಪಟ್ಟಿದ್ದೆ ಎಂಬುದಾಗಿ ಹೇಳಿದರು ಧೋನಿ (MS Dhoni) ಕ್ರೀಸ್​ನಲ್ಲಿ ಇರುವವರೆಗೂ ಚೆನ್ನೈಗೆ ಗೆಲ್ಲುವ ಅವಕಾಶ ಇರುತ್ತದೆ ಎಂಬುದು ತಿಳಿದಿರುವ ವಿಷಯ ಎಂದು ಗಂಭೀರ್ ಹೊಗಳಿದ್ದಾರೆ.

ಇದನ್ನೂ ಓದಿ: IPL 2024 : ಪಂಜಾಬ್​ ಕಿಂಗ್ಸ್​ ತಂಡಕ್ಕೆ ಇಕ್ಕಟ್ಟು ; ಹರಿಯಾಣ ಕೋರ್ಟ್​ನಲ್ಲಿ ಬಿತ್ತು ಕೇಸು

” ಹೌದು, ಐಪಿಎಲ್​ನಲ್ಲಿ ಎಂಎಸ್​ ಧೋನಿ ತಂತ್ರಗಾರಿಕೆಯ ಮನಸ್ಥಿತಿ ಹೊಂದಿರುತ್ತಾರೆ. ಹೀಗಾಗಿ ಅವರ ವಿರುದ್ಧ ಆಡವಾಗ ಖುಷಿ ಎನಿಸುತ್ತಿತ್ತು. ಅವರು ತಂತ್ರಗಾರಿಕೆಯಲ್ಲಿ ತುಂಬಾ ನಿಪುಣ. ಸ್ಪಿನ್ನರ್​ಗಳನ್ನು ಹೇಗೆ ನಿಯಂತ್ರಿಸಬೇಕು, ಅವರ ವಿರುದ್ಧ ಫೀಲ್ಡಿಂಗ್​ ಹೇಗೆ ಹೊಂದಿಸಬೇಕು ಎಂದು ತಿಳಿದಿತ್ತು . ಅವರು ಎಂದಿಗೂ ಅವಕಾಶ ಬಿಟ್ಟುಕೊಡುವುದಿಲ್ಲ. 6 ಅಥವಾ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೂ ಆಟ ಮುಗಿಯುವ ತನಕ ಇರುತ್ತಿದ್ದರು. ಒಂದು ಓವರ್​ನಲ್ಲಿ 20 ರನ್​ಗಳ ಅಗತ್ಯವಿದ್ದರೂ, ಎಂಎಸ್ ಇದ್ದರೆ ಪಂದ್ಯ ಅವರ ಪರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅದೇ ಸಮಯದಲ್ಲಿ, ಸೂಪರ್ ಕಿಂಗ್ಸ್​​ ತಂಡಕ್ಕೆ ಸವಾಲೊಡ್ಡುವ ಬೌಲಿಂಗ್ ದಾಳಿಯನ್ನು ನಾನು ಹೊಂದಿದ್ದೇನೆ ಎಂದು ನನಗೆ ತಿಳಿದಿತ್ತು. ತಂತ್ರಗಾರಿಕೆಯು ಪ್ರತಿ ರಂಗದಲ್ಲೂ ಧೋನಿಗಿಂಥ ಉತ್ತಮವಾಗಿರಬೇಕು ಎಂದು ತಿಳಿದಿತ್ತು ಏಕೆಂದರೆ ಅವರು ಮೈದಾನದಲ್ಲಿ ಅಷ್ಟು ಆಕ್ರಮಣಕಾರಿಯಾಗಿಲ್ಲ, ಆದರೂ ಗೆಲುವು ಬಿಟ್ಟುಕೊಡುವುದಿಲ್ಲ ಎಂದು ತಿಳಿದಿತ್ತು. ಚೆನ್ನೈ ಆ ರೀತಿಯ ತಂಡವಾಗಿದೆ,. ಅವರ ವಿರುದ್ಧ ನೀವು ಕೊನೆಯ ಎಸೆತವನ್ನು ಎಸೆಯುವವರೆಗೂ ಗೆಲ್ಲುವುದಿಲ್ಲ ಎಂದು ಗಂಭೀರ್ ಧೋನಿಯನ್ನು ಕೊಂಡಾಡಿದರು.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸೋಮವಾರ ಎರಡು ಯಶಸ್ವಿ ಫ್ರಾಂಚೈಸಿಗಳನ್ನು ಪರಸ್ಪರ ಮುಖಾಮುಖಿಯಾಗಲಿವೆ. ಐಪಿಎಲ್ 2024 ರಲ್ಲಿ ಕೆಕೆಆರ್ ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿದ್ದರೆ, ತವರು ತಂಡವು ಸತತ ಎರಡು ಸೋಲುಗಳಿಂದ ಹೊರಬರಬೇಕಾಗಿದೆ.

Exit mobile version