Site icon Vistara News

MS Dhoni : ಸಿಎಸ್​​ಕೆಗೆ ನ್ಯಾಯ ಸಲ್ಲಿಸುವೆ; ಐಪಿಎಲ್ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ ಎಂಎಸ್​ ಧೋನಿ

MS Dhoni

ಬೆಂಗಳೂರು: ಭಾರತದ ಮಾಜಿ ನಾಯಕ ಮತ್ತು ಸಿಎಸ್ಕೆ ಸ್ಟಾರ್ ಎಂಎಸ್ ಧೋನಿ ಇತ್ತೀಚೆಗೆ ನಡೆದ ನಡೆದ ಕಾರ್ಯಕ್ರಮವೊಂದರಲ್ಲಿ ಐಪಿಎಲ್​ನಿಂದ​​ ನಿವೃತ್ತಿಯಾಗುವ ಕುರಿತು ಮಾಹಿತಿ ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಸಂಭಾವ್ಯ ನಿವೃತ್ತಿಯ ಬಗ್ಗೆ ಇನ್ನೂ ಯೋಚಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ತಮ್ಮ ನಿವೃತ್ತಿ ನಿರ್ಧಾರವು ಅಂತಿಮವಾಗಿ ಸಿಎಸ್​ಕೆ ದೊಡ್ಡ ಪ್ರಯೋಜನಕಾರಿ ಎಂದು ಅವರು ಹೇಳಿದ್ದಾರೆ. ಸಿಎಸ್​ಕೆ ತಮ್ಮ ಪ್ರೀತಿಯ ಫ್ರಾಂಚೈಸಿ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ. ಆದರೆ ಐಪಿಎಲ್​ನಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವು ಅವರನ್ನು ಫ್ರಾಂಚೈಸಿಯಲ್ಲಿ ಉಳಿಸಿಕೊಳ್ಳುವುದಕ್ಕೆ ಸಮಸ್ಯೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಅವರ ನಿವೃತ್ತಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿವೆ. ಧೋನಿ ಫ್ರಾಂಚೈಸಿಯ ಪ್ರಮುಖ ಭಾಗವಾಗಿದ್ದು ಮತ್ತು ಐದು ಐಪಿಎಲ್ ಪ್ರಶಸ್ತಿಗಳ ದಾಖಲೆಗೆ ತಂಡವನ್ನು ಮುನ್ನಡೆಸಿದ್ದಾರೆ.

ಐಪಿಎಲ್ 2024 ಕ್ಕೆ ಮುಂಚಿತವಾಗಿ ಸಿಎಸ್​ಕೆ ನಾಯಕತ್ವದಿಂದ ಕೆಳಗಿಳಿದು ಋತುರಾಜ್ ಗಾಯಕ್ವಾಡ್​ಗೆ ಹೊಣೆಗಾರಿಕೆ ಹಸ್ತಾಂತರಿಸಿದಾಗಿನಿಂದ ಧೋನಿ ಅವರ ನಿವೃತ್ತಿಯ ವಿಷಯವು ಚರ್ಚೆಯಲ್ಲಿದೆ. 2023 ರಲ್ಲಿ ಸಿಎಸ್​ಕೆ ತನ್ನ ಐದನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಭಾರತೀಯ ಕ್ರಿಕೆಟ್ ಅಭಿಮಾನಿಗಳು 2024 ರ ಋತುವು ಎಂಎಸ್ ಧೋನಿ ಅವರ ಕೊನೆಯ ಸೀಸನ್ ಎಂದು ನಿರೀಕ್ಷಿಸಿದ್ದರು. ಆದಾಗ್ಯೂ, ಧೋನಿ ತಮ್ಮ ಸಂಭಾವ್ಯ ನಿವೃತ್ತಿ ಬಗ್ಗೆ ಯಾವುದೇ ಸ್ಪಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ. 2025ರಲ್ಲಿ ಮತ್ತೊಂದು ಬಾರಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

“ಐಪಿಎಲ್ ತಂಡಗಳಲ್ಲಿ ಆಟಗಾರರನ್ನು ಉಳಿಸಿಕೊಳ್ಳುವಿಕೆ ನಿಯಮಗಳು ಪ್ರಕಟವಾಗಬೇಕಾಗಿದೆ. ಎಲ್ಲವನ್ನೂ ನಿರ್ಧರಿಸಲು ಫ್ರಾಂಚೈಸಿಗಳು ಮತ್ತು ಮ್ಯಾನೇಜ್ಮೆಂಟ್​ಗೆ ಸಾಕಷ್ಟು ಸಮಯ ಉಳಿದಿದೆ. ಆದ್ದರಿಂದ ವಿವರಗಳು ಸ್ಪಷ್ಟವಾದ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸದ್ಯ ನಮ್ಮ ಅಂಗಳದಲ್ಲಿ ಚೆಂಡು ಇಲ್ಲ. ನಿಯಮಗಳನ್ನು ಆಧರಿಸಿ ಎಲ್ಲವೂ ನಡೆಯಲಿದೆ. ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅಂತಿಮವಾಗಿ ಸಿಎಸ್​ಕೆ ಪರವಾಗಿ ಉತ್ತಮವಾದ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಾಗುತ್ತದೆ. ಅದುವೇ ಅಂತಿಮ ಗುರಿ” ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Swapnil Kusale : ರೈಲ್ವೆ ಟಿಕೆಟ್​ ಕಲೆಕ್ಟರ್​ ಈಗ ಒಲಿಂಪಿಕ್​ ಹೀರೊ; ಧೋನಿಯಂತೆಯೇ ಸಾಧನೆ ಮಾಡಿ ಕಂಚು ಗೆದ್ದ ಶೂಟರ್​ ಸ್ವಪ್ನಿಲ್ ಕುಸಾಲೆ

ರುತುರಾಜ್ ಅವರ ನಾಯಕತ್ವದಲ್ಲಿ, ಸಿಎಸ್ಕೆ ಐಪಿಎಲ್ 2024 ರ ಪ್ಲೇ-ಆಫ್ಗೆ ಅರ್ಹತೆ ಪಡೆಯಲು ವಿಫಲವಾಯಿತು. 27 ವರ್ಷದ ರುತುರಾಜ್ ಫ್ರಾಂಚೈಸಿಯ ಮೊದಲ ನಾಯಕತ್ವದ ಬಗ್ಗೆ ಯಾವುದೇ ರೀತಿಯ ಪ್ರಶಂಸೆಗಳನ್ನು ಪಡೆಯಲಿಲ್ಲ. . ಪಂದ್ಯಗಳ ಮಧ್ಯದಲ್ಲಿ ಧೋನಿ ರುತುರಾಜ್​ಗೆ ಮಾರ್ಗದರ್ಶನ ನೀಡಿದ ಹಲವಾರು ಸಂದರ್ಭಗಳಿವೆ. ಇದು ರುತುರಾಜ್ ಫ್ರಾಂಚೈಸಿಯ ದೀರ್ಘಕಾಲೀನ ನಾಯಕ ಎಂಬ ವಿವರವನ್ನು ಸ್ಪಷ್ಟವಾಗಿಸಿದೆ.

Exit mobile version