ಬೆಂಗಳೂರು: ಎಂಎಸ್ ಧೋನಿ (MS Dhoni ) ಕ್ರಿಕೆಟ್ ಮೈದಾನದ ಒಳಗೆ ಮತ್ತು ಹೊರಗೆ ಅಪರೂಪದ ನಡವಳಿಕೆಗೆ ಹೆಸರುವಾಸಿಯಾಗಿದ್ದಾರೆ. ಮೈದಾನದಲ್ಲಿ ಒತ್ತಡದ ಸಂದರ್ಭಗಳಲ್ಲಿಯೂ ಅವರ ತಣ್ಣಗೆ ಇರುವುದರಿಂದ ಕ್ಯಾಪ್ಟನ್ ಕೂಲ್ ಎಂದೇ ಕರೆಯುತ್ತಾರೆ. ಹೀಗಾಗಿ ಅವರ ನಾಯಕತ್ವದಲ್ಲಿ ಭಾರತ ನಂ.1 ಸ್ಥಾನ ಪಡೆದುಕೊಂಡಿತ್ತು. ಇಂಥ ಧೋನಿ ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಗಾಗಿ ಸುದ್ದಿಯಲ್ಲಿರುತ್ತಾರೆ. ಹೇರ್ಸ್ಟೈಲ್, ಸೂಪರ್ ಬೈಕ್ ಸವಾರಿ ಸೇರಿದಂತೆ ವಿಭಿನ್ನ ರೂಪದಲ್ಲಿ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಇದೀಗ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ವೇಳೆ ಬಿಂದಾಸ್ ಆಗಿ ಕುಣಿಯುವ ಮೂಲಕ ಮತ್ತೊಂದು ಬಾರಿ ಸುದ್ದಿಗೆ ಬಂದಿದ್ದಾರೆ.
#WATCH | Celebrities groove at Anant Ambani-Radhika Merchant's wedding ceremony in Mumbai pic.twitter.com/SA7cb6h2dT
— ANI (@ANI) July 13, 2024
ಅನಂತ್ ಅಂಬಾನಿ ಮದುವೆಯಲ್ಲಿ ಧೋನಿ ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೊದಲ್ಲಿ ವೀಡಿಯೊದಲ್ಲಿ ಸಾಕ್ಷಿ ಮತ್ತು ಝಿವಾ ಕಾಣಿಸದಿದ್ದರೂ, ಧೋನಿ ಕೂಲ್ ಡಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ.
MS Dhoni dancing with Ishant Kishan. 😄❤️pic.twitter.com/neWObVSX9b
— Mufaddal Vohra (@mufaddal_vohra) July 13, 2024
ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ, ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಕುಣಿದಿದ್ದರು. ಸೆಲೆಬ್ರಿಟಿಗಳಲ್ಲಿ ಕ್ರಿಕೆಟಿಗರ ಜೊತೆಗೆ ಬಾಲಿವುಡ್ ಮತ್ತು ಹಾಲಿವುಡ್ ತಾರೆಯರು ಸೇರಿಕೊಂಡಿದ್ದರು. ಅವರ ನಡುವೆ ಧೋನಿ ತಮ್ಮ ವಿಶಿಷ್ಟ ಸ್ಟೆಪ್ಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಕ್ರಿಕೆಟಿಗರಲ್ಲಿ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಅವರು ಎಂಎಸ್ ಧೋನಿ ಅವರೊಂದಿಗೆ ಡಾನ್ಸ್ ಮಾಡಿದ್ದಾರೆ. ಎಂಎಸ್ ಧೋನಿ. ಪತ್ನಿ ಸಾಕ್ಷಿ ಧೋನಿ ಮತ್ತು ಕ್ರಿಕೆಟಿಗ ಇಶಾನ್ ಕಿಶನ್ ಅವರೊಂದಿಗೆ ನೃತ್ಯ ಮಾಡುತ್ತಿರುವ ಮತ್ತೊಂದು ವೀಡಿಯೊ ವೈರಲ್ ಆಗಿದೆ.
ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಯಜುವೇಂದ್ರ ಚಾಹಲ್ ವಿವಾಹ ಸಮಾರಂಭದಲ್ಲಿ ಹಾಜರಿದ್ದರು.
ಖುಷಿಯಲ್ಲಿರುವ ಭಾರತದ ಆಟಗಾರರು
ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಲ್ ಕಳೆದ ತಿಂಗಳು ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆದ ಟಿ 20 ವಿಶ್ವಕಪ್ 2024 ಅನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು. ಬಾರ್ಬಡೋಸ್ನಲ್ಲಿ ನಡೆದ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತ ಪ್ರಶಸ್ತಿ ಗೆದ್ದುಕೊಂಡಿತು. ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ.
ಇದನ್ನೂ ಓದಿ: T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ; ತೆರೆಮರೆಯಲ್ಲಿ ಜೋರು ಚರ್ಚೆ
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 3 ವಿಕೆಟ್ಗಳನ್ನು 20 ರನ್ ವೆಚ್ಚದಲ್ಲಿ ಪಡೆದಿದ್ದರು. ನಿರ್ಣಾಯಕ ಕೊನೆಯ ಓವರ್ ಎಸೆದು 16 ರನ್ಗಳನ್ನು ರಕ್ಷಿಸಿದ್ದರು. ಅವರು ಹೆನ್ರಿಕ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಅವರಂತಹ ಅಪಾಯಕಾರಿ ಆಟಗಾರರ ವಿಕೆಟ್ ಪಡೆದಿದ್ದರು.
ಸೂರ್ಯಕುಮಾರ್ ಯಾದವ್ ಕೂಡ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್ 8 ಪಂದ್ಯಗಳಲ್ಲಿ 199 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನ, ಯುಎಸ್ಎ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಇನಿಂಗ್ಸ್ ಆಡಿದ್ದಾರೆ. ಆದರೆ ಪಂದ್ಯಾವಳಿಯ ಕೊನೆಯ ಓವರ್ನಲ್ಲಿ ಅವರು ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಲು ಕಠಿಣ ಕ್ಯಾಚ್ ತೆಗೆದುಕೊಂಡಿದ್ದರು. ಮಿಲ್ಲರ್ ಅವರ ವಿಕೆಟ್ ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿತ್ತು.
ಜಸ್ಪ್ರೀತ್ ಬುಮ್ರಾ 8 ಪಂದ್ಯಗಳಲ್ಲಿ 8.26 ಸರಾಸರಿ ಮತ್ತು 4.17 ಅಸಾಧಾರಣ ಎಕಾನಮಿ ರೇಟ್ಗಳಲ್ಲಿ 15 ವಿಕೆಟ್ ಪಡೆದರು. ಬುಮ್ರಾ ಅವರ ವೀರೋಚಿತ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದಿದ್ದರು.