ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) ಋತುವಿನಲ್ಲಿ ಎಂಎಸ್ ಧೋನಿ (MS Dhoni) ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವುದಕ್ಕೆ ಕಾರಣವನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಬಹಿರಂಗಪಡಿಸಿದ್ದಾರೆ. ಎಂಎಸ್ ಧೋನಿ ಸ್ನಾಯು ಗಾಯದಿಂದ ಬಳಲುತ್ತಿದ್ದಾರೆ, ಇದು ಐಪಿಎಲ್ 2024 ರಲ್ಲಿ ಭಾಗವಹಿಸುವ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಹೀಗಾಗಿ ಅವರು ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ವಿಕೆಟ್ಗಳ ನಡುವೆ ರನ್ಗಾಗಿ ಹೆಚ್ಚು ಓಡುತ್ತಿಲ್ಲ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ಧೋನಿಯನ್ನು ನೋಡುವುದು ಐಪಿಎಲ್ ಅಭಿಮಾನಿಗಳಿಗೆ ದೊಡ್ಡ ವಿಷಯ. ಹೀಗಾಗಿ ಅವರು ಆಡುತ್ತಿದ್ದಾರೆ ಎಂಬುದೇ ಅವರ ಮಾತಿನ ಸಾರಾಂಶ.
MS Dhoni is ready for the hunt!! 🦁💛
— DIPTI MSDIAN (@Diptiranjan_7) May 10, 2024
Match Day!! Go Well @ChennaiIPL . pic.twitter.com/9ySgfpCMMU
ನಾಯಕ ಸ್ಥಾನದಿಂದ ಕೆಳಗಿಳಿದರೂ ಎಂಎಸ್ ಧೋನಿ ಸಿಎಸ್ಕೆ ತಂಡದ ನಿರ್ಣಾಯಕ ಸದಸ್ಯರಾಗಿ ಉಳಿದಿದ್ದಾರೆ. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ 9 ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದಿದ್ದರು. 42 ವರ್ಷದ ಕ್ರಿಕೆಟಿಗ ಹಾಲಿ ಆವೃತ್ತಿಯಲ್ಲಿ 55 ಸರಾಸರಿಯಲ್ಲಿ 110 ರನ್ ಗಳಿಸಿದ್ದಾರೆ ಮತ್ತು 224.49 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ ಪ್ರಸ್ತುತ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಏಳು ಇನ್ನಿಂಗ್ಸ್ಗಳಲ್ಲಿ ಔಟಾಗದೆ ಉಳಿದಿದ್ದರು. ಪಂಜಾಬ್ ಕಿಂಗ್ಸ್ ವಿರುದ್ಧದ ತವರು ಪಂದ್ಯದ ವೇಳೆ ಬಲಗೈ ಬ್ಯಾಟರ್ ರನೌಟ್ ಆಗಿದ್ದರು. ಧೋನಿ ತಮ್ಮ ಇತ್ತೀಚಿನ ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್ ಆಗಿದ್ದರು. ಅವರು ಋತುವಿನಾದ್ಯಂತ ಸ್ಟಂಪ್ ಗಳ ಹಿಂದೆ ಉತ್ತಮ ಕೆಲಸ ಮಾಡಿದ್ದಾರೆ.
ಎಂಎಸ್ ಧೋನಿಯ ಕೆಲಸದ ಹೊರೆಯನ್ನು ನಿರ್ವಹಿಸುತ್ತಿದ್ದೇವೆ – ಸ್ಟೀಫನ್ ಫ್ಲೆಮಿಂಗ್
ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್, ಇಡೀ ಪಂದ್ಯಾವಳಿಗೆ ಅವರ ಲಭ್ಯತೆಯನ್ನು ಉಳಿಸಿಕೊಳ್ಳುವುದಕ್ಕೆ ಎಂಎಸ್ ಧೋನಿ ಅವರ ಕೆಲಸದ ಹೊರೆಯನ್ನು ನಿರ್ವಹಿಸಬೇಕಾಗಿದೆ. ಡೆತ್ ಓವರ್ಗಳಲ್ಲಿ ಧೋನಿ ಬ್ಯಾಟ್ನೊಂದಗೆ ನೀಡಬಹುದಾದ ಕೊಡುಗೆ ಸಮತೋಲನವನ್ನು ಕಂಡುಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಇದನ್ನೂ ಓದಿ: IPL 2024 : ಸುನಿಲ್ ಗವಾಸ್ಕರ್ ಮತ್ತು ಹರ್ಷ ಭೋಗ್ಲೆ ವಿರುದ್ಧ ವಿರಾಟ್ ಕೊಹ್ಲಿ ವಾಗ್ದಾಳಿ
ನಾವು ಅವರ ಕೆಲಸದ ಹೊರೆಯನ್ನು ನಿರ್ವಹಿಸುತ್ತಿದ್ದೇವೆ. ಇದು ಅಪಾಯಕಾರಿ ಮತ್ತು ಋತುವಿನ ಆರಂಭದಲ್ಲಿ ಸ್ವಲ್ಪ ಸ್ನಾಯು ಸೆಳೆತವನ್ನುಅ ನುಭವಿಸಿದ್ದಾರೆ. ಅವರು ಹೆಚ್ಚು ಸಮಯ ಬ್ಯಾಟಿಂಗ್ ಮಾಡಿದರೆ ನಾವು ಅವರನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತೇವೆ. ಆದ್ದರಿಂದ ನಾವು ಆ ಸಮತೋಲನವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಧೋನಿ ಕೇವಲ ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವ ಮೂಲಕ ಪಂದ್ಯದ ಮೇಲೆ ಪರಿಣಾಮ ಬೀರುತ್ತಿದ್ದಾರೆಎಂದು ಫ್ಲೆಮಿಂಗ್ ಹೇಳಿದರು.
ಎಚ್ಚರಿಕೆ ಅಗತ್ಯ
ಈ ಋತುವಿನಲ್ಲಿ ಎಂಎಸ್ ಧೋನಿ ಅವರ ಕೆಲಸದ ಹೊರೆಯನ್ನು ಟೀಮ್ ಮ್ಯಾನೇಜ್ಮೆಂಟ್ ನಿರ್ವಹಿಸುವ ಅಗತ್ಯವಿದೆ ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ. ಅಂತಿಮ ಓವರ್ಗಳಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮದ ಜೊತೆಗೆ ಹೊಸ ನಾಯಕ ಋತುರಾಜ್ ಗಾಯಕ್ವಾಡ್ಗೆ ಧೋನಿ ತಂತ್ರಗಾರಿಕೆಯ ಸಲಹೆಯನ್ನು ನೀಡುತ್ತಿದ್ದಾರೆ. ಅವರು ಎಲ್ಲ ರೀತಿಯಲ್ಲೂ ತಂಡಕ್ಕೆ ಅಗತ್ಯ ಎಂದು ಅವರು ಹೇಳಿದರು.
ಕಳೆದ ವರ್ಷ ಅವರು ಎದುರಿಸಿದ ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಆದರೂ ಅದು ಅವರನ್ನು ಸಾಕಷ್ಟು ದುರ್ಬಲಗೊಳಿಸಿದೆ. ಈ ವರ್ಷ ಅವರು ನಿರ್ವಹಿಸಬಹುದಾದ ಒಂದು ನಿರ್ದಿಷ್ಟ ಕೆಲಸದ ಹೊರೆ ಇರುತ್ತದೆ ಎಂದು ನಾವು ಮೊದಲೇ ಹೇಳಿದ್ದೇವೆ. ನಮ್ಮಲ್ಲಿ ಬ್ಯಾಕ್ಅಪ್ ಕೀಪರ್ಗಳು ಇದ್ದಾರೆ. ಆದಾಗ್ಯೂ ಎಂಎಸ್ ಧೋನಿಯನ್ನು ಮೈದಾನದಲ್ಲಿ ಇರಿಸಲು ಬಯಸುತ್ತೇವೆ. ಬ್ಯಾಟಿಂಗ್ನಲ್ಲಿ ನಾಲ್ಕು ಓವರ್ಗಳು ಮತ್ತು ಅವರ ಕೀಪಿಂಗ್ ಮತ್ತು ಹೊಸ ನಾಯಕನೊಂದಿಗೆ ಕಾರ್ಯತಂತ್ರದ ಸಲಹೆಯನ್ನು ನೀಡುತ್ತಿದ್ದಾರೆ, “ಎಂದು ಫ್ಲೆಮಿಂಗ್ ಹೇಳಿದರು.
ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು ಪ್ರಸ್ತುತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.700 ನೆಟ್ ರನ್ ರೇಟ್ (ಎನ್ಆರ್ಆರ್) ಹೊಂದಿದೆ. ಮೇ 10ರಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ ಮೂಲದ ತಂಡವು ಪಂದ್ಯಾವಳಿಯಲ್ಲಿ ಸ್ಥಾನ ಪಡೆಯಲು ಉಳಿದಿರುವ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಬೇಕಾಗಿದೆ.