Site icon Vistara News

Lok Sabha: ಲೋಕಸಭೆಯಲ್ಲಿ ಸಹಕಾರಿ ಸೊಸೈಟಿಗಳ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ

Amit shah

ನವದೆಹಲಿ: ಸಂಸತ್ತಿನ ಲೋಕಸಭೆಯಲ್ಲಿ (Lok Sabha) ಬಹು ರಾಜ್ಯ ಸಹಕಾರಿ ಸೊಸೈಟಿಗಳ (ತಿದ್ದುಪಡಿ) ಬಿಲ್ ಮಂಡಿಸಿ ಒಪ್ಪಿಗೆ ಪಡೆಯಲಾಗಿದೆ(Multi-State Cooperative Societies bill). ಕೇಂದ್ರ ಸಹಕಾರ ಸಚಿವ ಅಮಿತ್ ಶಾ (Co Operative Minister Amit Shah) ಅವರು ವಿಧೇಯಕವನ್ನು ಮಂಡಿಸಿದರು. ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಒಪ್ಪಿಗೆಯನ್ನು ಪಡೆಯಲಾಯಿತು. ಈ ಹೊಸ ವಿಧೇಯಕವು ಸಹಕಾರ ವಲಯದಲ್ಲಿ ಹೊಸ ಶೆಕೆಗೆ ಕಾರಣವಾಗಲಿದೆ. ಸಹಕಾರ ಸಂಸ್ಥೆಗಳ ಸುಧಾರಣೆಯನ್ನು ಈ ಹಿಂದಿನ ಸರ್ಕಾರವು ಕಡೆಗಣಿಸಿದ್ದವು. ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ನಿಯಮಿತವಾಗಿ ಚುನಾವಣೆ ನಡೆಸುವ ವ್ಯವಸ್ಥೆಗೆ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಅಮಿತ್ ಶಾ ಅವರು ಹೇಳಿದರು.

ಪ್ರಮುಖ ವಿಧೇಯಕ ಮೇಲೆ ಅಷ್ಟೇನೂ ಚರ್ಚೆಯಾಗಲಿಲ್ಲ. ಕೇವಲ ಮೂವರು ಮಾತ್ರ ಈ ಬಿಲ್ ಕುರಿತು ಮಾತನಾಡಿದರು. ಮಣಿಪುರ ಹಿಂಸಾಚಾರ ಕುರಿತು ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳು ಗಲಾಟೆ ಮಾಡುತ್ತಿದ್ದವು. ಈ ವೇಳೆ, ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಈ ವಿಧೇಯಕಕ್ಕೆ ಲೋಕಸಭೆಯು ಧ್ವನಿ ಮತದ ಮೂಲಕ ತನ್ನ ಒಪ್ಪಿಗೆಯನ್ನು ನೀಡಿತು.

ಈ ಸುದ್ದಿಯನ್ನೂ ಓದಿ: Opposition Meet: ಪಾಟ್ನಾದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು; ‘ಫೋಟೋ ಸೆಷನ್​’ ಎಂದು ಕಾಲೆಳೆದ ಅಮಿತ್ ಶಾ

ಬಹು ರಾಜ್ಯ ಸಹಕಾರಿ ಸೊಸೈಟಿಗಳ (ತಿದ್ದುಪಡಿ) ಬಿಲ್‌ಗೆ ಲೋಕಸಭೆಯಲ್ಲಿ ಒಪ್ಪಿಗೆ ಪಡೆಯುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು ಸದನ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದರು. ಮಳೆಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಈವರೆಗೂ ಸುಗಮ ಕಲಾಪ ನಡೆದಿಲ್ಲ. ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ಆದರೆ, ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಬೇಡಿಕೆ ಮಣಿದಿಲ್ಲ. ಈ ಮಧ್ಯೆ, ಮಣಿಪುರ ಹಿಂಸಾಚಾರ ಕುರಿತು ಚರ್ಚೆಗೆ ಸಿದ್ಧ ಎಂದು ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷಗಳ ಸದಸ್ಯರಿಗೆ ಪತ್ರ ಬರೆದು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version