Site icon Vistara News

Murali Kartik : ಆರ್​ಸಿಬಿ ಆಟಗಾರನನ್ನು ಕಸ ಎಂದು ಕರೆದ ಮುರಳಿ ಕಾರ್ತಿಕ್​, ಜಾಡಿಸಿದ ಆರ್​ಸಿಬಿ ಫ್ಯಾನ್ಸ್​

Yash Dayal 1

ನವದೆಹಲಿ: ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವೇಗಿ ಯಶ್ ದಯಾಳ್ (Yash Dayal) ಬಗ್ಗೆ ಕ್ರಿಕೆಟಿಗ ಮತ್ತು ವೀಕ್ಷಕವಿವರಣೆಗಾರ ಮುರಳಿ ಕಾರ್ತಿಕ್ ವಿಲಕ್ಷಣ ಕಾಮೆಂಟ್ ಮಾಡಿದ್ದಾರೆ. ಅವರನ್ನು ಬೇರೊಬ್ಬರ ಕಸ ಎಂದು ಕರೆಯುವ ಮೂಲಕ ಅವಮಾನ ಮಾಡಿದ್ದಾರೆ. ಇದು ಆರ್​ಸಿಬಿ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಮಾಜಿ ಆಟಗಾರನನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ 6 ನೇ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ ಐಪಿಎಲ್ 2024 ರಲ್ಲಿ ಯಶ್ ದಯಾಳ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ವೇಗದ ಬೌಲರ್ ಹೊಸ ಚೆಂಡಿನೊಂದಿಗೆ ಮಿಂಚುತ್ತಿದ್ದಾರೆ ಮತ್ತು ಚೆಂಡನ್ನು ಸ್ವಿಂಗ್ ಮಾಡುತ್ತಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲಿ ಎದುರಾಳಿಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಯಶ್ ದಯಾಳ್. ಅವರು ಶಿಖರ್ ಧವನ್ ಮತ್ತು ಜಾನಿ ಬೈರ್ಸ್ಟೋವ್ ಅವರಂತಹ ಅನುಭವಿ ಬ್ಯಾಟರ್​ಗಳನ್ನು ತಮ್ಮ ಸ್ವಿಂಗ್ ಬೌಲಿಂಗ್​ನಿಂದ ಯಾಮಾರಿಸಿ ಔಟ್ ಮಾಡಿದ್ದಾರೆ. ಎಡಗೈ ವೇಗಿ ಚೆಂಡನ್ನು ಎರಡೂ ದಿಕ್ಕುಗಳಲ್ಲಿ ಸ್ವಿಂಗ್ ಮಾಡುವ ಮೂಲಕ ಎದುರಾಳಿಗಳಿಗೆ ಸಮಸ್ಯೆ ಒಡ್ಡಿದ್ದು ನಿಜವಾಗಿದೆ.

ಯಶ್ ದಯಾಳ್ ಆರಂಭದಲ್ಲಿ ಸ್ವಿಂಗ್ ಬಾಲ್ ಮೂಲಕ ಮಿಂಚುತ್ತಿದ್ದಂತೆ, ವೀಕ್ಷಕವಿವರಣೆಗಾರ ಮುರಳಿ ಕಾರ್ತಿಕ್ ವೇಗದ ಬೌಲರ್ ಬಗ್ಗೆ ಆಘಾತಕಾರಿ ಕಾಮೆಂಟ್ ಮಾಡಿದ್ದಾರೆ. ವೇಗದ ಬೌಲರ್ ಆರ್​ಸಿಬಿಗೆ ನಿಧಿ ಸಿಕ್ಕಂತಾಗಿದೆ. ಬೇರೊಂದು ತಂಡಕ್ಕೆ ಅವರು ಕಸದ ರಾಶಿಯಾಗಿದ್ದರು ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ಹೀಗಿದೆ. “ಯಾರದೋ ಕಸವು ಬೇರೊಬ್ಬರ ನಿಧಿಯಾಗಿದೆ”.

ಗುಜರಾತ್ ಪರ ಆಡಿದ್ದ ದಯಾಳ್​

ಮುರಳಿ ಕಾರ್ತಿಕ್ ಅವರ ಕಾಮೆಂಟ್​ಗಳು ಯಶ್ ದಯಾಳ್ ಈ ಹಿಂದಿನ ಗುಜರಾತ್ ಟೈಟಾನ್ಸ್ ಪರ ಆಡದ ವಿವರಣೆಯಾಗಿದೆ. ವೇಗದ ಬೌಲರ್ ಕಳೆದ ವರ್ಷ ಶುಭ್ಮನ್ ಗಿಲ್ ನೇತೃತ್ವದ ತಂಡದ ಭಾಗವಾಗಿದ್ದರು ಮತ್ತು ಕಳೆದ ವರ್ಷ ಅವರು ಚೆಂಡಿನೊಂದಿಗೆ ಉತ್ತಮ ಋತು ಹೊಂದಿದ್ದರು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಅವರು ಸಾಕಷ್ಟು ಒತ್ತಡಕ್ಕೆ ಒಳಗಾಗಿ ಕೊನೇ ಹಂತದಲ್ಲಿ ಐದು ಸಿಕ್ಸರ್​ಗಳನ್ನು ರಿಂಕು ಸಿಂಗ್​ಗೆ ಬಿಟ್ಟುಕೊಟ್ಟಿದ್ದರು. ಅದೇ ಮಾತನ್ನು ಹೇಳು ಹೋದ ಕಾರ್ತಿಕ್ ಕಸ ಎಂದಿದ್ದಾರೆ.

ಯಶ್ ದಯಾಳ್​ ಅವರನ್ನು ಮಿನಿ ಹರಾಜಿಗಿಂತ ಮೊದಲು ಗುಜರಾತ್ ತಂಡ ಕೈ ಬಿಟ್ಟಿತ್ತು. ಬಳಿಕ ಆರ್​ಸಿಬಿ 5 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದೆ.

Exit mobile version