ವಾಂಖೆಡೆ : ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ (Ranji Trophy) ಪಂದ್ಯದಲ್ಲಿ ಅಂಡರ್ 19 ವಿಶ್ವ ಕಪ್ ತಾರೆ ಮುಶೀರ್ ಖಾನ್ (Musheer Khan) ಅವರ ಅಮೋಘ ಶತಕ ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಅವರ ಉಪಯುಕ್ತ ಅರ್ಧಶತಕದ ನೆರವಿನಿಂದ ಮುಂಬೈ ತಂಡ ವಿದರ್ಭ ತಂಡಕ್ಕೆ 537 ರನ್ಗಳ ಗೆಲುವಿನ ಗುರಿ ನೀಡಿದೆ. ಪ್ರತಿಯಾಗಿ ಆಡುತ್ತಿರುವ ವಿದರ್ಭ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ ಮಾಡಿದ್ದು. ಅಥರ್ವ ತೈಡೆ (3) ಮತ್ತು ಧ್ರುವ್ ಶೋರೆ (7) ಆಟ ಮುಂದುವರಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ 224 ರನ್ ಗಳಿಸಿದ್ದ 41 ಬಾರಿಯ ರಣಜಿ ಚಾಂಪಿಯನ್ ಮುಂಬೈ, ವಿದರ್ಭ ತಂಡವನ್ನು 105 ರನ್ಗಳಿಗೆ ಆಲ್ಔಟ್ ಮಾಡಿತ್ತು. ಈ ಮೂಲಕ 119 ರನ್ಗಳ ಮುನ್ನಡೆ ಪಡೆದಿತ್ತು. ಸೋಮವಾರ ಎರಡನೇ ದಿನದ ಅಂತ್ಯಕ್ಕೆ ಮುಂಬೈ ಮುಶೀರ್ ಖಾನ್ (51) ಮತ್ತು ನಾಯಕ ಅಜಿಂಕ್ಯ (58) ಅವರ ಜತೆಯಾಟದ ಮೂಲಕ 2 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು ಹಾಗೂ 260 ರನ್ಗಳ ಮುನ್ನಡೆ ಸಾಧಿಸಿತ್ತು. ಅದಾದ ಬಳಿಕ ಮುಂಬೈ 54.2 ಓವರ್ಗಳಲ್ಲಿ 150 ರನ್ಗಳ ಗಡಿ ದಾಟಿತು. ನಾಯಕ ರಹಾನೆ ಅವರನ್ನು ಹರ್ಷ್ ದುಬೆ ಔಟ್ ಮಾಡಿದರು. ತಮ್ಮ ಹಿಂದಿನ ದಿನದ ಮೊತ್ತಕ್ಕೆ 23 ರನ್ಗಳನ್ನು ಸೇರಿಸಿದರು. ಅವರು 143 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 73 ರನ್ ಗಳಿಸಿ ನಿರ್ಗಮಿಸಿದರು.
HUNDRED IN RANJI TROPHY FINAL….!!!!
— Johns. (@CricCrazyJohns) March 12, 2024
– Musheer Khan is just 19 years old. 🤯🔥pic.twitter.com/2xfxleYI9R
ಶ್ರೇಯರ್ ಉತ್ತಮ ಆಟ
ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಮುಂಬಯಿ ಬ್ಯಾಟರ್ ಶ್ರೇಯಸ್ ಅಯ್ಯರ್ ಈ ಬಾರಿ ಅವಕಾಶ ನಷ್ಟ ಮಾಡಿಕೊಳ್ಳಲಿಲ್ಲ. ಅರ್ಧ ಶತಕ ಬಾರಿಸಿ ಟೀಕಾಕಾರರಿಗೆ ಉತ್ತರ ನೀಡಿದರು. ಅಯ್ಯರ್ ಆರಂಭದಿಂದಲೇ ತಮ್ಮ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಆಡಿದರು. ಆದರೆ, ಮುಶೀರ್ ಇನ್ನೊಂದು ತುದಿಯನ್ನು ಸ್ಥಿರವಾಗಿ ಬ್ಯಾಟ್ ಬೀಸಿದರು. ಯಶ್ ಠಾಕೂರ್ ಎಸೆತದಲ್ಲಿ ಅಯ್ಯರ್ ಬೌಂಡರಿ ಬಾರಿಸಿದ ನಂತರ ಮುಂಬೈ 71 ಓವರ್ಗಳಲ್ಲಿ 200 ರನ್ಗಳ ಗಡಿ ದಾಟಿತು. ಜತೆಗೆ ಅಯ್ಯರ್ 62 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು.
ಮುಂಬೈ 82.3 ಓವರ್ಗಳಲ್ಲಿ 250 ರನ್ಗಳ ಗಡಿ ದಾಟಿತು. ಈ ವೇಳೆ ಅಯ್ಯರ್, ಮುಶೀರ್ ಜೋಡಿ 157 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿದರು.
ಇದನ್ನೂ ಓದಿ : IPL 2024 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಗಳು
255 ಎಸೆತಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಎರಡನೇ ಶತಕ ಬಾರಿಸಿದ ಮುಶೀರ್, ಬೃಹತ್ ಪಂದ್ಯದಲ್ಲಿ ಮತ್ತೊಂದು ಗುಣಮಟ್ಟದ ಶತಕ ಬಾರಿಸಿದರು. ಈ ವೇಳೆ ಅವರು ಆರು ಬೌಂಡರಿಗಳನ್ನು ಬಾರಿಸಿದ್ದರು. ಇವರಿಬ್ಬರ ನಡುವಿನ 168 ರನ್ಗಳ ಜತೆಯಾಟವು ಅಯ್ಯರ್ ಅವರನ್ನು ಆದಿತ್ಯ ಠಾಕರೆ ಔಟ್ ಮಾಡುವ ಮೂಲಕ ಕೊನೆಗೊಂಡಿತು. 111 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದ ಅಯ್ಯರ್ 95 ರನ್ಗೆ ಔಟಾಗಿ 5 ರನ್ಗಳಿಂದ ಶತಕ ವಂಚಿತರಾದರು.
ಸತತ ವಿಕೆಟ್ಗಳ ಪತನ
ಅಯ್ಯರ್ ಔಟಾದ ನಂತರ, ಮುಂಬೈ ತಂಡ ಸತತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ಮುಶೀರ್ 326 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 136 ರನ್ಗಳಿಗೆ ದುಬೆಗೆ ಎಸೆತಕ್ಕೆ ಔಟಾದರು. ಮೊದಲ ಇನಿಂಗ್ಸ್ಗಳಲ್ಲಿ 75 ರನ್ ಗಳಿಸಿದ್ದ ಶಾರ್ದೂಲ್ ಠಾಕೂರ್ ಕೂಡ ದುಬೆ ಎಸೆತಕ್ಕೆ ಡಕ್ ಔಟ್ ಆದರು. ಶಮ್ಸ್ ಮುಲಾನಿ 85 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯ 50 ರನ್ ಗಳಿಸಿದರು. ಅಂತಿಮವಾಗಿ ಮುಂಬೈ 418 ರನ್ಗಳಿಗೆ ಆಲೌಟ್ ಆಗಿ 537 ರನ್ಗಳ ಮುನ್ನಡೆ ಸಾಧಿಸಿತು.
ವಿದರ್ಭ ಪರ ಹರ್ಷ್ ದುಬೆ 48 ಓವರ್ಗಳಲ್ಲಿ 144 ರನ್ ನೀಡಿ 5 ವಿಕೆಟ್ ಪಡೆದರು. ಯಶ್ 22.2 ಓವರ್ ಗಳಲ್ಲಿ 79 ರನ್ ಗೆ 3 ವಿಕೆಟ್ ಪಡೆದರು. ಆದಿತ್ಯ ಮತ್ತು ಅಮನ್ ತಲಾ ಒಂದು ವಿಕೆಟ್ ಪಡೆದರು.