Site icon Vistara News

Mustafizur Rahman : ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡ ಬಾಂಗ್ಲಾ ಬೌಲರ್​; ಇಲ್ಲಿದೆ ವಿಡಿಯೊ

Mustafizur Rahman

ಬೆಂಗಳೂರು : ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಮುಂಚಿತವಾಗಿ ನಡೆಯುತ್ತಿದ್ದ ಅಭ್ಯಾಸದ ಸಮಯದಲ್ಲಿ ಅನುಭವಿ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರ ತಲೆಗೆ ಚೆಂಡು ಬಡಿದು ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ನೆಟ್ಸ್​ನಲ್ಲಿ ಭಾಗವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೆಹಮಾನ್ ಅವರು ತಮ್ಮ ಬೌಲಿಂಗ್ ಮಾರ್ಕ್​ ಕಡೆಗೆ ಹೋಗುವಾಗ ಚೆಂಡಿನ ಹೊಡೆದ ಬಿದ್ದಿತ್ತು. ರಕ್ತ ಸ್ರಾವ ಆರಂಭಗೊಂಡ ಬಳಿಕ ಸ್ಥಳದಲ್ಲೇ ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು ಮತ್ತು ಆಂಬ್ಯುಲೆನ್ಸ್​ನಲ್ಲಿ ಇಲ್ಲಿನ ಇಂಪೀರಿಯಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದಾಗ್ಯೂ, ನಂತರದ ಸಿಟಿ ಸ್ಕ್ಯಾನ್​​ಗಳು 28 ವರ್ಷದ ರೆಹಮಾನ್ ಅವರ ತಲೆಯೊಗಳೆಗ ಯಾವುದೇ ಆಂತರಿಕ ಗಾಯಗೊಂಡಿಲ್ಲ ಎಂಬುದಾಗಿ ಹೇಳಿದೆ. ಅಭ್ಯಾಸದ ವೇಳೆ ಚೆಂಡು ನೇರವಾಗಿ ಮುಸ್ತಾಫಿಜುರ್ ರೆಹಮಾನ್ ಅವರ ತಲೆಯ ಎಡಭಾಗಕ್ಕೆ ಅಪ್ಪಳಿಸಿತು. ಅವರ ಪ್ಯಾರಿಟಲ್ ಪ್ರದೇಶದಲ್ಲಿ ಗಾಯವಾಯಿತು ರಕ್ತಸ್ರಾವವನ್ನು ನಿಲ್ಲಿಸಲು ನಾವು ಕಂಪ್ರೆಷನ್ ಬ್ಯಾಂಡೇಜ್ ಬಳಸಿದೆವು. ತಕ್ಷಣ ಅವರನ್ನು ಇಂಪೀರಿಯಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ” ಎಂದು ಬಾಂಗ್ಲಾದೇಶ ಕ್ರಿಕೆಟ್​ ಸಂಸ್ಥೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೀಡಿಯೊ ತುಣುಕಿನಲ್ಲಿ ಮುಸ್ತಾಫಿಜುರ್ ತಲೆಗೆ ಚೆಂಡು ಬಡಿದಾಗ ಅವರು ತಿರುಗಿ ನಡೆದುಕೊಂಡು ಹೋಗುತ್ತಿದ್ದರು. ಘಟನೆ ನಡೆದ ಕೂಡಲೇ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಅವರನ್ನು ನೋಡಿಕೊಂಡರು.

ಇದನ್ನೂ ಓದಿ : Yashasvi Jaiswal : ಕೊಹ್ಲಿ ಬಳಿಕ ಈ ಸಾಧನೆ ಮಾಡಿರುವ ಏಕೈಕ ಆಟಗಾರ ಜೈಸ್ವಾಲ್​, ಏನದು ದಾಖಲೆ?

ಏತನ್ಮಧ್ಯೆ, ಕೊಮಿಲ್ಲಾ ತಂಡದ ಮಾಧ್ಯಮ ವ್ಯವಸ್ಥಾಪಕ ಸೋಹನುಝಮಾನ್ ಖಾನ್, 28 ವರ್ಷದ ಆಟಗಾರನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಸಾಮಾನ್ಯವಾಗಿ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ. ಸತ್ಖೀರಾ ಮೂಲದ ಆಟಗಾರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಪ್ರಸ್ತುತ ಆವೃತ್ತಿಯಲ್ಲಿ ಉತ್ತಮ ಅಭಿಯಾನವನ್ನು ಹೊಂದಿದ್ದಾರೆ. ಅವರು ಆಡಿದ ಒಂಬತ್ತು ಪಂದ್ಯಗಳಲ್ಲಿ ೧೧ ವಿಕೆಟ್ ಗಳನ್ನು ಪಡೆದಿದ್ದಾರೆ. ಮುಸ್ತಾಫಿಜುರ್ ಚೆಂಡಿನೊಂದಿಗೆ 23.91 ಸರಾಸರಿ ಹೊಂದಿದ್ದಾರೆ ಮತ್ತು 15 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದಾಗ್ಯೂ, ಅವರು ಕೆಲವು ಪಂದ್ಯಗಳಲ್ಲಿ ಕೆಲವು ರನ್​ ಬಿಟ್ಟುಕೊಟ್ಟಿದ್ದರು.

Exit mobile version