Site icon Vistara News

Namma Metro : ಮೆಟ್ರೊ ಪ್ರಯಾಣಿಕರೆ ಗಮನಿಸಿ; ಜೂನ್​ 17ರಂದು 1 ಗಂಟೆವರೆಗೆ ಚಲ್ಲಘಟ್ಟದಿಂದ ಕೆಂಗೇರಿ ತನಕ ಸೇವೆ ಇಲ್ಲ

Namma Metro

ಬೆಂಗಳೂರು: ನಮ್ಮ ಮೆಟ್ರೊದಲ್ಲಿನ (Namma Metro) ನೇರಳೆ ಮಾರ್ಗದ ಚಲ್ಲಘಟ್ಟ ನಿಲ್ದಾಣದಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ಸೋಮವಾರ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಟ್ರೊ ರೈಲುಗಳು ಸಂಚರಿಸುವುದಿಲ್ಲ. ಈ ಮಾರ್ಗದ ರೈಲುಗಳನ್ನು ಅವಲಂಬಿಸಿರುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಈ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ದುರಸ್ತಿಗಾಗಿ ನಮ್ಮ ಮೆಟ್ರೊ ರೈಲು ಪ್ರಾಧಿಕಾರ ಸೇವೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಸೋಮವಾರವಾಗಿರುವ ಕಾರಣ ಐಟಿ ಅಂದು ಕಚೇರಿ ಕೆಲಸಗಳು ಇರುತ್ತವೆ. ಹೀಗಾಗಿ ಈ ಮಾರ್ಗವನ್ನು ಅತಿ ಹೆಚ್ಚು ನಂಬಿಕೊಂಡವರು ಆದ್ಯತೆ ಮೇರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

ನಮ್ಮ ಮೆಟ್ರೊ ಕೊಟ್ಟಿರುವ ಪ್ರಕಟಣೆ ಈ ರೀತಿ ಇದೆ; ನೇರಳೆ ಮಾರ್ಗದಲ್ಲಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ದಿನಾಂಕ 17ನೇ ಜೂನ್ 2024 (ಸೋಮವಾರ) ರಂದು ನಿರ್ವಹಣೆ ಕೆಲಸ ನಡೆಯಲಿದೆ. ಹೀಗಾಗಿ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯ ಲಭ್ಯವಿರುವುದಿಲ್ಲ. ರೈಲು ಸೇವೆಗಳು ಮಧ್ಯಾಹ್ನ 1 ಗಂಟೆಯ ನಂತರ ವೇಳಾಪಟ್ಟಿಯ ಪ್ರಕಾರ ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ. ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತವೆ. ಪ್ರಯಾಣಿಕರ ಅನಾನುಕೂಲಕ್ಕೆ ವಿಷಾದಿಸುತ್ತೇವೆ.

ನಮ್ಮ ಮೆಟ್ರೊ ರೈಲುಗಳ ವ್ಯಾಪ್ತಿ ವಿಸ್ತರಣೆಗೊಂಡಿರುವ ಜತೆಯಾಗಿ ತಾಂತ್ರಿಕ ಸಮಸ್ಯೆಯೂ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಮೆಟ್ರೊ ರೈಲು ತಾಂತ್ರಿಕ ದೋಷದಿಂದ ನಿಂತು ಪ್ರಯಾಣಕರು ಅರ್ಧದಾರಿಯಲ್ಲೇ ಪರಿತಪಿಸಿದ್ದರು.

ಅಂದು ಏನಾಗಿತ್ತು?

ಜೂ.13ರಂದು ಬೆಳಗ್ಗೆ ಹಲವೆಡೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಎಂ.ಜಿ ರಸ್ತೆ ಸೇರಿದಂತೆ ಹಲವೆಡೆ ರೈಲು ಬರುವುದು ತಡವಾಗಿದ್ದವು. ಎಂಜಿ ರಸ್ತೆ, ಟ್ರಿನಿಟಿ, ಹಲಸೂರು ಸೇರಿದಂತೆ ಹಲವೆಡೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾದು ನಿಂತಿದ್ದರು. ಸುಮಾರು 15 ನಿಮಿಷಕ್ಕೂ ಹೆಚ್ಚು ಸಮಯದಿಂದ ರೈಲು ಬಾರದೇ ಪ್ರಯಾಣಿಕರು ಕಿರಿಕಿರಿ ಅನುಭವಿಸಿದ್ದರು.

ಇದನ್ನೂ ಓದಿ: Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

ಎಕ್ಸ್‌ ಮೂಲಕ ಬಿಎಂಆರ್‌ಸಿಎಲ್‌ಗೆ ಟ್ಯಾಗ್‌ ಮಾಡಿ ಮೆಟ್ರೋ ರೈಲು ವಿಳಂಬಕ್ಕೆ ಕಾರಣವೇನು? ಎಂದು ಪ್ರಶ್ನಿಸಿದ್ದರು. ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿತ್ತು.

ಮೆಟ್ರೋ ಸೇವೆಯಲ್ಲಿ ವ್ಯತ್ಯಯ ವಿಚಾರ ಕುರಿತು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿತ್ತು. ಗುರುವಾರ ಬೆಳಗ್ಗೆ 9.58 ಕ್ಕೆ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಮೆಜೆಸ್ಟಿಕ್‌ನಲ್ಲಿ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್ಗೆ ಸ್ಥಳಾಂತರಿಸಲಾಗಿದೆ. ರೈಲು ಸೇವೆಗಳನ್ನು ಪುನಃಸ್ಥಾಪಿಸಲಾಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳಬಹುದು. ಆದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಕೋರಿತ್ತು.

Exit mobile version