ಬೆಂಗಳೂರು: ಮಿಸ್ ಇಂಡಿಯಾ 2023ರ ವಿಜೇತೆ ರಾಜಸ್ಥಾನದ ನಂದಿನಿ ಗುಪ್ತಾ ಏಪ್ರಿಲ್ 15ರ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ 2023ರ ಫೆಮಿನಾ ಮಿಸ್ ಇಂಡಿಯಾ (Nandini Gupta) ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡರು. ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆದರೆ, ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ 2ನೇ ರನ್ನರ್ ಅಪ್ ಆದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಗ್ರ್ಯಾಂಡ್ ಮಿಸ್ ವರ್ಲ್ಡ್ ಸ್ಪರ್ಧೆಯ 71 ನೇ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸುವ ನಂದಿನಿ ಅವರ ಬಗ್ಗೆ ಇಲ್ಲಿದೆ ಮಾಹಿತಿ.
ನಂದಿನಿ ಗುಪ್ತಾ ಯಾರು?
19 ವರ್ಷ ವಯಸ್ಸಿನ ನಂದಿನಿ ಗುಪ್ತಾ ಅವರು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಆಕಾಂಕ್ಷಿಗಳಿಗಾಗಿ ದೇಶದ ಅತಿದೊಡ್ಡ ಕೋಚಿಂಗ್ ಕೇಂದ್ರಗಳಲ್ಲಿ ಒಂದಾದ ಕೋಟಾದಿಂದ ಬಂದವರು. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಸಾಧನೆಗೆ ಪ್ರೇರೇಪಿಸುವಂತೆ ಮಾಡಿತು ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ನಂದಿನಿ ಗುಪ್ತಾ ಹೇಳಿಕೊಂಡಿದ್ದರು.
ಇದನ್ನೂ ಓದಿ: Taapsee Pannu: ಮಿಸ್ ಇಂಡಿಯಾ ಸ್ಪರ್ಧಿಯಾಗಿದ್ದಾಗ ಅವಮಾನಕ್ಕೊಳಗಾಗಿದ್ದೆ: ತಾಪ್ಸಿ ಪನ್ನು
ಮಿಸ್ ಇಂಡಿಯಾ ಪೇಜ್‌ನಲ್ಲಿ ನಂದಿನಿ ಅವರ ವಿಜಯದ ಕ್ಷಣದ ಚಿತ್ರವನ್ನು ಪೋಸ್ಟ್ ಮಾಡಿದೆ. ನಂದಿನಿ ಸೌಂದರ್ಯ ಸ್ಪರ್ಧೆಯ 59ನೇ ಆವೃತ್ತಿಯಲ್ಲಿಯೂ ಗೆದ್ದಿದ್ದಾರೆ. ಈ ಈವೆಂಟ್‌ವನ್ನು ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ,ಮನೀಶ್ ಪಾಲ್ ಮತ್ತು ಭೂಮಿ ಪೆಡ್ನೇಕರ್ ಆಯೋಜಿಸಿದ್ದರು.