Site icon Vistara News

Narendra Modi Stadium : ಗುಜರಾತ್​ಗೆ ಸಡ್ಡು; ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ನರೇಂದ್ರ ಮೋದಿ ಸ್ಟೇಡಿಯಮ್​​ಗಿಂತ ದೊಡ್ಡ ಕ್ರಿಕೆಟ್​ ಸೌಲಭ್ಯ

Narendra Modi Stadium

ಬೆಂಗಳೂರು: ಇತ್ತೀಚಿನ ಬೆಳವಣಿಗೆಯೊಂದರ ಪ್ರಕಾರ ತಮಿಳುನಾಡು ರಾಜ್ಯ ಸರ್ಕಾರವು ಕೊಯಮತ್ತೂರಿನಲ್ಲಿ ಅಂತಾರಾಷ್ಟ್ರೀಯ ಸೌಲಭ್ಯಗಳೊಂದಿಗೆ ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಿದೆ. . ಇತ್ತೀಚಿನ ಸುದ್ದಿ ವರದಿಗಳ ಪ್ರಕಾರ, ತಮಿಳುನಾಡು ರಾಜ್ಯ ಸರ್ಕಾರವು ದೇಶದ ಅತಿ ಹೆಚ್ಚು ಆಸನಗಳು ಇರುವ ಕ್ರೀಡಾಂಗಣವನ್ನು ನಿರ್ಮಿಸಲು ಯೋಜಿಸುತ್ತಿದೆ. ಇದು ಗುಜರಾತ್​ನ ಅಹಮದಾಬಾದ್ ನಗರದಲ್ಲಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸೌಲಭ್ಯವಾಗಿರುವ ನರೇಂದ್ರ ಮೋದಿ ಸ್ಟೇಡಿಯಮ್​ಗಿಂತಲೂ (Narendra Modi Stadium) ದೊಡ್ಡದಾಗಿರಲಿದೆ. ಈ ಮೂಲಕ ಗುಜರಾತ್​ಗೆ ಕ್ರಿಕೆಟ್​ನಲ್ಲಿ ಸಡ್ಡು ಹೊಡೆಯಲು ದಕ್ಷಿಣದ ರಾಜ್ಯ ತಮಿಳುನಾಡು ಮುಂದಾಗಿದೆ.

ಸಂಸತ್ತಿನ ಚುನಾವಣೆಯ ಸಮಯದಲ್ಲಿ ಕೊಯಮತ್ತೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭರವಸೆ ನೀಡಿದ್ದರು ಎಂದು ರಾಜ್ಯ ಕೈಗಾರಿಕಾ ಸಚಿವ ಟಿಆರ್​ಬಿ ರಾಜಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದರು. ಈ ಪ್ರದೇಶದಲ್ಲಿ ಕ್ರಿಕೆಟ್ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಬಯಸಿದೆ ಎಂದು ಅವರು ಹೇಳಿದ್ದರು.

ಉದಯನಿಧಿ ಸ್ಟಾಲಿನ್ ಭರವಸೆ

ರಾಜ್ಯ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಸೂಕ್ತ ಸ್ಥಳವನ್ನು ಕಂಡುಹಿಡಿಯುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆ. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದ ನಂತರ ಈ ಕ್ರೀಡಾಂಗಣವು ತಮಿಳುನಾಡಿನ ಎರಡನೇ ಅಂತರರಾಷ್ಟ್ರೀಯ ಗುಣಮಟ್ಟದ ಸ್ಥಳವಾಗಲಿದೆ ಎಂದು ಉದಯನಿಧಿ ಹೇಳಿದ್ದಾರೆ.

ಕ್ರೀಡಾ ಪ್ರೇಮಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕೊಯಮತ್ತೂರಿನಲ್ಲಿ ಅತ್ಯಾಧುನಿಕ ಕ್ರಿಕೆಟ್ ಕ್ರೀಡಾಂಗಣವನ್ನು ಸ್ಥಾಪಿಸಲು ನಾವು ಮುಂದಾಗಿದ್ದೇವೆ. ನಮ್ಮ ಸಚಿವ ಟಿಆರ್​ಬಿ ರಾಜಾ ಅವರು ಹೇಳಿದಂತೆ ಈ ಕ್ರೀಡಾಂಗಣವು ಚೆನ್ನೈನ ಅಪ್ರತಿಮ ಎಂಎಸಿ ಕ್ರೀಡಾಂಗಣದ ನಂತರ ತಮಿಳುನಾಡಿನ ಎರಡನೇ ಅತಿ ದೊಡ್ಡ ಅಂತರರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ತಾಣವಾಗಲಿದೆ. ನಮ್ಮ ಸರ್ಕಾರ ತಮಿಳುನಾಡಿನಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬದ್ಧರಾಗಿದೆ ” ಎಂದು ಬರೆದುಕೊಂಡಿದ್ದಾರೆ.

ಸ್ಟೇಡಿಯಮ್ ನಿರ್ಮಾಣಕ್ಕೆ ಮೂರು ಅಂತಿಗೊಳಿಸಲಾಗಿದೆ. ಸಚಿವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಕೊಯಮತ್ತೂರಿನ ಒಂಡಿಪುದೂರ್ ಪ್ರದೇಶವನ್ನು ಈಗ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ಆಯ್ಕೆ ಮಾಡಲಾಗಿದೆ. ಅಂತರರಾಷ್ಟ್ರೀಯ ಸ್ಥಳದ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿ ತಯಾರಿಸಲು ತಮಿಳುನಾಡು ಸರ್ಕಾರ ಟೆಂಡರ್ ನೀಡಿದೆ.

ವಿಶ್ವದಲ್ಲೇ ಅತಿ ಹೆಚ್ಚು ಆಸನ ಸಾಮರ್ಥ್ಯದ ಕ್ರೀಡಾಂಗಣ

ಹೊಸ ಕ್ರಿಕೆಟ್ ಕ್ರೀಡಾಂಗಣವನ್ನು ಕೊಯಮತ್ತೂರು ನಗರದಿಂದ 16 ಕಿ.ಮೀ ದೂರದಲ್ಲಿ ನಿರ್ಮಾಣಗೊಳ್ಳಲಿದೆ. ವಿಐಪಿ ಮತ್ತು ಕಾರ್ಪೊರೇಟ್ ಸೌಲಭ್ಯಗಳು, ಆಟಗಾರರ ಲಾಂಜ್, ಮಾಧ್ಯಮ ಕೇಂದ್ರ, ಸಾರ್ವಜನಿಕ ಕೆಫೆಟೇರಿಯಾಗಳು ಮತ್ತು ರೆಸ್ಟೋರೆಂಟ್​ಗಳು, ವೀಕ್ಷಣಾ ಗ್ಯಾಲರಿಗಳು ಮತ್ತು ಕ್ರಿಕೆಟ್ ವಸ್ತುಸಂಗ್ರಹಾಲಯದಂತಹ ಉನ್ನತ ಶ್ರೇಣಿಯ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ತಮಿಳುನಾಡು ಚೆನ್ನೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನ ತವರು ಸ್ಥಳವಾದ ಚೆಪಾಕ್ ಭಾರತದ ಎರಡನೇ ಹಳೆಯ ಕ್ರೀಡಾಂಗಣವಾಗಿದೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಸಾಮರ್ಥ್ಯವಾಗಿದ್ದರೆ, ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ) ಆಯಾಮಗಳ ದೃಷ್ಟಿಯಿಂದ ದೊಡ್ಡದಾಗಿದೆ.

ಇದನ್ನೂ ಓದಿ:Paris Olympics 2024 : ವಿನೇಶ್ ಫೋಗಟ್​ ಬೆಳ್ಳಿ ಪದಕದ ಮನವಿ ತೀರ್ಪು ಭಾನುವಾರಕ್ಕೆ ಮುಂದೂಡಿಕೆ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಹೊಸ ಕ್ರೀಡಾಂಗಣಕ್ಕೆ ಮಾದರಿಗಳಾಗಿ ಇಲಾಖೆ ಶಿಫಾರಸು ಮಾಡಿದೆ. ಆಟಗಾರರು ಮತ್ತು ತರಬೇತುದಾರರಿಗೆ ಸಂಶೋಧನೆ ಮತ್ತು ಪುನರ್ವಸತಿ ಸೌಲಭ್ಯಗಳು, ಉತ್ತಮ ಗುಣಮಟ್ಟದ ಮಾಧ್ಯಮ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಸೌಲಭ್ಯಗಳು ಸೇರಿದಂತೆ ಸುಧಾರಿತ ವಿನ್ಯಾಸ ಪರಿಕಲ್ಪನೆಗಳನ್ನು ಸಂಯೋಜಿಸುವ ಕೆಲಸವನ್ನು ಬಿಡ್​​ದಾರರಿಗೆ ವಹಿಸಲಾಗಿದೆ.

Exit mobile version