Site icon Vistara News

Natasa Stankovic : ಡೈವೋರ್ಸ್​ ಗಾಸಿಪ್​ ನಡುವೆಯೇ ಬೇರೊಬ್ಬರ ಜತೆ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ ಪತ್ನಿ

Natasa Stankovic

ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ (Natasa Stankovic) ಈಗ ಸುದ್ದಿಯಲ್ಲಿದ್ದಾರೆ. ಅವರು ಮತ್ತು ಹಾರ್ದಿಕ್ ಈಗಾಗಲೇ ಪರಸ್ಪರ ಒಪ್ಪಂದದಿಂದ ಬೇರ್ಪಟ್ಟಿದ್ದಾರೆ ಎಂದು ಸಾಕಷ್ಟು ವದಂತಿಗಳಾಗಿವೆ. ಈ ಗಾಸಿಪ್​ ಸುದ್ದಿಯ ಬೆಂಕಿಗೆ ಹೆಚ್ಚಿನ ತುಪ್ಪ ಸುರಿಯುವಂತೆ ಅವರು ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಸಾರ್ವಜನಿಕಗಾಗಿ ಹೋಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಪಾಪರಾಜಿಗಳು (ಕ್ಯಾಮೆರಾಮನ್​ಗಳು) ಅವರಿಬ್ಬರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ನಟಿ ದಿಶಾ ಪಠಾಣಿ ಅವರ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ಲಿಕ್​ ಮತ್ತು ನತಾಶಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳಿಂದ ಸಾಕಷ್ಟು ವಿನಂತಿಗಳನ್ನು ಪಡೆದ ನಂತರ ನತಾಶಾ ಪೋಸ್ ನೀಡಿದ್ದಾರೆ. ಹೀಗಾಗಿ ಪಾಂಡ್ಯಾ ಜತೆಗಿನ ಡೈವೋರ್ಸ್​ ಪ್ರಕರಣವನ್ನು ಇನ್ನಷ್ಟು ಆಸಕ್ತಿದಾಯಕವಾಗಿದೆ. ಐಪಿಎಲ್ 2024 ರಲ್ಲಿ ಹಾರ್ದಿಕ್ ತಮ್ಮ ಉನ್ನತ ನಿರೀಕ್ಷೆಗಳಿಗೆ ತಕ್ಕ ಹಾಗೆ ಆಡಿಲ್ಲ. ಪತಿ ಸೋಲುತ್ತಿದ್ದರೂ ಒಂದೇ ಒಂದು ಬಾರಿಯೂ, ನತಾಶಾ ತಮ್ಮ ಪತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ಟ್ಯಾಂಡ್​ಗಳಿಗೆ ಬಂದಿರಲಿಲ್ಲ.

ನತಾಶಾ ಮತ್ತು ಹಾರ್ದಿಕ್ ಮೇ 2020 ರಲ್ಲಿ ವಿವಾಹವಾಗಿದ್ದರು. ಅವರಿಗೆ ಅಗಸ್ತ್ಯ ಎಂಬ ಮೂರು ವರ್ಷದ ಮಗನಿದ್ದಾನೆ. ಇತ್ತೀಚೆಗೆ, ನತಾಶಾ ತಮ್ಮ ಪಕ್ಕದಲ್ಲಿದ್ದ ಪಾಂಡ್ಯಾ ಹೆಸರನ್ನು ತೆಗೆದುಹಾಕಿದ್ದರು. ಇದು ಅವರ ವಿಚ್ಛೇದನದ ಬಗ್ಗೆ ಊಹಾಪೋಹಗಳನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: IPL 2024 : ಶಿಮ್ರೋನ್ ಹೆಟ್ಮಾಯರ್​ಗೆ ದೊಡ್ಡ ಮೊತ್ತದ ದಂಡ ವಿಧಿಸಿದ ಬಿಸಿಸಿಐ

ಅದೇನೇ ಇದ್ದರೂ, ಅಲೆಕ್ಸಾಂಡರ್ ಮತ್ತು ನತಾಶ ಮತ್ತು ದಿಶಾ ಇಬ್ಬರಿಗೂ ಉತ್ತಮ ಸ್ನೇಹಿತ ಎಂದು ವರದಿಯಾಗಿದೆ. ಅವರು ತಮ್ಮ ತೋಳುಗಳ ಮೇಲೆ ದಿಶಾ ಅವರ ಮುಖದ ಹಚ್ಚೆ ಹೊಂದಿರುವುದರಿಂದ, ಅವರು ಬಾಲಿವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿರಬೇಕು ಎಂದು ಎಲ್ಲರೂ ಭಾವಿಸಿದ್ದಾರೆ.

ಬಹುತೇಕ ಆಸ್ತಿಯನ್ನು ಪೋಷಕರ ಹೆಸರಲ್ಲಿಟ್ಟ ಚಾಲಾಕಿ ಹಾರ್ದಿಕ್!

ಮುಂಬಯಿ: ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಿದರೆ(Hardik Pandya and Natasa Stankovic divorce) ಪತ್ನಿಗೆ ಜೀವನಾಂಶವಾಗಿ ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನೀಡಬೇಕಾಗಬಹುದು ಎಂದು ಹೇಳಲಾಗಿದೆ. ಆದರೆ, ಚಾಲಾಕಿ ಪಾಂಡ್ಯ ಅವರ ಬುದ್ಧಿವಂತಿಕೆಯಿಂದ ಪತ್ನಿಗೆ ನಯಾ ಪೈಸೆಯೂ ಸಿಗುವುದು ಅನುಮಾನ ಎನ್ನುವಂತಿದೆ.

ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇದು ಅಸಾಧ್ಯ ಎನ್ನುವಂತಿದೆ.

ಹೌದು, ಹಾರ್ದಿಕ್​ ಪಾಂಡ್ಯ ಅವರು ಮುಂಬೈಯಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರೂ ಕೂಡ ತಮ್ಮ ಹೆಸರಿನಲ್ಲಿ ಹೆಚ್ಚು ಆಸ್ತಿಯನ್ನು ಮಾಡಿಲ್ಲ. ಬಹುತೇಕ ಆಸ್ತಿಯನ್ನು ತನ್ನ ಪೋಷಕರ ಹೆಸರಿನಲ್ಲಿ ಮಾಡಿಟ್ಟಿದ್ದಾರೆ. ಈ ವಿಚಾರವನ್ನು ಪಾಂಡ್ಯ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಈ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದ ಪಾಂಡ್ಯ, “ನಾನು ಜಾಹಿರಾತು, ಕ್ರಿಕೆಟ್​ ಸೇರಿ ಇನ್ನಿತರ ಮೂಲಗಳಿಂದ ಎಷ್ಟೇ ಹಣ ಸಂಪಾದಿಸಿದರೂ ಕೂಡ ಇದನೆಲ್ಲ ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ದುಬಾರಿ ಕಾರು, ಬಂಗಲೆ ಇದ್ದರೂ ಕೂಡ ಇದೆಲ್ಲ ನನ್ನ ಸಹೋದರ, ತಂದೆ ಮತ್ತು ತಾಯಿಯ ಹೆಸರಿನಲ್ಲಿದೆ. ಹೀಗಾಗಿ ನಾನು ಯಾವುದೇ ಸಮಸ್ಯೆ ಬಂದರೂ ಕೂಡ ಯಾರೀಗೂ ನನ್ನ ಆಸ್ತಿಯಲ್ಲಿ ಶೇ. 50ರಷ್ಟು ಜೀವನಾಂಶ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದರು. ಈ ವಿಡಿಯೊ ಈಗ ವೈರಲ್​ ಆಗಿದ್ದು ಪಾಂಡ್ಯಗೆ ಜೀವನದಲ್ಲಿ ಮುದೊಂದು ದಿನ ಪ್ರೇಯಸಿಯಿಂದ ದೋಖಾ ಎದುರಾಗುವ ಸುಳಿವು ಮೊದಲೇ ತಿಳಿದಿತ್ತಾ? ಎನ್ನುವ ನಿಗೂಡ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

Exit mobile version