ಬೆಂಗಳೂರು: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಅವರ ಜತೆಗಿನ ದಾಂಪತ್ಯದಿಂದ ಬೇರ್ಪಡುವುದಾಗಿ ನಟಿ ಹಾಗೂ ಮಾಡೆಲ್ ನತಾಶಾ ಸ್ಟಾಂಕೋವಿಕ್ (Natasa Stankovic) ಹೇಳಿದ್ದಾರೆ. ಗುರುವಾರ ಸಂಜೆ, ರೂಪದರ್ಶಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇನ್ನು ನಾವಿಬ್ಬರೂ ಒಟ್ಟಿಗೆ ಇಲ್ಲ ಎಂದು ದೃಢಪಡಿಸಿದ್ದಾರೆ. ಇದು ನಮಗಿಬ್ಬರಿಗೂ ” ನಿರ್ಧಾರ” ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ 3 ವರ್ಷದ ಮಗ ಅಗಸ್ತ್ಯನಿಗೆ ಸಹ-ಪೋಷಕರಾಗಿ ಮುಂದುವರಿಯುತ್ತೇವೆ ಎಂದು ಹಂಚಿಕೊಂಡಿದ್ದಾರೆ.
“4 ವರ್ಷಗಳ ಕಾಲ ಜತೆಯಾಗಿ ಇದ್ದ ಹಾರ್ದಿಕ್ (Hardik Pandya) ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಜತೆಯಾಗಿ ಇರಲು ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ ಮತ್ತು ನಮ್ಮ ಎಲ್ಲವನ್ನೂ ಅರ್ಪಿಸಿದ್ದೇವೆ. ಇದು ನಮ್ಮಿಬ್ಬರಿಗೂ ಒಳ್ಳೆಯದನ್ನು ಮಾಡಿದೆ ಎಂದು ನಾವು ನಂಬುತ್ತೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದೇವೆ. ಇದು ನಮಗೆ ಕಠಿಣ ನಿರ್ಧಾರ” ಎಂದು ನತಾಶಾ (Natasa Stankovic) ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ ಮತ್ತು ಅವನ ಸಂತೋಷಕ್ಕಾಗಿ ನಾವು ನಮ್ಮಿಂದ ಸಾಧ್ಯವಾದ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎರಡೂ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು
ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ನೃತ್ಯಗಾರ್ತಿ ನತಾಶಾ ಸ್ಟಾಂಕೋವಿಕ್ ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರನ್ನು ಮೇ 31, 2020 ರಂದು ವಿವಾಹವಾಗಿದ್ದರು. ಫೆಬ್ರವರಿ 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಆಚರಣೆಗಳ ಪ್ರಕಾರ ದಂಪತಿಗಳು ತಮ್ಮ ದಾಂಪತ್ಯದ ಪ್ರತಿಜ್ಞೆ ಸ್ವೀಕರಿಸಿದ್ದರು.
ಇದನ್ನೂ ಓದಿ: Team India Srilanka Tour : ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಸೂರ್ಯಕುಮಾರ್ಗೆ ಟಿ20 ನಾಯಕತ್ವ
ಈ ವರ್ಷದ ಮೇ ತಿಂಗಳಲ್ಲಿ ರೂಪದರ್ಶಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಿಂದ ‘ಪಾಂಡ್ಯ’ ಹೆಸರನ್ನು ತೆಗೆದುಹಾಕಿದ್ದನ್ನು ನೆಟ್ಟಿಗರು ಗಮನಿಸಿದ್ದರು. ಅವರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ಪ್ರಾರಂಭವಾಗಿದ್ದವು. ನಂತರ, “ನತಾಸಾ ಮತ್ತು ಹಾರ್ದಿಕ್ ಬೇರ್ಪಟ್ಟಿದ್ದಾರೆಯೇ?” ಎಂಬ ರೆಡ್ಡಿಟ್ ಪೋಸ್ಟ್ ವೈರಲ್ ಆಗಿತ್ತು. ಇಬ್ಬರೂ ಪರಸ್ಪರ ಜತೆಯಾಗಿ ಚಿತ್ರಗಳನ್ನು ಪೋಸ್ಟ್ ಮಾಡುತ್ತಿಲ್ಲ ಎಂದು ಹೇಳಲಾಗಿತ್ತು. ಐಪಿಎಲ್ 2024 ಪಂದ್ಯಗಳಿಂದ ನತಾಶಾ ಮೈದಾನದ ಕಡೆಗೆ ಸುಳಿದಿರಲಿಲ್ಲ.
ಏತನ್ಮಧ್ಯೆ, ನತಾಶಾ ತನ್ನ ಊರಾದ ಸೆರ್ಬಿಯಾಕ್ಕೆ ಸ್ಥಳಾಂತರಗೊಂಡಿದ್ದರು. ಬುಧವಾರ, ಅವರು ತಮ್ಮ ಅಗಸ್ತ್ಯಮ ಜತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರು ಪಾಪರಾಜಿಗಳನ್ನು ನಿರ್ಲಕ್ಷಿಸಿದ್ದರು ಮತ್ತು ಕ್ಯಾಮೆರಾಗಳಿಗೆ ಪೋಸ್ ನೀಡುವುದನ್ನು ತಪ್ಪಿಸಿಕೊಂಡಿದ್ದರು.