Site icon Vistara News

Virat kohli : ಕೊಹ್ಲಿಯ ಆಟದ ಕುರಿತ ಅಪ್​ಡೇಟ್​ ನೀಡಿದ ಆರ್​ಸಿಬಿ ಕೋಚ್​ ಫ್ಲವರ್​

Virat kohli

ಬೆಂಗಳೂರು: ಐಪಿಎಲ್ 2024 ರಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಮೂರನೇ ಪಂದ್ಯವನ್ನು ಸೋತ ನಂತರ ಮುಖ್ಯ ಕೋಚ್ ಆಂಡಿ ಫ್ಲವರ್ ಸುದ್ದಿಗಾರರೊಂದಿಗೆ ಮಾತನಾಡುವಾಗ ವಿರಾಟ್ ಕೊಹ್ಲಿಯನ್ನು (Virat Kohli) ಶ್ಲಾಘಿಸಿದ್ದಾರೆ. ಕೊಹ್ಲಿಯ ಆಟದ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿರುವ ನಡುವೆ ಅವರ ಬಗ್ಗೆ ಕೋಚ್ ಹೇಳಿರುವ ಮಾತುಹೆಚ್ಚು ಪ್ರಾಧಾನ್ಯತೆ ಪಡೆದುಕೊಂಡಿದೆ.

ಬೆಂಗಳೂರು ಮೂಲದ ತಂಡವು ತವರಿನಲ್ಲಿ ಮತ್ತು ಹೊರಗಿನ ಸ್ಟೇಡಿಯಮ್​ಗಳಲ್ಲಿ ಸತತ ಮೂರು ಸೋಲುಗಳನ್ನು ಅನುಭವಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಕಳೆದ ರಾತ್ರಿ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್​ಗಳ ಸೋಲನುಭವಿಸಿತ್ತು.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಹಾಲಿ ಆವೃತ್ತಿಯಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿದ್ದರು. ಇದು ನಿಧಾನಗತಿಯ ಶತಕವಾಗಿದ್ದ ಕಾರಣ ಅನೇಕರಿಂದ ಟೀಕಿಸಲ್ಪಟ್ಟಿತು. ಆದಾಗ್ಯೂ, ಇದು ಸ್ಟಾರ್ ಬ್ಯಾಟರ್​ನಿಂದ ಮೂಡಿ ಬಂದ ಮತ್ತೊಂದು ಮಾಸ್ಟರ್ ಕ್ಲಾಸ್ ಆಟ ಎಂಬುದಾಗಿ ಫ್ಲವರ್​ ಶ್ಲಾಘಿಸಿದ್ದಾರೆ.

ರಾಜಸ್ಥಾನ್ ವಿರುದ್ದ ಉತ್ತಮ ಪ್ರದರ್ಶನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್​ಆರ್​ ವಿರುದ್ಧದ ಪಂದ್ಯದಲ್ಲಿ 113 ರನ್ ಬಾರಿಸುವ ಮೂಲಕ ತಮ್ಮ ತಂಡವನ್ನು 183 ರನ್​ಗಳ ಕಡೆಗೆ ಕೊಂಡೊಯ್ಯಲು ನೆರವು ನೀಡಿದ್ದರು. ಆದರೆ, ಉಳಿದವರು ಚೆನ್ನಾಗಿ ಆಡದ ಕಾರಣ ಆರ್​​ಸಿಬಿ ಹೀನಾಯವಾಗಿ ಸೋತಿತ್ತು.

ಇದನ್ನೂ ಓದಿ: Dinesh Karthik : ಆರ್​ಸಿಬಿ ಅಭಿಮಾನಿಗಳ ಪ್ರೀತಿ, ದ್ವೇಷದ ಅತಿರೇಕ ವಿವರಿಸಿದ ದಿನೇಶ್ ಕಾರ್ತಿಕ್​; ಇಲ್ಲಿದೆ ವಿಡಿಯೊ

ಐಪಿಎಲ್​ನಲ್ಲಿ ನಿಧಾನಗತಿಯ ಶತಕಕ್ಕಾಗಿ ಕೊಹ್ಲಿ ಈಗ ಮನೀಶ್ ಪಾಂಡೆ ಅವರೊಂದಿಗೆ ಕಳಪೆ ದಾಖಲೆ ಹಂಚಿಕೊಂಡಿದ್ದಾರೆ. 2009ರಲ್ಲಿ ಪಾಂಡೆ 67 ಎಸೆತಗಳನ್ನು ಎದುರಿಸಿ 100 ರನ್ ಗಳಿಸಿದ್ದರು. ಆದರೆ, ಆಂಡಿ ಫ್ಲವರ್ ವಿರಾಟ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಫ್ಲವರ್ ಕೊಹ್ಲಿಯ 67 ಎಸೆತಗಳ ಶತಕವನ್ನು ಆಹ್ಲಾದಕರ ಎಂದು ಕೊಂಡಾಡಿದ್ದಾರೆ.

“ವಿರಾಟ್ ಕೊಹ್ಲಿ ಕ್ಲಾಸ್ ಆಟವಾಗಿದೆ. ಅವರು ಅದ್ಭುತ ಇನ್ನಿಂಗ್ಸ್​ ಮೂಲಕ ತಮ್ಮ ಬ್ಯಾಟಿಂಗ್​ ವೈಭವನ್ನು ಸೊಬಗನ್ನು ಪ್ರದರ್ಶಿಸಿದರು, ಅದು ನೋಡಲು ಸಂತೋಷವಾಯಿತು” ಎಂದು ಫ್ಲವರ್ ಹೇಳಿದರು.

ವಿಶ್ವ ಕಪ್​ಗೆ ಆಯ್ಕೆ ಖಚಿತ

ಜೂನ್​ನಲ್ಲಿ ನಡೆಯಲಿರುವ ಐಸಿಸಿಟಿ 20 ವಿಶ್ವ ಕಪ್​ನಲ್ಲಿ ಭಾರತ ತಂಡಕ್ಕೆ ಆಡಲು ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುತ್ತದೆಯೇ ಎಂದು ಆಂಡಿ ಫ್ಲವರ್ ಅವರನ್ನು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಅವರು “ಭಾರತವು ಆಯ್ಕೆ ಮಾಡಲು ಸಾಕಷ್ಟು ಕ್ರಿಕೆಟ್ ಪ್ರತಿಭೆಗಳನ್ನು ಹೊಂದಿದೆ. ಆ ಪ್ರತಿಭಾನ್ವಿತ ಗುಂಪಿನಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದಾಗ್ಯೂ, ಭಾರತೀಯ ಆಯ್ಕೆದಾರರ ಆಲೋಚನಾ ಪ್ರಕ್ರಿಯೆ ಅಥವಾ ಆಟಗಾರರ ಆಯ್ಕೆಗಳ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸೋಲಿನ ಸರಮಾಲೆ; ಸಿದ್ಧಿವಿನಾಯಕನ ದರ್ಶನ ಪಡೆದ ಆರ್​​ಸಿಬಿ ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅಪ್ರತಿಮ ತಂಡಗಳಲ್ಲಿ ಒಂದಾಗಿದೆ. 2008 ರಲ್ಲಿ ರೂಪುಗೊಂಡ ಈ ಫ್ರಾಂಚೈಸಿ ಸ್ಪರ್ಧಾತ್ಮಕ ಶಕ್ತಿಯಾಗಿ ಯಶಸ್ಸು ಮತ್ತು ವೈಫಲ್ಯಗಳನ್ನು ಅನುಭವಿಸಿದೆ. ಆದರೆ ಅಪೇಕ್ಷಿತ ಟ್ರೋಫಿಯನ್ನು ಇನ್ನೂ ಗೆದ್ದಿಲ್ಲ. ಈ ಬಾರಿಯೂ ಆಡಿರುವ ಐದರಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋತು ಬೇಸರಲ್ಲಿದೆ.

ತಂಡವು ರೋಮಾಂಚಕ ಮುಖಾಮುಖಿಗಳು, ಅತ್ಯುತ್ತಮ ಪ್ರದರ್ಶನಗಳು ಮತ್ತು ನಿಷ್ಠಾವಂತ ಅಭಿಮಾನಿ ಬಳಗದೊಂದಿಗೆ ಸಾಕಷ್ಟು ಪ್ರಭಾವ ಹೊಂದಿದೆ. ಐಪಿಎಲ್ 2024 ರ ಪ್ರಸ್ತುತ ಋತುವಿನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಪಾಯಿಂಟ್ಸ್ ಟೇಬಲ್ 2024 ರಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಇದು ಅಭಿಮಾನಿಗಳಿಗೆ ಬೇಸರದ ವಿಷಯವಾಗಿದೆ. ಆರ್​ಸಿಬಿಗೆ ಮುಂದಿನ ಪಂದ್ಯ ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​​​ಸಿಬಿ ಆಟಗಾರರು ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಂಡವು ನಡೆಯುತ್ತಿರುವ ಐಪಿಎಲ್​ ಶಿಬಿರದಿಂದ ಸ್ವಲ್ಪ ಸಮಯ ತೆಗೆದುಕೊಂಡು ಆಟಗಾರರು ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Exit mobile version