ಮುಂಬಯಿ: ದುಬಾರಿ ಪೆಂಟ್ ಹೌಸ್ ಅನ್ನು ಬಜಾಜ್ ಆಟೊ ಅಧ್ಯಕ್ಷ ನೀರಜ್ ಬಜಾಜ್ ಅವರು ಮುಂಬಯಿನ ಮಲಬಾರ್ ಹಿಲ್‌ನಲ್ಲಿ ಖರೀದಿಸಿದ್ದಾರೆ. ಈ ಪೆಂಟ್ ಹೌಸ್‌ನ ಮೌಲ್ಯ 252.5 ಕೋಟಿ ರೂ.ಗಳಾಗಿದೆ. ಇದಕ್ಕೂ ಹಿಂದೆ ಈ ವರ್ಷ ಎರಡು ದೊಡ್ಡ ವಸತಿ ಆಸ್ತಿಗಳು ಮಾರಾಟವಾಗಿತ್ತು. (India’s costliest penthouse) ವೆಲ್ಸ್‌ಪನ್ ಗ್ರೂಪ್ ಅಧ್ಯಕ್ಷ ಬಿಕೆ ಗೋಯೆಂಕಾ ಮತ್ತು ಡಿ ಮಾರ್ಟ್ ಅನ್ನು ನಡೆಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ರಾಧಾಕೃಷ್ಣ ದಮಾನಿ ಅವರು ದುಬಾರಿ ಪೆಂಟ್ ಹೌಸ್ ಖರೀದಿಸಿದ್ದರು.
ನೀರಜ್ ಬಜಾಜ್ 2021ರ ಮೇ 1ರಿಂದ ಬಜಾಜ್ ಆಟೊದ ಅಧ್ಯಕ್ಷರಾಗಿದ್ದಾರೆ. ಮ್ಯಾಕ್ರೊಟೆಕ್ ಡೆವಲಪರ್ಸ್‌ನಿಂದ ಈ ಐಷಾರಾಮಿ ಪೆಂಟ್ ಹೌಸ್ ಅನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಈ ಪೆಂಟ್ ಹೌಸ್‌ನಲ್ಲಿನ ಮೂರು ಅಪಾರ್ಟ್‌ಮೆಂಟ್‌ಗಳನ್ನು (18,008 ಚದರ ಅಡಿ) ಮತ್ತು 8 ಕಾರು ಪಾರ್ಕಿಂಗ್ ಸ್ಲಾಟ್‌ಗಳನ್ನು ನೀರಜ್ ಬಜಾಜ್ ಖರೀದಿಸಿದ್ದಾರೆ. ಲೋಧಾ ಮಲಬಾರ್ ಹಿಲ್ಸ್‌ನಲ್ಲಿ 31 ಅಂತಸ್ತುಗಳು ಇವೆ. ಡೀಲ್‌ಗೆ ಸಂಬಂಧಿಸಿ 15.15 ಕೋಟಿ ರೂ. ಮುದ್ರಾಂಕ ಶುಲ್ಕವನ್ನು ನೀಡಲಾಗಿದೆ.
ಇದನ್ನೂ ಓದಿ: Meta Layoff: ಫೇಸ್ಬುಕ್ ಮಾತೃಸಂಸ್ಥೆ ಮೆಟಾದಲ್ಲಿ ಮತ್ತೆ ಉದ್ಯೋಗ ಕಡಿತ; ಕೆಲಸ ಕಳೆದುಕೊಳ್ಳಲಿದ್ದಾರೆ 10 ಸಾವಿರ ಮಂದಿ
ಈ ಹಿಂದೆ ವರ್ಲಿಯಲ್ಲಿ ಉದ್ಯಮಿ ಬಿಕೆ ಗೋಯೆಂಕಾ ಅವರು 230 ಕೋಟಿ ರೂ. ಪೆಂಟ್ ಹೌಸ್ ಅನ್ನು ಖರೀದಿಸಿದ್ದರು. ವರದಿಗಳ ಪ್ರಕಾರ ರಾಧಾಕೃಷ್ಣ ಧಮಾನಿ ಮುಂಬಯಿನಲ್ಲಿ 1238 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದರು ಎಂದು ವರದಿಯಾಗಿದೆ. ಹಾಗೂ ಇದನ್ನು ದೇಶದ ಅತಿ ದೊಡ್ಡ ರಿಯಲ್ ಎಸ್ಟೇಟ್ ವರ್ಗಾವಣೆ ಎನ್ನಲಾಗುತ್ತಿದೆ.