Site icon Vistara News

Neeraj Chopra : ಗಾಯದ ಸಮಸ್ಯೆಯಿಂದ ಬಳಲುತ್ತಲೇ ಒಲಿಂಪಿಕ್ಸ್​ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ!

Neeraj Chopra

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ(Paris Olympics 2024) ಬೆಳ್ಳಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ (Neeraj Chopra) ತಮ್ಮ ಗಾಯದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ. ತಾನು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು 26 ವರ್ಷದ ಆಟಗಾರ ಬಹಿರಂಗಪಡಿಸಿದ್ದಾರೆ. ಗಾಯದ ಸಮಸ್ಯೆ ಉಲ್ಬಣಗೊಳ್ಳಬಹುದು ಎಂಬ ನಿರಂತರ ಭಯದಿಂದ ಸ್ಪರ್ಧಿಸಿದೆ ಎಂಬುದಾಗಿ ಅವರು ಹೇಳಿದ್ದಾರೆ. ಬೆಳ್ಳಿ ಪದಕ ವಿಜೇತ ಜಾವೆಲಿನ್ ಎಸೆತಗಾರ ಪ್ಯಾರಿಸ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ತೊಡೆಯ ಸ್ನಾಯುವಿಗೆ ಸಂಬಂಧಿಸಿದ ಗಾಯದಿಂದ ಬಳಲುತ್ತಿದ್ದರು. ಆದಾಗ್ಯೂ, ಅವರು ತಮ್ಮ ಋತುವಿನ ಅತ್ಯುತ್ತಮ ಎಸೆತವಾದ 89.45 ಮೀಟರ್ ಎಸೆದು ಬೆಳ್ಳಿ ಪದಕ ಗಳಿಸಿದ್ದಾರೆ.

ಸ್ಪರ್ಧೆಗೆ ಹೋದಾಗ ನನ್ನ ಮನಸ್ಸಿನಲ್ಲಿ ಬಹಳಷ್ಟು ವಿಷಯಗಳಿರುತ್ತವೆ. ನಾನು ಭರ್ಜಿ ಎಸೆಯುವಾಗ ನನ್ನ ಶೇಕಡಾ 60-70 ರಷ್ಟು ಗಮನ ಗಾಯದ ಮೇಲೆ ಇರುತ್ತಿತ್ತು. ನಾನು ಮತ್ತೆ ಗಾಯಗೊಳ್ಳಲು ಬಯಸುವುದಿಲ್ಲ. ನಾನು ಎಸೆತಕ್ಕೆ ಹೋದಾಗಲೆಲ್ಲಾ, ನನ್ನ ವೇಗ ಕಡಿಮೆ ಇತ್ತು. ಹೀಗಾಗಿ ಸ್ಪರ್ಧೆ ಕಠಿಣವಾಯಿತು ಎಂದು ನೀರಜ್ ಪಿಟಿಐಗೆ ತಿಳಿಸಿದರು. ನೀರಜ್​ ಉತ್ತಮ ಸ್ನೇಹಿತ ಅರ್ಷದ್ ನದೀಮ್ ಅವರನ್ನು ಒಲಿಂಪಿಕ್ ಚಾಂಪಿಯನ್ ಸ್ಥಾನದಿಂದ ಕೆಳಗಿಳಿಸಿ ಪಾಕಿಸ್ತಾನಕ್ಕೆ ಮೊದಲ ಚಿನ್ನ ಗೆದ್ದಾರೆ.

ಕಳೆದ ವರ್ಷ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದರು. ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಪಾಯಕ್ಕೆ ಒಳಗಾಗಿದ್ದರು. ಆದರೆ, ಅವರು ಹೋಗಿರಲಿಲ್ಲ. ಇದು ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅಡ್ಡಿಯಾಗುತ್ತಿತ್ತು.

ಇದನ್ನೂ ಓದಿ: PR Sreejesh : ಕಂಚು ಗೆದ್ದ ತಕ್ಷಣ ಗೋಲ್​ ಕೀಪಿಂಗ್​ ಗ್ಲವ್ಸ್​ಗೆ ದೀರ್ಘದಂಡ ನಮಸ್ಕಾರ ಹಾಕಿದ ಶ್ರೀಜೇಶ್​​​

ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಳ್ಳುವಂತೆ ವೈದ್ಯರು ನನಗೆ ಹೇಳಿದರು. ಆದರೆ ವಿಶ್ವ ಚಾಂಪಿಯನ್​ಶಿಪ್​​ ಮೊದಲು ಅಥವಾ ವಿಶ್ವ ಚಾಂಪಿಯನ್​ಶಿಪ್​ ನಂತರ ಆ ನಿರ್ಧಾರ ತೆಗೆದುಕೊಳ್ಳಲು ನನಗೆ ಹೆಚ್ಚು ಸಮಯವಿರಲಿಲ್ಲ. ಒಲಿಂಪಿಕ್ಸ್​ಗೆ ತಯಾರಿ ನಡೆಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಪಿ.ವಿ.ಸಿಂಧು ಮತ್ತು ಸುಶೀಲ್ ಕುಮಾರ್ ನಂತರ ಸತತ ಒಲಿಂಪಿಕ್ ಪದಕಗಳನ್ನು ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ.

ಗಾಯದ ಸಮಸ್ಯೆಯ ಜತೆ ಹೋರಾಟ


ನಾನು ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಂದರ್ಭವನ್ನು ಇನ್ನಷ್ಟು ದಿನ ಮುಂದೂಡುತ್ತಿದ್ದೇನೆ. ಇದು ಕ್ರೀಡೆಯಲ್ಲಿ ಒಳ್ಳೆಯದಲ್ಲ. ಸಮಸ್ಯೆಯನ್ನು ಮುಂದುವರಿಸುವುದು ಒಳ್ಳೆಯದಲ್ಲ. ನೀವು ಸುದೀರ್ಘ ವೃತ್ತಿಜೀವನವನ್ನು ನಡೆಸಲು ಬಯಸಿದರೆ ನೀವು ಸದೃಢ ಮತ್ತು ಆರೋಗ್ಯಕರವಾಗಿರಬೇಕು. ಆದರೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಸ್ಪರ್ಧೆಗಳಿವೆ,” ಎಂದು ಅವರು ಹೇಳಿದ್ದಾರೆ.

ತಮ್ಮ ತಂಡದೊಂದಿಗೆ ಮಾತನಾಡಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಫಿಟ್ನೆಸ್​ಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳು ಕಠಿಣವಾಗಿದ್ದವು ಎಂದು ಬಹಿರಂಗಪಡಿಸಿದ್ದಾರೆ.

ನಾನು ಇದನ್ನು 2017 ರಲ್ಲಿ ಅನುಭವಿಸಿದೆ. ಅದರ ನಂತರ, ನನಗೆ ಸಾಕಷ್ಟು ಚಿಕಿತ್ಸೆಗಳು ಎದುರಾದವು. ಅದಕ್ಕಾಗಿ ನಾನು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಅವರು ಹೇಳಿದರು.

Exit mobile version