Site icon Vistara News

NEET PG : ನೀಟ್​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿಗಳು ಸೋರಿಕೆ, ಅಭ್ಯರ್ಥಿಗಳಿಗೆ ಆತಂಕ

NEET PG

ನವದೆಹಲಿ: ದೇಶದಲ್ಲಿ ನಡೆಸಲಾಗುವ ನಾನಾ ಪ್ರವೇಶ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆ ಪ್ರಕರಣಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ. ಈ ನಡುವೆ ಫಾರಿಸ್ ಮೆಡಿಕಲ್​ ಗ್ರಾಜುವೇಟ್ಸ್​ ಅಸೋಸಿಯೇಷನ್, ಎಕ್ಸ್​ನಲ್ಲಿ ಮಾಡಿರುವ ಪೋಸ್ಟ್ ಪ್ರಕಾರ ಆಗಸ್ಟ್​​ 11ರಂದು ನಡೆಯಬೇಕಾಗಿರುವ ನೀಟ್​​ ಪಿಜಿ ಪರೀಕ್ಷೆಯ ಗೌಪ್ಯ ಮಾಹಿತಿ ಸೋರಿಕೆಯಾಗಿದೆ. ಇದು ಆಕಾಂಕ್ಷಿಗಳು ಮತ್ತು ಇತರ ಪಾಲುದಾರರ ಕಳವಳ ಉಂಟು ಮಾಡಿದೆ. ಪರೀಕ್ಷೆಯನ್ನು ಆಗಸ್ಟ್ 11 ರಂದು 169 ನಗರಗಳ 376 ಪರೀಕ್ಷಾ ಕೇಂದ್ರಗಳಲ್ಲಿ 2,28,542 ಅಭ್ಯರ್ಥಿಗಳಿಗೆ ಆಯೋಜಿಸಲಾಗುತ್ತದೆ.

ಆಲ್ ಎಫ್ಎಂಜಿ ಅಸೋಸಿಯೇಷನ್ ಪ್ರಕಾರ, ನೀಟ್ ಪಿಜಿ ಪರೀಕ್ಷೆಗೆ ಕೆಲವು ದಿನಗಳ ಮೊದಲು ಎನ್​​ಬಿಇಎಂಎಸ್​ನಿ ನೀಡಲಾಗುವ ನಿರ್ಣಾಯಕ ನೋಟಿಸ್ ಸೋರಿಕೆಯಾಗಿದೆ. ವೈದ್ಯಕೀಯ ಪರೀಕ್ಷಾ ಸಂಸ್ಥೆ ಎನ್​​ಬಿಇಎಂಎಸ್ ತನ್ನ ಅಧಿಕೃತ ವೆಬೆ್​ಸೈಟ್​ನಲ್ಲಿ ನೀಟ್ ಪಿಜಿ ಪರೀಕ್ಷೆ ಬಗ್ಗೆ ಅಂತಹ ಯಾವುದೇ ಸೂಚನೆ ಬಿಡುಗಡೆ ಮಾಡದಿದ್ದರೂ ಈ ಹೊರಗೆ ಹೇಗೆ ಪ್ರಕಟಗೊಂಡಿತು ಎಂಬ ಕಳವಳ ವ್ಯಕ್ತವಾಗಿದೆ.

ಪರೀಕ್ಷಾ ಶಿಫ್ಟ್ ಮತ್ತು ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ ಎನ್​​ಬಿಇಎಂಎಸ್​ನ ಗೌಪ್ಯ ಪತ್ರವು ಸಾರ್ವಜನಿಕವಾಗಿ ಸೋರಿಕೆಯಾಗಿದೆ ಎಂದು ತೋರುತ್ತದೆ.
ಗೌಪ್ಯ ಪತ್ರ ಸೋರಿಕೆಯಾದರೆ, ನೀಟ್ ಪಿಜಿ ಪತ್ರಿಕೆಯ ಸುರಕ್ಷತೆಯ ಬಗ್ಗೆ ನಮಗೆ ವಿಶ್ವಾಸವಿದೆಯೇ? ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ.

ಆಲ್ ಎಫ್ಎಂಜಿ ಅಸೋಸಿಯೇಷನ್ ವೆಬ್​​ಸೈಟ್​ನಲ್ಲಿ ಪೋಸ್ಟ್ ಮಾಡಿದ ಅಧಿಸೂಚನೆಯು ಪರೀಕ್ಷೆಯ ಸಮಯ, ಅಭ್ಯರ್ಥಿಗಳ ಪ್ರವೇಶದ ಸಮಯ, ಪರೀಕ್ಷೆಯ ವಿಧಾನ, ನೀಟ್ ಪಿಜಿ 2024 ತೆಗೆದುಕೊಳ್ಳುವ ಅಭ್ಯರ್ಥಿಗಳ ಸಂಖ್ಯೆ ಮತ್ತು ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿ ಒಳಗೊಂಡಿದೆ. ಆಗಸ್ಟ್ 11, 2024 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಮಧ್ಯಾಹ್ನ 3:30ರಿಂದ 7 ರವರೆಗೆ ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಬೆಳಗ್ಗೆ 7 ರಿಂದ ಮತ್ತು ಮಧ್ಯಾಹ್ನ 1:30ರಿಂದ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಬೇಕಾಗುತ್ತದೆ.

ಇದನ್ನೂ ಓದಿ: Bangladesh Protest : ಬಾಂಗ್ಲಾದೇಶ ಬಿಕ್ಕಟ್ಟು; ಸರ್ವಪಕ್ಷ ಸಭೆ ಕರೆದ ವಿದೇಶಾಂಗ ಸಚಿವ ಜೈಶಂಕರ್

ಹೆಚ್ಚಿನ ಸಂಖ್ಯೆಯ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಈ ಪರೀಕ್ಷೆಯ ನಿರ್ಣಾಯಕ ಸ್ವರೂಪವನ್ನು ಗಮನಿಸಿದರೆ, ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ತಡೆರಹಿತ ರೀತಿಯಲ್ಲಿ ನಡೆಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಕಡ್ಡಾಯ. ಈ ಪರೀಕ್ಷೆಯನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಎನ್​​ಬಿಇಎಂಎಸ್ ಯಾವುದೇ ಪ್ರಯತ್ನವನ್ನು ಬಿಟ್ಟಿಲ್ಲ, ನಾವು ನಿಮ್ಮ ಸಹಾಯವನ್ನು ವಿನಂತಿಸುತ್ತೇವೆ ಎಂದು ಸೋರಿಕೆಯಾಗಿರುವ ನೋಟಿಸ್​ನಲ್ಲಿ ಬರೆಯಲಾಗಿದೆ.

Exit mobile version