Site icon Vistara News

NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

NEET UG

ಪಾಟ್ನಾ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG) ಸುತ್ತ ಭಾರಿ ವಿವಾದದ ಮಧ್ಯೆ ಬಿಹಾರದ ನಾಲ್ವರು ವಿದ್ಯಾರ್ಥಿಗಳ ಅಂಕಪಟ್ಟಿಗಳು ಮಾಧ್ಯಮಗಳಿಗೆ ದೊರಕಿವೆ. ಈ ಎರಡು ಸ್ಕೋರ್ ಕಾರ್ಡ್​ಗಳು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಾಕ್ಷಿಯಾಗಿದೆ. ಬಂಧಿತರಾದ ನಾಲ್ವರಲ್ಲಿ ಒಬ್ಬರಾದ ಅನುರಾಗ್ ಯಾದವ್ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕೋಚಿಂಗ್ ಹಬ್ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆತನನ್ನು ಚಿಕ್ಕಪ್ಪ ಸಿಕಂದರ್ ಅವರು ಸಂಪರ್ಕಿಸಿ ಸಮಸ್ತಿಪುರಕ್ಕೆ ಹೋಗುವಂತೆ ಹೇಳಿದ್ದರು. ಸಿಕಂದರ್ ಕೂಡ ಈಗ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಅಂತೆಯೇ ಪರೀಕ್ಷೆಯ ಹಿಂದಿನ ರಾತ್ರಿ ಕೆಲವು ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಅನುರಾಗ್​ಗೆ ನೀಡಲಾಗಿತ್ತು. ಈ ಪ್ರಶ್ನೆಗಳು ಮರುದಿನ ಪರೀಕ್ಷೆಯಲ್ಲಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಬಿಡುಗಡೆ ಮಾಡಿದ ಅನುರಾಗ್ ಅವರ ಸ್ಕೋರ್ ಕಾರ್ಡ್​ನಲ್ಲಿ 720 ರಲ್ಲಿ 185 ಅಂಕಗಳನ್ನು ಗಳಿಸಿದ್ದಾರೆ. ಅವರ ಒಟ್ಟು ಶೇಕಡಾವಾರು ಸ್ಕೋರ್ 54.84 (ರೌಂಡ್ ಆಫ್). ಆದರೆ ಪ್ರತ್ಯೇಕ ವಿಷಗಯಳಲ್ಲಿ ಆತನ ಅಂಕಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿರಲಿಲ್ಲ. ಅನುರಾಗ್ ಭೌತಶಾಸ್ತ್ರದಲ್ಲಿ 85.8 ಪ್ರತಿಶತ ಮತ್ತು ಜೀವಶಾಸ್ತ್ರದಲ್ಲಿ 51 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಆದರೆ ಅವನ ರಸಾಯನಶಾಸ್ತ್ರದ ಅಂಕವು ಶೇಕಡಾ 5 ಮಾತ್ರ! ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ತನಗೆ ಪ್ರಶ್ನೆಗಳು ಬಂದಿವೆ ಎಂದು ಹೇಳಿದರೂ 22 ವರ್ಷದ ವಿದ್ಯಾರ್ಥಿಗೆ ರಸಾಯನಶಾಸ್ತ್ರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಂಕಗಳು ಸಿಗದೇ ಹೋಗಿರುವುದು ಅಚ್ಚರಿಗೆ ಕಾರಣವಾಗಿದೆ.

ಅನುರಾಗ್ ಅವರ ರಾಷ್ಟ್ರಿಯ ಮಟ್ಟದ ರ್ಯಾಂಕ್​ 10,51,525 ಎಂದು ಉಲ್ಲೇಖಿಸಲಾಗಿದೆ ಮತ್ತು ಒಬಿಸಿ ಅಭ್ಯರ್ಥಿಯಾಗಿ ಅವರ ವರ್ಗದ ಶ್ರೇಯಾಂಕ 4,67,824 ಆಗಿದೆ. ಅನುರಾಗ್ ಅವರನ್ನು ಬಂಧಿಸಲಾಗಿದ್ದು, ಇತರ ಮೂವರನ್ನು ಪ್ರಶ್ನಿಸಲಾಗಿದೆ. ಈ ಮೂವರೂ ಒಬಿಸಿ ವರ್ಗಕ್ಕೆ ಸೇರಿದವರು. ಅವರಲ್ಲಿ ಒಬ್ಬರು ಪರೀಕ್ಷೆಯಲ್ಲಿ 720 ರಲ್ಲಿ 300 ಅಂಕಗಳನ್ನು ಗಳಿಸಿದ್ದಾರೆ ಮತ್ತು ಶೇಕಡಾವಾರು 73.37 (ರೌಂಡ್-ಆಫ್) ಆಗಿದೆ. ಇಲ್ಲಿಯೂ ಪ್ರತ್ಯಕೇ ವಿಷಯಗಳ ಅಂಕಗಳು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಜೀವಶಾಸ್ತ್ರದಲ್ಲಿ ಶೇ.87.8, ಭೌತಶಾಸ್ತ್ರದಲ್ಲಿ ಶೇ.15.5 ಹಾಗೂ ರಸಾಯನಶಾಸ್ತ್ರದಲ್ಲಿ ಶೇ.15.3 ಅಂಕಗಳನ್ನು ಗಳಿಸಿದ್ದಾರೆ. ಇತರ ಇಬ್ಬರು ವಿದ್ಯಾರ್ಥಿಗಳ ಸ್ಕೋರ್ ಕಾರ್ಡ್ ಗಳು ಎಲ್ಲಾ ಮೂರು ವಿಷಯಗಳಲ್ಲಿ ಉತ್ತಮವಾಗಿದೆ. ಅವರಲ್ಲಿ ಒಬ್ಬರು 720 ರಲ್ಲಿ 581 ಮತ್ತು ಇನ್ನೊಬ್ಬರು 483 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರ ಸಂಬಳ 27% ಹೆಚ್ಚಿಸಿದರೆ ಒಟ್ಟು ಏರಿಕೆ ಎಷ್ಟಾಗಲಿದೆ? ಇಲ್ಲಿದೆ ಲೆಕ್ಕಾಚಾರ

ಪ್ರಶ್ನೆ ಪತ್ರಿಕೆಗಳಿಗಾಗಿ ಅಮಿತ್ ಆನಂದ್ ಮತ್ತು ನಿತೀಶ್ ಕುಮಾರ್ ಅವರೊಂದಿಗೆ ನಾಲ್ವರು ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದರು ಎಂದು ಅನುರಾಗ್​ ಅವರ ಚಿಕ್ಕಪ್ಪ ಸಿಕಂದರ್ ಯಡವೇಂದು ಪೊಲೀಸರಿಗೆ ತಿಳಿಸಿದ್ದಾರೆ. ಅಮಿತ್ ಮತ್ತು ನಿತೀಶ್ ಪ್ರತಿ ವಿದ್ಯಾರ್ಥಿಗೆ 30-32 ಲಕ್ಷ ರೂಪಾಯಿಗಳನ್ನು ಕೇಳಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಿದಾಗಿನಿಂದ ಅನೇಕ ಅಕ್ರಮಗಳು ಬೆಳಕಿಗೆ ಬಂದಿವೆ. 67 ವಿದ್ಯಾರ್ಥಿಗಳು 720ಕ್ಕೆ720 ಅಂಕಗಳನ್ನು ಗಳಿಸಿದ್ದಾರೆ. ಅವರಲ್ಲಿ ಆರು ವಿದ್ಯಾರ್ಥಿಗಳು ಹರಿಯಾಣದ ಒಂದೇ ಕೋಚಿಂಗ್​ ಸೆಂಟರ್​ನವರು. ಈ ಅಕ್ರಮದ ಕುರಿತು ರಾಷ್ಟ್ರಿಯ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು.

Exit mobile version