Site icon Vistara News

Narendra Modi : ಜವಾಹರ್​ ಲಾಲ್​ ನೆಹರೂ ಮೀಸಲಾತಿ ವಿರೋಧಿಯಾಗಿದ್ದರು; ಮೋದಿ ಆರೋಪ

BSNL, MTNL, HAL, Air India destroyed by Congress Party Says Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಕಾಂಗ್ರೆಸ್ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದು, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ವಿರುದ್ಧವೂ ಮತ್ತೊಮ್ಮೆ ಕಿಡಿ ಕಾರಿದ್ದಾರೆ. ನೆಹರೂ ಅವರು ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯನ್ನು ನೀಡಿರುವುದನ್ನು ವಿರೋಧಿಸಿದ್ದರು. ಮುಖ್ಯಮಂತ್ರಿಯೊಬ್ಬರಿಗೆ ಪತ್ರ ಬರೆದು ಮೀಸಲಾತಿಯಿಂದ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು ಎಂಬುದಾಗಿ ಆರೋಪಿಸಿದ್ದಾರೆ.

ರಾಜ್ಯ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್​ನ ಆಡಳಿತ ವೈಖರಿಯನ್ನು ಕಟು ಮಾತುಗಳಿಂದ ವಿರೋಧಿಸಿದರು.

“ನೆಹರೂ ಒಮ್ಮೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು, ಅದರಲ್ಲಿ ಅವರು ಮೀಸಲಾತಿಗೆ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಮೀಸಲಾತಿ ಆಡಳಿತ ವ್ಯವಸ್ಥೆಯಲ್ಲಿ ಅದಕ್ಷತೆಯನ್ನು ಉತ್ತೇಜಿಸುತ್ತದೆ. ಅರ್ಹರಲ್ಲದ ಜನರನ್ನು ಅಧಿಕಾರಕ್ಕ ತರುತ್ತದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ : ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ

ಎಸ್ಸಿ, ಎಸ್ಟಿ ಅಥವಾ ಒಬಿಸಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆತರೆ, ಸರ್ಕಾರದ ಕೆಲಸದ ಗುಣಮಟ್ಟ ಕುಸಿಯುತ್ತದೆ ಎಂದು ನೆಹರೂಜಿ ಹೇಳುತ್ತಿದ್ದರು. ಅವರು ನೇಮಕಾತಿಯನ್ನು ಸಹ ನಿಲ್ಲಿಸಿದ್ದರು. ಇಂತಹ ಉದಾಹರಣೆಗಳ ಮೂಲಕ ಕಾಂಗ್ರೆಸ್​​ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು” ಎಂದು ಹೇಳಿದರು.

ಕಾಂಗ್ರೆಸ್​ ಪಕ್ಷವು ಯಾವಾಗಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಪ್ರಧಾನಿ ಘೋಷಿಸಿದರು.

ನಮ್ಮ ಆದ್ಯತೆ ಹಿಂದುಳಿದ ವರ್ಗಕ್ಕೆ

ನಾವು ಯಾವಾಗಲೂ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡುತ್ತೇವೆ. ಮೊದಲು ದಲಿತರು ಮತ್ತು ಈಗ ಆದಿವಾಸಿಗಳು. ಅವರೆಲ್ಲರೂ ನಮ್ಮ ಯೋಜನೆಗಳ ಫಲಾನುಭವಿಗಳು. ನಮ್ಮ ಎಲ್ಲಾ ಕೆಲಸಗಳು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗಾಗಿ ಎಂದು ಅವರು ಹೇಳಿದರು.

ಅಧ್ಯಕ್ಷರಾಗಿ ಅಧ್ಯಕ್ಷ ಮುರ್ಮು ಅವರ ಆಯ್ಕೆಯನ್ನು ಪ್ರಧಾನಿ ಈ ವೇಳೆ ಉಲ್ಲೇಖಿಸಿದರು. ಅವರು ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಮಹಿಳೆ. ಕಾಂಗ್ರೆಸ್​ ಮುರ್ಮು ಪರವಾಗಿರಲಿಲ್ಲ. ಬಿಜೆಪಿಯಿಂದ ಹೋದವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಆದಿವಾಸಿ ಮಹಿಳೆಯನ್ನು ವಿರೋಧಿಸಿದ್ದಾರೆ ಎಂಬುದಾಗಿ ಮೋದಿ ಮಾತಿನೇಟು ಬೀಡಿದರು. ಸಾರ್ವತ್ರಿಕ ಚುನಾವಣೆಗೆ ಕೆಲವು ವಾರಗಳ ಮೊದಲು ಮೋದಿ ನೇತೃತ್ವದ ಬಿಜೆಪಿ ಆರಾಮದಾಯಕ ಗೆಲುವು ಸಾಧಿಸುತ್ತದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.

Exit mobile version