Site icon Vistara News

National Cricket Academy : ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ 45 ಪಿಚ್​ಗಳಿರುವ ಬೃಹತ್​​ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ

New National Cricket Academy

ಬೆಂಗಳೂರು: ನಗರದಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರವು ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy) ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಕ್ರಿಕೆಟಿಗರಿಗೆ ಲಭ್ಯವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿ ಜಯ್ ಶಾ ಪ್ರಕಟಿಸಿದ್ದಾರೆ. ಈ ಅತ್ಯಾಧುನಿಕ ಕೇಂದ್ರವು ದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಪಡಿಸುವ ಮತ್ತು ಪೋಷಿಸುವ ವಿಧಾನದಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ.

ಹೊಸ ಎನ್​​ಸಿಎ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಿದೆ. ಕ್ರಿಕೆಟಿಗರಿಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಉತ್ತಮ ವಾತಾವರಣ ಒದಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯವು ಮೂರು ಅಂತಾರರಾಷ್ಟ್ರೀಯ ಗುಣಮಟ್ಟದ ಆಟದ ಮೈದಾನಗಳನ್ನು ಒಳಗೊಂಡಿರುತ್ತದೆ. ಜೊತೆಗೆ 45 ನೆಟ್​ಪ್ರಾಕ್ಟೀಸ್​ ಪಿಚ್ ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ ಇದು ಒಳಾಂಗಣ ಕ್ರಿಕೆಟ್ ಪಿಚ್​​ಗಳನ್ನು ಹೊಂದಿದೆ. ಅದೇ ರೀತಿ ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ ಪ್ರದೇಶ, ಪುನಶ್ಚೇತನ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಹೊಂದಿರುತ್ತದೆ.

ಜಯ್ ಶಾ ತಮ್ಮ ಪ್ರಕಟಣೆಯಲ್ಲಿ, ಎನ್​​ಸಿಎ ಪ್ರಾರಂಭದ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್​ಗೆ ಒದಗಿಸುವ ಅಪಾರ ಪ್ರಯೋಜನಗಳನ್ನು ವಿವರಿಸಿದ್ದಾರೆ. ಅಕಾಡೆಮಿಯ ಬಗ್ಗೆ ಅವರ ದೃಷ್ಟಿಕೋನವು ಕ್ರಿಕೆಟಿಗರು ಒಗ್ಗೂಡಲು, ಕಲಿಯಲು ಮತ್ತು ಬೆಳೆಯಲು ಒಂದು ಕೇಂದ್ರವನ್ನು ನಿರ್ಮಿಸುವುದಾಗಿದೆ. ಅಂತಿಮವಾಗಿ ರಾಷ್ಟ್ರೀಯ ತಂಡದ ಯಶಸ್ಸಿಗೆ ಕೊಡುಗೆ ನೀಡುವುದೇ ಉದ್ದೇಶವಾಗಿದೆ.

ಇದನ್ನೂ ಓದಿ: Deepika Kumari : ಪದಕದ ಭರವಸೆ ಮೂಡಿಸಿ ಬರಿಗೈಯಲ್ಲಿ ವಾಪಸಾದ ಆರ್ಚರ್​ ದೀಪಿಕಾ ಕುಮಾರಿ

ಬಿಸಿಸಿಐನ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ. ಹೊಸ ಎನ್​ಸಿಎ ಮೂರು ವಿಶ್ವ ದರ್ಜೆಯ ಆಟದ ಮೈದಾನಗಳು, 45 ಅಭ್ಯಾಸ ಪಿಚ್​ಗಳು ಒಳಾಂಗಣ ಕ್ರಿಕೆಟ್ ಪಿಚ್​ಗಳು, ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ, ಚೇತರಿಕೆ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಈ ಉಪಕ್ರಮವು ನಮ್ಮ ರಾಷ್ಟ್ರದ ಪ್ರಸ್ತುತ ಮತ್ತು ಭವಿಷ್ಯದ ಕ್ರಿಕೆಟಿಗರಿಗೆ ತಮ್ಮ ಕೌಶಲ್ಯಗಳನ್ನು ಸಾಧ್ಯವಾದಷ್ಟು ಉತ್ತಮ ವಾತಾವರಣದಲ್ಲಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಜಯ್ ಶಾ ‘ಎಕ್ಸ್’ ನಲ್ಲಿ ಬರೆದಿದ್ದಾರೆ.

ಜಯ್ ಶಾ ಅವರು ಭಾರತೀಯ ಕ್ರಿಕೆಟ್ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕಳೆದ ವರ್ಷ ಭಾರತ ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು. ಜುಲೈನಲ್ಲಿ ದಕ್ಷಿಣ ಆಫ್ರಿಕಾವನ್ನು ಫೈನಲ್​​ನಲ್ಲಿ ಸೋಲಿಸಿದ ನಂತರ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವ ಕಪ್​ ಗೆದ್ದುಕೊಂಡಿದೆ.

Exit mobile version