Site icon Vistara News

ವಿಸ್ತಾರ Money Guide| ಅಂಚೆ ಉಳಿತಾಯ ಗ್ರಾಹಕರಿಗೆ ನೂತನ ಸೇವೆ, ಮೊಬೈಲ್‌ನಲ್ಲೇ ಸಕಲ ಮಾಹಿತಿ

post office

Rent not paid so landlord locke post office

ಬೆಂಗಳೂರು: ಭಾರತೀಯ ಅಂಚೆ ಇಲಾಖೆ ತನ್ನ ಲಕ್ಷಾಂತರ ಗ್ರಾಹಕರ ಅನುಕೂಲಕ್ಕಾಗಿ (ವಿಸ್ತಾರ Money Guide) ಇಂಟರಾಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ (Interactive voice response) ಸೇವೆಯನ್ನು ಆರಂಭಿಸಿದೆ.

ಬಳಕೆದಾರರು ತಮ್ಮ ಮೊಬೈಲ್‌ ಫೋನ್‌ ಮೂಲಕ ಈ ಸೇವೆಯನ್ನು ಪಡೆಯಬಹುದು. ನಿಮ್ಮ ಮೊಬೈಲ್‌ನಲ್ಲಿಯೇ ಅಂಚೆ ಇಲಾಖೆಯ ಎಲ್ಲ ಉಳಿತಾಯ ಯೋಜನೆ ಖಾತೆಗಳಲ್ಲಿ ನಿಮ್ಮ ಹೂಡಿಕೆಯ ಸ್ಥಿತಿಗತಿಯ ವಿವರಗಳನ್ನು, ಯೋಜನೆಯ ಮಾಹಿತಿಗಳನ್ನು ಪಡೆಯಬಹುದು. ಇದಕ್ಕಾಗಿ ನೀವು ಅಂಚೆ ಕಚೇರಿಗೆ ಹೋಗಬೇಕಿಲ್ಲ.

ಟೋಲ್‌ ಫ್ರೀ ಸಂಖ್ಯೆ: ಅಂಚೆ ಇಲಾಖೆ ತನ್ನ ಬಳಕೆದಾರರ ಅನುಕೂಲಕ್ಕಾಗಿ ಟೋಲ್‌ ಫ್ರೀ ಸಂಖ್ಯೆಯನ್ನು ಬಿಡುಗಡೆಗೊಳಿಸಿದೆ. ಇದರ ಮೂಲಕ ಪಿಪಿಎಫ್‌, ಎನ್‌ಎಸ್‌ಸಿ, ಸುಕನ್ಯಾ ಸಮೃದ್ಧಿ, ಅಂಚೆ ವಿಮೆ, ಎಟಿಎಂ ಇತ್ಯಾದಿಗಳ ವಿವರ, ನಿಮ್ಮ ಹೂಡಿಕೆಯ ಅಪ್‌ಡೇಟ್‌, ಬಡ್ಡಿ ದರ ವಿವರ ಎಲ್ಲವನ್ನೂ ಪಡೆಯಬಹುದು. ಟೋಲ್‌ ಫ್ರೀ ಸಂಖ್ಯೆ 18002666868.

ನೀವು ಇಲಾಖೆಯ ಯೋಜನೆಗಳಲ್ಲಿ ನೋಂದಣಿಯಾಗಿರುವ ನಿಮ್ಮ ಮೊಬೈಲ್‌ ಸಂಖ್ಯೆಯ ಮೂಲಕ ಕರೆ ಮಾಡಿ ಪ್ರಯೋಜನ ಪಡೆಯಬಹುದು. ಕನ್ನಡ ಭಾಷೆಯಲ್ಲಿಯೂ ಈ ಸೇವೆ ಲಭ್ಯ. ಗ್ರಾಮೀಣ ಪ್ರದೇಶದ ಜನತೆಗೆ ಇದರಿಂದ ಬಹಳ ಅನುಕೂಲವಾಗಲಿದೆ. ಅವರು ಅಂಚೆ ಕಚೇರಿಗೆ ಭೇಟಿ ನೀಡದೆ ತಮ್ಮ ಮೊಬೈಲ್‌ನಲ್ಲಿಯೇ ವಿವರ ಪಡೆಯಬಹುದು. ಗ್ರಾಹಕರು ಅಂಚೆ ಇಲಾಖೆಯ ತಮ್ಮ ಖಾತೆಯಲ್ಲಿ ರಿಜಿಸ್ಟರ್‌ ಆಗಿರುವ ಮೊಬೈಲ್‌ ಸಂಖ್ಯೆಯನ್ನೇ ಬಳಸಬೇಕು.

ಇದನ್ನೂ ಓದಿ: ವಿಸ್ತಾರ Money Guide: ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಎಷ್ಟು ಆದಾಯ ಗಳಿಸಬಹುದು?

Exit mobile version