Site icon Vistara News

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಪ್ರಜಾವಾಣಿಯ ಶಾಂತಕುಮಾರ್‌ ಸೇರಿ 6 ಸಾಧಕರಿಗೆ ಯೋಗ ರತ್ನ ಪ್ರಶಸ್ತಿ

yoga ratna award

ಬೆಂಗಳೂರು: ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಒಡಿಶಾದ ಸಂಸದ ಪ್ರತಾಪ್‌ ಚಂದ್ರ ಸಾರಂಗಿ, ʼಪ್ರಜಾವಾಣಿʼ ಪತ್ರಿಕೆಯ (ದಿ ಪ್ರಿಂಟರ್ಸ್‌ (ಮೈಸೂರು) ಪ್ರೈ. ಲಿ.ಯ ನಿರ್ದೇಶಕರು) ಕೆ ಎನ್‌ ಶಾಂತಕುಮಾರ್‌ ಸೇರಿದಂತೆ ಆರು ಸಾಧಕರಿಗೆ ಈ ವರ್ಷದ ʼಯೋಗ ರತ್ನʼ ಪ್ರಶಸ್ತಿ ಪ್ರಕಟಿಸಲಾಗಿದೆ.

ಖ್ಯಾತ ಶ್ವಾಸಗುರು, ಪಂಚಮಸಾಲಿ ಪೀಠದ ಜಗದ್ಗುರು  ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದ ಶ್ವಾಸ ಯೋಗ ಸಂಸ್ಥೆಯು ಕಳೆದ ಆರು ವರ್ಷಗಳಿಂದ ವಿಶ್ವಾದ್ಯಂತ ಅತ್ಯುತ್ತಮ ಯೋಗ ಸಾಧಕರನ್ನು ಗುರುತಿಸಿ ಅವರಿಗೆ ಈ ಯೋಗರತ್ನ ಪ್ರಶಸ್ತಿ ನೀಡುತ್ತಿದೆ.

ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾದ ಇನ್ನಿತರ ಯೋಗ ಸಾಧಕರೆಂದರೆ: ಕಲಬುರಗಿ ಸಮಾಧಾನ ಆಶ್ರಮದ ಜಡೆಯ ಶ್ರೀ ಶಾಂತಲಿಂಗೇಶ್ವರ ಸ್ವಾಮೀಜಿ, ಋಷಿದ್ವಾರ ಆರೋವ್ಯಾಲಿ ಆಶ್ರಮದ ಸ್ವಾಮಿ ಬ್ರಹ್ಮದೇವ್‌ ಜೀ, ಹರಿದ್ವಾರ ಶಾಂತಿಕುಂಜ್‌ನ ಆಲ್‌ ವರ್ಲ್ಡ್‌ ಗಾಯತ್ರಿ ಪರಿವಾರದ ಡಾ. ಚಿನ್ಮಯ್‌ ಪಾಂಡ್ಯಾ.

ಜೂನ್‌ 11ರಂದು ಬೆಂಗಳೂರಿನ ಜಯಮಹಲ್‌ ಮುಖ್ಯ ರಸ್ತೆಯಲ್ಲಿರುವ ಚಾಮರವಜ್ರದಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಶ್ವಾಸ ಯೋಗ ಸಂಸ್ಥೆಯು ಯೋಗ ಪ್ರಚಾರದ ಜತೆಜತೆಗೇ ಈ ಪ್ರಶಸ್ತಿ ನೀಡುತ್ತಿದ್ದು, ಇದುವರೆಗೆ 126 ವರ್ಷದ ಸ್ವಾಮಿ ಶಿವಾನಂದ ಬಾಬಾಜೀ, ಅಮೆರಿಕದ ತಾವೋ ಪೋರ್ಚಾನ್ ಲೀಂಚ್‌, ತಮಿಳುನಾಡಿನ ಅಮ್ಮ ನಾನಮ್ಮಾಳ್‌, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ, ಹಿಮಾಲಯದ ಮಹಾಯೋಗಿ ಪೈಲಟ್ ಬಾಬಾಜೀ, ಸೌದಿ ಅರೇಬಿಯಾದ ನೌಫ್ ‌ಅಲ್‌ ಮಾರ್ವಾಯಿ ಹಾಗೂ ಫ್ರಾನ್ಸ್‌ನ ಲೀ ಯೋಗಿ ಕುಡೋ ಸೇರಿದಂತೆ ಅನೇಕ ಸಾಧಕರನ್ನು ಗೌರವಿಸಿದೆ.

ಇದನ್ನೂ ಓದಿ | yoga day 2022: ದೇಶದಾರೋಗ್ಯಕ್ಕಾಗಿ ನಾವೆಲ್ಲರೂ ಯೋಗ ಮಾಡೋಣ!

Exit mobile version