Site icon Vistara News

Muhammad Yunus : ನೊಬೆಲ್ ಪುರಸ್ಕೃತ ಮುಹಮ್ಮದ್ ಯೂನುಸ್​ ಬಾಂಗ್ಲಾ ಮಧ್ಯಂತರ ಸರ್ಕಾರದ ಸಲಹೆಗಾರ

Muhammad Yunus

ನವದೆಹಲಿ: ಬಡತನದ ವಿರುದ್ಧದ ಹೋರಾಟಗಾರ ಹಾಗೂ ‘ಬಡವರ ಬ್ಯಾಂಕರ್’ ಎಂದೇ ಖ್ಯಾತಿ ಹೊಂದಿರುವ ನೊಬೆಲ್ ಪ್ರಶಸ್ತಿ ವಿಜೇತ ಡಾ.ಮುಹಮ್ಮದ್ ಯೂನುಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಲಿದ್ದಾರೆ. ಆ ದೇಶದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಚಳವಳಿಯ ಸಂಯೋಜಕರು ತಿಳಿಸಿದ್ದಾರೆ ಈ ಮಾಹಿತಿ ಪ್ರಕಟಿಸಿದ್ದಾರೆ ಎಂಬುದಾಗಿ ಡೈಲಿ ಸ್ಟಾರ್ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿಯೂ ಈ ಮಾಹಿತಿ ನೀಡಲಾಗಿದೆ. ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಆಂದೋಲನದ ಪ್ರಮುಖ ಸಂಯೋಜಕರಲ್ಲಿ ಒಬ್ಬರಾದ ನಹೀದ್ ಇಸ್ಲಾಂ ಈ ವಿವರಣೆ ನೀಡಿದ್ದರೆ. ದೇಶದ ಪರಿಸ್ಥಿತಿಯನ್ನು ಪರಿಗಣಿಸಿ ಪ್ರೊಫೆಸರ್ ಯೂನುಸ್ ಜವಾಬ್ದಾರಿ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮಧ್ಯಂತರ ಸರ್ಕಾರವನ್ನು ರಚಿಸಲು ನಾವು ನಿರ್ಧರಿಸಿದ್ದೇವೆ. ಇದರಲ್ಲಿ ದೇಶವಾಸಿಗಳ ವಿಶ್ವಾಸ ಹೊಂದಿರುವ ಅಂತರರಾಷ್ಟ್ರೀಯ ಖ್ಯಾತಿಯ ನೊಬೆಲ್ ಪ್ರಶಸ್ತಿ ವಿಜೇತ ಡಾ.ಮೊಹಮ್ಮದ್ ಯೂನುಸ್ ಮುಖ್ಯ ಸಲಹೆಗಾರರಾಗಿರುತ್ತಾರೆ ಎಂದು ನಹೀದ್ ಘೋಷಿಸಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ವಿವಾದಾತ್ಮಕ ಕೋಟಾ ವ್ಯವಸ್ಥೆಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತಗೊಂಡಿತ್ತು. ಆ ಬಳಿಕ ಉಂಟಾದ ಅರಾಜಕತೆಯಿಂದಾಗಿ ಪ್ರಧಾನಿ ಹಸೀನಾ ಆಡಳಿತದ ಪತನಗೊಂಡಿತ್ತು. ಇನ್ನು ಮಧ್ಯಂತರ ಸರ್ಕಾರವನ್ನು ರಚಿಸಲಾಗುವುದು ಎಂದು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಹೇಳಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಒಂದು ತಿಂಗಳ ಕಾಲ ನಡೆದ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಅಧ್ಯಕ್ಷರು ಆದೇಶಿಸಿದ್ದಾರೆ.

ಯೂನುಸ್ ಅವರ ಸಾರ್ವಜನಿಕ ಪ್ರೊಫೈಲ್ ಮತ್ತು ಪಾಶ್ಚಿಮಾತ್ಯ ದೇಶಗಳೊಂದಿಗೆ ವಿಶೇಷವಾಗಿ ಅಮೆರಿಕದೊಂದಿಗೆ ಅವರ ನಿಕಟ ಸಂಪರ್ಕ ಹೊಂದಿದ್ದರು. ಹೀಗಾಗಿ 2008ರಲ್ಲಿ ಅಧಿಕಾರಕ್ಕೆ ಮರಳಿದಾಗಿನಿಂದ ಹಸೀನಾ ಅವರೊಂದಿಗೆ ಒಳ್ಳೆಯ ಸಂಬಂಧ ಹೊಂದಿರಲಿಲ್ಲಲ. 2011 ರಲ್ಲಿ,ಹಸೀನಾ ನೇತೃತ್ವದ ಸರ್ಕಾರವು ಯೂನಸ್​ ಅವರನ್ನು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಬಲವಂತವಾಗಿ ವಜಾ ಮಾಡಿತ್ತು. ಅವರು ಕಾನೂನಾತ್ಮಕ 60 ವರ್ಷ ಮೀರಿದವರು ಎಂದು ಕಾರಣಕ್ಕೆ ನೀಡಿತ್ತು. ಅದೇ ರೀತಿ ಅವರು ಸಲಿಂಗಕಾಮದ ಉತ್ತೇಜಕ ಎಂದು ಆರೋಪಿಸಲಾಗಿತ್ತು. ಯೂನುಸ್ ವಿರುದ್ಧ ಹಸೀನಾ ಸರ್ಕಾರ 190ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.

ಮುಹಮ್ಮದ್ ಯೂನುಸ್ ಯಾರು?

ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜನರನ್ನು ಬಡತನದಿಂದ ಹೊರತರುವಲ್ಲಿ ಮಾಡಿದ ಕೆಲಸಕ್ಕಾಗಿ 83 ವರ್ಷದ ಅವರಿಗೆ 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು. ಅವರು ಸ್ಥಾಪಿಸಿದ ಮೈಕ್ರೋಫೈನಾನ್ಸ್ ಸಾಲದಾತ ಗ್ರಾಮೀಣ ಬ್ಯಾಂಕ್ ಬಾಂಗ್ಲಾದೇಶದ ಗ್ರಾಮೀಣ ಬಡವರಿಗೆ ಸಣ್ಣ ಸಾಲಗಳನ್ನು ನೀಡುತ್ತದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ.

ಇದನ್ನೂ ಓದಿ: Bangladesh Protest : ಬಾಂಗ್ಲಾದೇಶ ಬಿಕ್ಕಟ್ಟು; ಸರ್ವಪಕ್ಷ ಸಭೆ ಕರೆದ ವಿದೇಶಾಂಗ ಸಚಿವ ಜೈಶಂಕರ್

ಈ ವರ್ಷದ ಆರಂಭದಲ್ಲಿ, ದೇಶದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂನುಸ್​ಗೆ ಶಿಕ್ಷೆ ವಿಧಿಸಲಾಯಿತು. ದೇಶದ ಅತಿದೊಡ್ಡ ಮೊಬೈಲ್ ಫೋನ್ ಕಂಪನಿಯಾದ ಗ್ರಾಮೀಣ ಫೋನ್​ನಲ್ಲಿ ಪಾಲನ್ನು ಹೊಂದಿರುವ ಗ್ರಾಮೀಣ ಟೆಲಿಕಾಂನ ಕಾರ್ಮಿಕರ ಕಲ್ಯಾಣ ನಿಧಿಯಿಂದ 2 ಮಿಲಿಯನ್ ಡಾಲರ್ ದುರುಪಯೋಗಪಡಿಸಿದ ಆರೋಪದ ಮೇಲೆ ಬಾಂಗ್ಲಾದೇಶದ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.

1940 ರಲ್ಲಿ ಚಿತ್ತಗಾಂಗ್​​ನಲ್ಲಿ ಜನಿಸಿದ ಮುಹಮ್ಮದ್ ಯೂನುಸ್, ಅಮೆರಿಕದಲ್ಲಿ ವಾಂಡರ್ಬಿಲ್ಟ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು. ಅದಕ್ಕೆ ಮೊದಲು ಢಾಕಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು. ಯೂನುಸ್ ಬಾಂಗ್ಲಾದೇಶಕ್ಕೆ ಮರಳುವ ಮೊದಲು ಮಿಡಲ್ ಟೆನ್ನೆಸ್ಸೀ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.

Exit mobile version