Site icon Vistara News

Kavya Maran : ಹೈದರಾಬಾದ್ ತಂಡ ಸೋಲುತ್ತಿದ್ದಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾಮಾರನ್​

Kavya Maran

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ (ಮೇ 26) ನಡೆದ ಐಪಿಎಲ್ 2024 ರ (IPL 2024) ಫೈನಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡದ ನಿರಾಶಾದಾಯಕ ಸೋಲಿನ ನಂತರ ಆ ತಂಡ ಮಾಲಕಿ ಕಾವ್ಯಾ ಮಾರನ್ (Kavya Maran) ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ಪಂದ್ಯ ಸೋಲುತ್ತಿದ್ದಂತೆ ಬೇಸರಕ್ಕೆ ಒಳಗಾದ ಕ್ಯಾಮೆರಾ ಕಣ್ಣಿಗೆ ಕೈಯೆತ್ತಿ ಚಪ್ಪಾಳೆ ತಟ್ಟಿದರು ಬಳಿಕ ತಿರುಗಿ ನಿಂತು ಕಣ್ಣೀರು ಒರೆಸಿಕೊಂಡರು. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯಿತು.

ಎಸ್ಆರ್​ಎಚ್​ ತಂಡವನ್ನು ಮಣಿಸಿದ ಕೆಕೆಆರ್ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೆಕೆಆರ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿತು. ಕೆಕೆಆರ್ ವಿರುದ್ಧ ಸತತ ಮೂರನೇ ಬಾರಿಗೆ ಸೋತಿದ್ದರಿಂದ ಟಾಸ್ ಹೊರತುಪಡಿಸಿದರೆ ಎಸ್ಆರ್​ಎಚ್​ಗೆ ಏನೂ ಲಾಭವಾಗಲಿಲ್ಲ.

ಕೋಲ್ಕತಾ ಮೂಲದ ತಂಡದ ವಿರುದ್ಧ 4 ರನ್​ಗಳ ಸೋಲಿನೊಂದಿಗೆ ಎಸ್​ಆರ್​ಎಚ್​​ ತನ್ನ ಋತುವನ್ನು ಪ್ರಾರಂಭಿಸಿತು. ನಂತರ ಮೊದಲ ಕ್ವಾಲಿಫೈಯರ್​ನಲ್ಲಿ ಅವರ ವಿರುದ್ಧ 8 ವಿಕೆಟ್​ಗಳ ಹೀನಾಯ ಸೋಲನ್ನು ಅನುಭವಿಸಿತು. ಫೈನಲ್​ನ್ಲಲಿ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಅವರಿಗೆ ಅವಕಾಶವಿತ್ತು. ಆದರೆ ಸಂಪೂರ್ಣವಾಗಿ ವೈಫಲ್ಯ ಕಂಡಿತು. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಂತರ ಮೂರು ಬಾರಿ ಪ್ರಶಸ್ತಿ ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಕೆಕೆಆರ್ ಪಾತ್ರವಾಗಿದೆ.

ಕಡಿಮೆ ಸ್ಕೋರ್​ನ ಕಳಪೆ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್​​

ಚೆನ್ನೈ: ಐಪಿಎಲ್​ 2024ರ ಫೈನಲ್ ಪಂದ್ಯದಲ್ಲಿ (IPL 2024 Final) ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡ 113 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್​ನಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ಕಳಪೆ ದಾಖಲೆಯನ್ನು ಬರೆಯಿತು. ಅಲ್ಲದೆ 11 ವರ್ಷಗಳ ಹಿಂದೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಫೈನಲ್​ನಲ್ಲಿ 125ರನ್​ಗಳಿಗೆ 9 ಕಳೆದುಕೊಂಡ ಕಳಪೆ ದಾಖಲೆಯನ್ನು ಮುರಿಯಿತು.

ಇದನ್ನೂ ಓದಿ: Virat Kohli : ಐಪಿಎಲ್​ 2024ರ ಆರೆಂಜ್ ಕ್ಯಾಪ್ ಗೆದ್ದು ಹೊಸ ದಾಖಲೆ ಬರೆದ ವಿರಾಟ್​ ಕೊಹ್ಲಿ

ಬೆಂಗಳೂರು ವಿರುದ್ಧದ ಲೀಗ್ ಪಂದ್ಯದಲ್ಲಿ 3 ವಿಕೆಟ್​ಗೆ 287 ಸ್ಕೋರ್ ಮಾಡುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಮೊತ್ತವನ್ನು ಗಳಿಸಿದ ಎಸ್ಆರ್​ಎಚ್​​ ಬ್ಯಾಟರ್​ಗಳು ಈ ಋತುವಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶನ ನೀಡಲು ವಿಫಲರಾದರು ಮತ್ತು ಕಡಿಮೆ ಮೊತ್ತಕ್ಕೆ ಔಟಾದರು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್, ಆಂಡ್ರೆ ರಸೆಲ್ ಹಾಗೂ ಹರ್ಷಿತ್ ರಾಣಾ ಭರ್ಜರಿ ಬೌಲಿಂಗ್​ ಮಾಡಿದರು. ಕುತೂಹಲಕಾರಿ ಸಂಗತಿಯೆಂದರೆ, ಐಪಿಎಲ್ 2024 ಫೈನಲ್​ನಲ್ಲಿ ಕೆಕೆಆರ್​​ ತಂಡ ಎಲ್ಲ ಬೌಲರ್​ಗಳು ವಿಕೆಟ್ ಪಡೆದರು.

ಐಪಿಎಲ್ ಫೈನಲ್​ನಲ್ಲಿ ಕನಿಷ್ಠ ಮೊತ್ತ

113/10 – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ – 2024
125/9 – ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2013
128/6 – ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ – 2016
129/8 – ಮುಂಬೈ ಇಂಡಿಯನ್ಸ್ ವಿರುದ್ಧ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 2017
130/9 – ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ – 2022

2013ರ ಐಪಿಎಲ್ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ನೀಡಿದ್ದ 148 ರನ್​ಗಳ ಗುರಿ ಬೆನ್ನಟ್ಟುವ ಹಾದಿಯಲ್ಲಿ ಚೆನ್ನೈ 23 ಸೋತಿತ್ತು. ಅದೇನೇ ಇದ್ದರೂ, ಕೋಲ್ಕತಾ ತನ್ನ ಮೂರನೇ ಪ್ರಶಸ್ತಿಯನ್ನು ಗೆಲ್ಲಲು 114 ರನ್​​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಬೇಕಾಗಿದೆ. ಮತ್ತೊಂದೆಡೆ, ಹೈದರಾಬಾದ್ ತಂಡವು ಭಾನುವಾರ ಚೆನ್ನೈನಲ್ಲಿ ಇತಿಹಾಸವನ್ನು ಬರೆಯಲು ಬಯಸಿದರೆ ಪವಾಡದ ಅಗತ್ಯವಿದೆ.

Exit mobile version