Site icon Vistara News

Mayank Yadav : ನಾನ್​ ವೆಜ್​ ತ್ಯಜಿಸಿದ ಅತಿ ವೇಗದ ಬೌಲರ್​ ಮಯಾಂಕ್​; ಹಿನ್ನೆಲೆ ಬಹಿರಂಗ ಮಾಡಿದ ತಾಯಿ

Mayanka Yadav

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ 2024 ರ ಋತುವಿನಲ್ಲಿ 156.7 ಕಿ.ಮೀ ವೇಗದ ಚೆಂಡು ಎಸೆಯುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಹೊಸ ವೇಗದ ಸೆನ್ಸೇಷನ್ ಮಯಾಂಕ್ ಯಾದವ್ (Mayank Yadav) ಸುದ್ದಿಯಲ್ಲಿದ್ದಾರೆ. ಯಾದವ್ ಅವರ ಅದ್ಭುತ ವೇಗದಿಂದಾಗಿ ಐಪಿಎಲ್​ನ ಹಾಲಿ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್​​ಗೆ ಗೆಲುವು ಸಾಧಿಸಲು ಸಾಧ್ಯವಾಗಿದೆ. ಆದಾಗ್ಯೂ, ಯಾದವ್ ಅವರ ಅದ್ಭುತ ಎಸೆತಗಳು ಮತ್ತು ಎಕ್ಸ್​ಪ್ರೆಸ್​ ವೇಗದ ಬಗ್ಗೆ ನೂರಾರು ವಿಮರ್ಶೆಗಳು ಶುರುವಾಗಿವೆ. ಅಂತೆಯ ಅವರ ತಾಯಿ ಮಮತಾ ಅವರು ಪುತ್ರನ ಸಾಧನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಕ್ರಿಕೆಟ್​ಗಾಗಿ ತಮ್ಮ ಪುತ್ರ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿರುವುದನ್ನೂ ಬಹಿರಂಗ ಮಾಡಿದ್ದಾರೆ. ಪ್ರಮುಖವಾಗಿ ಯಾದವ್​ ಮಾಂಸಾಹಾರ ತ್ಯಜಿಸಿದ ಕತೆಯನ್ನು ಹೇಳಿದ್ದಾರೆ.

ಮಯಾಂಕ್ ಅವರ ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ ಅವರ ತಾಯಿ, ಕಳೆದ ಎರಡು ವರ್ಷಗಳಿಂದ ತನ್ನ ಮಗ ಸಸ್ಯಾಹಾರಿಗೆ ಬದಲಾಗಿದ್ದಾನೆ ಎಂದು ಹೇಳಿದ್ದಾರೆ. ಅದಕ್ಕಿಂತ ಮೊದು ಆತ ಮಾಂಸಾಹಾರ ತಿನ್ನುತ್ತಿದ್ದ ಎಂದು ನುಡಿದಿದ್ದಾರೆ.

“ಮಯಾಂಕ್ ಈಗಷ್ಟೇ ಸಸ್ಯಾಹಾರಿಯಾಗಿದ್ದಾರೆ. ಈ ಮೊದಲು ಅವರು ಮಾಂಸ ಆಹಾರವನ್ನು ಸೇವಿಸುತ್ತಿದ್ದ.. ಕಳೆದ 2 ವರ್ಷಗಳಿಂದ ಸಸ್ಯಾಹಾರಿ ಆಹಾರವನ್ನು ಮಾತ್ರ ಸೇವಿಸುತ್ತಿದ್ದಾನೆ. ಅವರು ಏನು ಮಾಡಿದರೂ ತಿನ್ನುತ್ತಿದ್ದಾನೆ. ಚಾರ್ಟ್ ಆಧಾರದ ಮೇಲೆ ನಾವು ಅವನಿಗಾಗಿ ಆಹಾರ ಸಿದ್ಧಪಡಿಸುತ್ತೇವೆ. ದಾಲ್, ರೊಟ್ಟಿ, ಅನ್ನ, ಹಾಲು, ತರಕಾರಿಗಳು ಇತ್ಯಾದಿಗಳನ್ನು ತಿನ್ನುತ್ತಾನೆ ” ಎಂದು ಮಯಾಂಕ್ ತಾಯಿ ಮಮತಾ ಹೇಳಿದ್ದಾರೆ.

ಯಾಕೆ ಮಾಂಸಾಹಾರ ಬಿಟ್ಟರು ಎಂಬುದು ಗೊತ್ತಿಲ್ಲ

ಮಯಾಂಕ್ ಮಾಂಸಾಹಾರ ಏಕೆ ತ್ಯಜಿಸಿದ ಎಂಬುದು ಇನ್ನೂ ಗೊತ್ತಿಲ್ಲ ಎಂದು ಹೇಳಿದ ಮಮತಾ ಎರಡು ಕಾರಣಗಳನ್ನು ಅಂದಾಜಿಸಿದ್ದಾರೆ. ಯಾದವ್​ಗೆ ಶ್ರೀಕೃಷ್ಣನ ಮೇಲೆ ದೊಡ್ಡ ಭಕ್ತಿಯಿದೆ. ಎರಡನೆಯದಾಗಿ ಮಾಂಸಾಹಾರಿ ಆಹಾರವು ಅತನ ದೇಹಕ್ಕೆ ಸರಿಹೊಂದುವುದಿಲ್ಲ ಎಂದು ತಿಳಿದುಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Kaia Arua : 33ನೇ ವರ್ಷಕ್ಕೆ ಮಹಿಳಾ ಕ್ರಿಕೆಟರ್ ಸಾವು; ಕ್ರಿಕೆಟ್ ಕ್ಷೇತ್ರಕ್ಕೆ ಆಘಾತ

“ಮಾಂಸಾಹಾರ ತನ್ನ ದೇಹಕ್ಕೆ ಹೆಚ್ಚು ಸರಿಹೊಂದುವುದಿಲ್ಲ ಎಂದು ಮಯಾಂಕ್​ ಹೇಳಿದ್ದಾನೆ. ಅದಕ್ಕಿಂತ ಮೊದಲು ತಾನು ಶ್ರೀಕೃಷ್ದ ಶ್ರೀಕೃಷ್ಣನನ್ನು ನಂಬಲು ಪ್ರಾರಂಭಿಸಿದ್ದ. ಅದು ಸಹ ಒಂದು ಕಾರಣವಾಗಿರಬಹುದು. ಆತ ಮಾಂಸಾಹಾರವನ್ನು ಏಕೆ ತ್ಯಜಿಸಿದರು ಎಂಬುದನ್ನು ಬಹಿರಂಗಪಡಿಸಲು ನಾವು ಅವರನ್ನು ಒತ್ತಾಯಿಸಲಿಲ್ಲ. ನಾನು ಏನೇ ಮಾಡಿದರೂ ಅದು ಅವರ ಆಟ ಮತ್ತು ದೇಹಕ್ಕೆ ಒಳ್ಳೆಯದು ಎಂದು ಹೇಳುತ್ತಿದ್ದ, ಎಂಬುದಾಗಿ ಮಯಾಂಕ್ ತಾಯಿ ಹೇಳಿದ್ದಾರೆ.

ಮಯಾಂಕ್ ಶೀಘ್ರದಲ್ಲೇ ಭಾರತದ ಜರ್ಸಿ ಧರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದನ್ನು ನೋಡುವ ವಿಶ್ವಾಸವನ್ನು ಮಮತಾ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಯಲ್ಲಿ ಮಯಾಂಕ್ ಅವರ ಪ್ರದರ್ಶನದ ನಂತರ, ಜೂನ್​ನಲ್ಲಿ ಪ್ರಾರಂಭವಾಗುವ ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಅವರನ್ನು ಭಾರತೀಯ ತಂಡಕ್ಕೆ ಅವರನ್ನು ಸೇರಿಸಿಕೊಳ್ಳುವುದಕ್ಕೆ ಅನೇಕ ತಜ್ಞರು ಸಲಹೆ ನೀಡಿದ್ದಾರೆ.

Exit mobile version