Site icon Vistara News

T20 World Cup 2024 : ಕಣ್ಣೀರ ಧಾರೆ; ಟ್ರೋಫಿ ಗೆದ್ದ ಖುಷಿಗೆ ಕಣ್ಣೀರು ಸುರಿಸಿದ ಪಾಂಡ್ಯ, ರೋಹಿತ್, ಕೊಹ್ಲಿ, ಸಿರಾಜ್​

T20 World Cup 2024

ನವದೆಹಲಿ: ಐಸಿಸಿ ಟಿ 20 ವಿಶ್ವಕಪ್ 2024ರ (T20 World Cup 2024) ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿಗಾಗಿ ತಮ್ಮ ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಿತು. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿ ಒಟ್ಟು ಎರಡನೇ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2007 ರ ನಂತರ ಮೊದಲ ಬಾರಿಗೆ ಟಿ20 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಭಾರತ ತಂಡಕ್ಕೆ 13 ವರ್ಷಗಳ ಬಳಿಕ ಸಿಕ್ಕ ಟಿ20 ವಿಶ್ವ ಕಪ್ ಟ್ರೋಫಿ. 2011ರಲ್ಲಿ ಧೋನಿ ನೇತೃತ್ವದಲ್ಲಿ ಭಾರತ ಗೆದ್ದಿದ್ದು. ಅಂತೆಯೇ 2023ರ ಏಕ ದಿನ ವಿಶ್ವ ಕಪ್​ನ ಫೈನಲ್ ಸೋಲಿನ ನಿರಾಸೆಯೂ ಉಂಟಾಗಿತ್ತು.

ಚಾಂಪಿಯನ್ ಆದ ತಕ್ಷಣ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ ಮತ್ತು ಇತರರು ಸೇರಿದಂತೆ ಭಾರತದ ಆಟಗಾರರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ವಿಶ್ವಕಪ್ ಗೆಲುವಿಗಾಗಿ ಭಾರತ ತನ್ನ ದೀರ್ಘ ಕಾಯುವಿಕೆಯನ್ನು ಕೊನೆಗೊಳಿಸುತ್ತಿದ್ದಂತೆ ಆಟಗಾರರೆಲ್ಲರೂ ಭಾವುಕರಾದರು. ಫೈನಲ್ ಪಂದ್ಯದ ನಂತರದ ದೃಶ್ಯಗಳಲ್ಲಿ ಅವರೆಲ್ಲರೂ ಪರಸ್ಪರ ಅಪ್ಪಿಕೊಳ್ಳುವಾಗ ಕಣ್ಣೀರು ಹಾಕಿದರು. ಪರಸ್ಪರ ಸಂತೈಸಿದರು.

177 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿತ್ತು. 16ನೇ ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದ್ದ ದ. ಆಫ್ರಿಕಾ 25 ಎಸೆತಗಳಲ್ಲಿ ಕೇವಲ 24 ರನ್ ಗಳಿಸಬೇಕಿತ್ತು. ಆದಾಗ್ಯೂ, ಭಾರತದ ಬೌಲರ್​ಗಳು ಗಮನಾರ್ಹ ಪುನರಾಗಮನ ತೋರಿದರು. ದಕ್ಷಿಣ ಆಫ್ರಿಕಾ ಅಂತಿಮ ಗುರಿಯನ್ನು ದಾಟಲು ವಿಫಲವಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಮತ್ತೆ ಚೋಕರ್ಸ್​ ಹಣೆಪಟ್ಟಿಯನ್ನು ಕಟ್ಟಿಕೊಂಡು ಮರಳಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ತಂಡಕ್ಕೆ ತಮ್ಮ ಸಹಾಯ ಅಗತ್ಯವಿರುವಾಗ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿದಿರು. ಭಾರತವು ಪವರ್​ಪ್ಲೇನಲ್ಲಿ ವಿಕೆಟ್ಗಳನ್ನು ಕಳೆದುಕೊಂಡಿತು. ಭಾರತದ ಮಾಜಿ ನಾಯಕ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

ಈ ಮೂಲಕ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಒಟ್ಟಾರೆಯಾಗಿ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಂತರ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡವಾಗಿದೆ. ಈ ಗೆಲುವು ಐಸಿಸಿ ಟ್ರೋಫಿಗಾಗಿ ಭಾರತದ ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ಯಾವುದೇ ಐಸಿಸಿ ಪಂದ್ಯಾವಳಿಯನ್ನು ಗೆದ್ದಿಲ್ಲ. ಕಳೆದ ವರ್ಷ ತವರಿನಲ್ಲಿ ನಡೆದ ಡಬ್ಲ್ಯುಟಿಸಿ ಮತ್ತು ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಸೋತಿತ್ತು.

Exit mobile version