ಪ್ಯಾರಿಸ್ : ಪ್ರೇಮಿಗಳ ನಗರ ಪ್ಯಾರಿಸ್ನಲ್ಲಿ 2024ರ (PARIS OLYMPICS 2024) ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆಯಾಗುವ ಮೊದಲೇ ಅಥ್ಲೀಟ್ಗಳಿಬ್ಬರು ಮದುವೆ ಪ್ರಸ್ತಾಪವನ್ನು ಹಂಚಿಕೊಂಡಿದ್ದಾರೆ. ಅರ್ಜೆಂಟೀನಾ ಪುರುಷರ ಹ್ಯಾಂಡ್ಬಾಳ್ ತಂಡದ ಸ್ಟಾರ್ ಆಟಗಾರ ಪಾಬ್ಲೊ ಸಿಮೊನೆಟ್ ಮತ್ತು ಅರ್ಜೆಂಟೀನಾ ಮಹಿಳಾ ಹಾಕಿ ತಂಡದ ಆಟಗಾರ್ತಿ ಮಾರಿಯಾ ಕ್ಯಾಂಪೊಯ್ ಪ್ರಪೋಸ್ ಮಾಡಿದರು. ಗ್ರೂಪ್ ಫೋಟೋ ಸೆಷನ್ ಸಮಯದಲ್ಲಿ, ಸಿಮೊನೆಟ್ ಬಗ್ಗಿ ನಿಂತು ಮಾರಿಯಾ ಕ್ಯಾಂಪೊಯ್ ಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾರೆ. ಆಕೆಯ ಕಣ್ಣುಗಳು ಖುಷಿಯಿಂದ ಅರಳುತ್ತಿದ್ದಂತೆ ತಂಡದ ಸದಸ್ಯರು ಹರ್ಷೋದ್ಘಾರ ಮಾಡಿದರು. ಉಳಿದವರು ಈ ಕ್ಷಣವನ್ನು ಸಂಭ್ರಮದಿಂದ ಆಚರಿಸಿದರು.
ಈ ಸುದ್ದಿ ಮತ್ತು ಪೋಸ್ಟ್ ಅನ್ನು ಒಲಿಂಪಿಕ್ಸ್ ಅಧಿಕೃತ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿದೆ “ಪ್ಯಾರಿಸ್ 2024 ಒಲಿಂಪಿಕ್ ಗ್ರಾಮದಲ್ಲಿ ನಡೆದ ಮೊದಲ ಮದುವೆ ಪ್ರಸ್ತಾಪ. ಪಾಬ್ಲೊ ಸಿಮೊನೆಟ್ ಮತ್ತು ಪಿಲಾರ್ ಕ್ಯಾಂಪೊಯ್ ಅರ್ಜೆಂಟೀನಾದ ತಮ್ಮ ಹ್ಯಾಂಡ್ಬಾಲ್ ಮತ್ತು ಹಾಕಿ ತಂಡದ ಸದಸ್ಯರಿಂದ ಅಭಿನಂದನೆಗಳನ್ನು ಪಡೆದುಕೊಂಡರು.
ಅಧಿಕೃತ ವೆಬ್ಸೈಟ್ ವರದಿಯ ಪ್ರಕಾರ, ಪಾಬ್ಲೊ ಸಿಮೊನೆಟ್ ಅವರ ಮದುವೆ ಪ್ರಸಾಪದ ಸಮಯವು ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ. ಸ್ಯಾಂಟಿಯಾಗೊ 2023 ಪ್ಯಾನ್ ಅಮೆರಿಕನ್ ಕ್ರೀಡಾಕೂಟದಲ್ಲಿ ಪ್ಯಾರಿಸ್ 2024 ರಲ್ಲಿ ತಮ್ಮ ತಂಡಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿದ ಕೆಲವೇ ನಿಮಿಷಗಳಲ್ಲಿ, ಸಿಮೊನೆಟ್ ತನ್ನ ಪ್ರಣಯದ ಕತೆಯನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ಗೆ ಕೆಲವೇ ಗಂಟೆಗಳ ಮೊದಲು ಫ್ರಾನ್ಸ್ನ ರೈಲ್ವೆ ವ್ಯವಸ್ಥೆ ಮೇಲೆ ವಿಧ್ವಂಸಕ ದಾಳಿ
2015ರಿಂದ, ಸಿಮೊನೆಟ್ ಮತ್ತು ಕ್ಯಾಂಪೊಯ್ ತಮ್ಮ ಅಥ್ಲೆಟಿಕ್ ವೃತ್ತಿಜೀವನದ ನಡುವೆಯೂ ಪ್ರೇಮಕಥೆ ಮುಂದುವರಿಸಿದ್ದಾರೆ. ರಿಯೋ 2016ರಲ್ಲಿ ಒಟ್ಟಿಗೆ ಒಲಿಂಪಿಕ್ ಪಯಣ ಆರಂಭಿಸಿದ್ದರು. ಈಗ, ಎಂಟು ವರ್ಷಗಳ ನಂತರ, ಪ್ಯಾರಿಸ್ ಎಂದರೆ ಪ್ರೀತಿಯ ನಗರದಲ್ಲಿ ಅವರ ಪ್ರೇಮ ಬಹಿರಂಗವಾಗಿದೆ.