ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನ ಕ್ರೀಡಾಕೂಟದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್‌ಗೆ ಭಾರತದ ಶೂಟರ್ ಅರ್ಜುನ್ ಬಬುಟಾ ಭಾನುವಾರ ಅರ್ಹತೆ ಗಳಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆದ ಅವರು ಪ್ರಶಸ್ತಿ ಸುತ್ತಿಗೆ ಏರಿದ್ದಾರೆ. 25ರ ವರ್ಷದ ಬಬುಟಾ 105.7, 104.9, 105.5, 105.4, 104.0 ಮತ್ತು 104.6 ಅಂಕಗಳೊದಿಗೆ ಒಟ್ಟಾರೆ 630.1 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು. ಶನಿವಾರ ರಮಿತಾ ಜಿಂದಾಲ್ ಅವರೊಂದಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನ ಅವಕಾಶ ಕಳೆದುಕೊಂಡ ಅವರು ಸೋಮವಾರ ಎಂಟು ಶೂಟರ್ ಗಳ ಫೈನಲ್ ನಲ್ಲಿ ಮತ್ತೊಂದು ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ.
Arjun Babuta is the first Men from India to Qualify for the #Paris2024 Finals pic.twitter.com/8Gsr02NKWs
— The Khel India (@TheKhelIndia) July 28, 2024
2016 ರಿಂದ ರಾಷ್ಟ್ರೀಯ ತಂಡದಲ್ಲಿ ಇರುವ ಚಂಡೀಗಢದ ಬಬುತಾ, ಕಳೆದ ವರ್ಷ ಚಾಂಗ್ವಾನ್ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ಶಿಪ್ ಮೂಲಕ ಒಲಿಂಪಿಕ್ ಅರ್ಹತೆ ಪಡೆದಿದ್ದರು. ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ವಿಶ್ವ ಚಾಂಪಿಯನ್ ರುದ್ರಾಕ್ಷ್ ಪಾಟೀಲ್ ಅವರನ್ನು ಸೋಲಿಸಿದ ನಂತರ ತಮ್ಮ ಚೊಚ್ಚಲ ಒಲಿಂಪಿಕ್ಸ್ಗೆ ಅವರು ಪ್ರವೇಶ ಪಡೆದುಕೊಂಡಿದ್ದರು. ಸೇನಾ ಸಿಬ್ಬಂದಿ ಸಂದೀಪ್ ಸಿಂಗ್ ಇದೇ ಸ್ಪರ್ಧೆಯಲ್ಲಿ 629.3 ಅಂಕಗಳನ್ನು ಗಳಿಸಿ ಪ್ಯಾರಿಸ್ ಅಭಿಯಾನ ಕೊನೆಗೊಳಿಸಿದ್ದಾರೆ. .
ಅರ್ಹತಾ ಸುತ್ತಿನಲ್ಲಿ ಚೀನಾದ ಶೆಂಗ್ ಲಿಹಾವೊ 631.7 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರು, ಟೋಕಿಯೊ ಕ್ರೀಡಾಕೂಟದಲ್ಲಿ ದೇಶದ ಯಾಂಗ್ ಹೌರಾನ್ ಸ್ಥಾಪಿಸಿದ ಅರ್ಹತಾ ದಾಖಲೆಯಾದ 632.7 ಕ್ಕಿಂತ ಕೇವಲ ಒಂದು ಅಂಕ ಹಿಂದೆ ಬಿದ್ದಿದ್ದಾರೆ.
ಶೂಟಿಂಗ್ನಲ್ಲಿ ಫೈನಲ್ ಪ್ರವೇಶಿಸಿದ ರಮಿತಾ ಜಿಂದಾಲ್; ಭಾರತಕ್ಕೆ 2 ಪದಕ ನಿರೀಕ್ಷೆ
ಪ್ಯಾರಿಸ್: ಶೂಟಿಂಗ್ನಲ್ಲಿ(Paris 2024 Shooting) ಭಾರತ ಸದ್ಯ 2 ಪದಕಗಳ ನಿರೀಕ್ಷೆಯಲ್ಲಿದೆ. ಇಂದು ನಡೆದ 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ರಮಿತಾ ಜಿಂದಾಲ್(Ramita Jindal) 631.5 ಅಂಕ ಗಳಿಸಿ 5 ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಆದರೆ, ಅನುಭವಿ ಶೂಟರ್ ಎಲವೆನಿಲ್ ವಲರಿವನ್(Elavenil Valarivan) 630.7 ಅಂಕ ಗಳಿಸಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಮಂದಿಗೆ ಫೈನಲ್ ಪ್ರವೇಶ ಲಭಿಸಿತು.
ಇದನ್ನೂ ಓದಿ: Manu Bhaker : ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೊದಲ ಪದಕ ತಂದುಕೊಟ್ಟ ಮನು ಭಾಕರ್ ಯಾರು? ಅವರ ಹಿನ್ನೆಲೆಯೇನು?
ರಮಿತಾ ಕಳೆದ 20 ವರ್ಷಗಳಲ್ಲಿ ಮನು ಭಾಕರ್ ನಂತರ ಪದಕ ಸುತ್ತಿಗೆ ತಲುಪಿದ ಎರಡನೇ ಮಹಿಳಾ ಶೂಟರ್ ಎನಿಸಿಕೊಂಡರು. ರಮಿತಾ ತನ್ನ ಕೋಚ್ ಸುಮಾ ಶಿರೂರ್ (ಅಥೆನ್ಸ್ 2004) ನಂತರ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ರೈಫಲ್ ಶೂಟರ್ ಆಗಿದ್ದಾರೆ. ಎಲವೆನಿಲ್ ವಲರಿವನ್ ಆರಂಭಿಕ ಮೂರು ಸೆಟ್ಗಳಲ್ಲಿ ಅಗ್ರ 8ರೊಳಗೆ ಕಾಣಿಸಿಕೊಂಡಿದ್ದರೂ ಕೂಡ ಅಂತಿಮ ಮೂರು ಸೆಟ್ಗಳಲ್ಲಿ ಹಿನ್ನಡೆ ಕಂಡು ಫೈನಲ್ ಅವಕಾಶ ತಪ್ಪಿಸಿಕೊಂಡರು. ಕನಿಷ್ಠ 8ನೇ ಸ್ಥಾನ ಪಡೆಯುತ್ತಿದ್ದರೂ ಕೂಡ ಅವರಿಗೆ ಫೈನಲ್ ಟಿಕೆಟ್ ಲಭಿಸುತ್ತಿತ್ತು.