ಪ್ಯಾರಿಸ್: ಒಲಿಂಪಿಕ್ಸ್ (Paris Olympics 2024) ಆರಂಭಕ್ಕೆ ಇನ್ನೊಂದು ವಾರ ಬಾಕಿ ಇರುವ ನಡುವೆ ಫ್ರೆಂಚ್ ಅಧಿಕಾರಿಗಳು ಪ್ಯಾರಿಸ್ 2024-ಬ್ರಾಂಡೆಡ್ ಲೋಹದ ನೀರಿನ ಬಾಟಲಿಗಳನ್ನು ನಿಷೇಧ ಮಾಡಿದ್ದಾರೆ. ಇದರಿಂದ ಆಯೋಜಕರಿಗೆ ಮತ್ತು ಅಲ್ಲಿಗೆ ಪ್ರವಾಸ ಬರುವರಿಗೆ ಬಾರಿ ಸಮಸ್ಯೆ ಎದುರಾಗಲಿದೆ. ಯಾಕೆಂದರೆ ಒಲಿಂಪಿಕ್ಸ್ ಬ್ರಾಂಡ್ ಹೊಂದಿರುವ ಬಾಟಲ್ಗಳನ್ನು ಟೂರ್ನಿಯ ಅವಧಿಯಲ್ಲಿ ಬಳಸುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ, ಡಿಸ್ಟ್ರಪ್ಟರ್ ಬಿಸ್ಫೆನಾಲ್ ಎ ರಾಸಾನಿಕ ಹೆಚ್ಚಿರುವ ಕಾರಣ ಅಧಿಕಾರಿಗಳು ನಿಷೇಧ ಹೇರಿದ್ದಾರೆ.
ಫ್ರೆಂಚ್ ಕಂಪನಿ ವಿಲಾಕ್ ತಯಾರಿಸಿದ ಬಾಟಲಿಗಳು “ನಿಯಮಗಳಿಗೆ ಅನುಸಾರವಾಗಿಲ್ಲ” ರಾಸಾಯನಿಕದ ಮಟ್ಟವನ್ನು ಹೊಂದಿವೆ ಎಂದು ಸರ್ಕಾರಿ ವೆಬ್ಸೈಟ್ ರಾಪೆಲ್ ಕಾನ್ಸೊದಲ್ಲಿ ಬರೆಯಲಾಗಿದೆ. ಆಗಸ್ಟ್ 2023 ರ ಅಂತ್ಯದಿಂದ ಜೂನ್ ಆರಂಭದವರೆಗೆ ಫ್ಯಾನ್ಸ್ನಲ್ಲಿ ಮಾರಾಟವಾದ ಬಾಟಲಿಗಳು ಇನ್ನು ಮುಂದೆ ವಿಲಾಕ್ ಆನ್ಲೈನ್ ಅಂಗಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಿಯಮ ಅನುಸರಣೆಯ ಕಾರಣಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಲೈಸೆನ್ಸ್ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಪ್ಯಾರಿಸ್ 2024 ಸಂಘಟಕರು ರಾಯಿಟರ್ಸ್ಗೆ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್ ಮತ್ತು ಬಂಜೆತನ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ಬಿಸ್ಫೆನಾಲ್ ಎ ಅನ್ನು 2015 ರಿಂದ ಫ್ರಾನ್ಸ್ನಲ್ಲಿ ನಿಷೇಧಿಸಲಾಗಿದೆ.
ವಿಲಾಕ್ ಪ್ರತಿನಿಧಿಗಳು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ ಪ್ಯಾರಿಸ್ 2024 ಅಧಿಕಾರಿಗಳು ಎಷ್ಟು ಬಾಟಲಿಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಲು ಸಾಧ್ಯವಾಗಲಿಲ್ಲ.
ಅಥ್ಲೀಟ್‌ಗಳಿಗೆ ಸಿಗಲಿದೆ ಭಾರೀ ಮೊತ್ತದ ನಗದು ಬಹುಮಾನ
ಮೊನಾಕೊ: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಾಗುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ.
ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್ ಸ್ಪರ್ಧೆಗೆ ಹೊರಟಿರುವ ಅಥ್ಲೀಟ್ಗೆ 8.5 ಕೋಟಿ ರೂ. ಪ್ರೋತ್ಸಾಹಧನ ನೀಡಿದ ಬಿಸಿಸಿಐ
ಟೋಕಿಯೊ ಒಲಿಂಪಿಕ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್ ಡಾಲರ್ ಬಹುಮಾನ ದೊರೆಯಲಿದೆ. ನೀರಜ್ ಅವರು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದು ಈ ಬಾರಿಯೂ ಅವರು ಚಿನ್ನದ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.
ಈ ಬಾರಿ ಚಿನ್ನ ಗೆದ್ದ ಅಥ್ಲೀಟ್‌ಗಳಿಗೆ ಮಾತ್ರ ನಗುದು ಬಹುಮಾನ ದೊರಕಲಿದೆ. 2028ರಲ್ಲಿ ಲಾಸ್ ಏಂಜಲಿಸ್ನಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿವಿಶ್ವ ಅಥ್ಲೆಟಿಕ್ ಸಂಸ್ಥೆ ಘೋಷಿಸಿದೆ. ಡೈಮಂಡ್ ಲೀಗ್, ಕಾಂಟಿನೆಂಟಲ್ ಕಪ್‌ಗಳಲ್ಲಿ ಪದಕ ಗೆದ್ದಾಗ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ ಒಲಿಂಪಿಕ್ಸ್ ಬಹುಮಾನದಲ್ಲಿ ಈ ಸೌಕರ್ಯ ಇರಲಿಲ್ಲ. ಇದೀಗ ಒಲಿಂಪಿಕ್ಸ್ನಲ್ಲಿಯೂ ಈ ನಿಯಮ ಬಂದಿರುವುದು ಸಂತಸ ತಂದಿದೆ ಎಂದು ಡಬ್ಲ್ಯುಎ ಅಧ್ಯಕ್ಷ ಸೆಬಾಸ್ಟಿಯನ್ ಕೊ ಹೇಳಿದ್ದಾರೆ.