Site icon Vistara News

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Paris Olympics 2024

ಬೆಂಗಳೂರು: ಚೀನಾದ ಮಹಿಳಾ ಬ್ಯಾಡ್ಮಿಂಟನ್ ತಾರೆ ಹುವಾಂಗ್ ಯಾಕಿಯಾಂಗ್, ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಚಿನ್ನದ ಪದಕದ ಜತೆಗೆ ಮದುವೆಯ ಉಂಗುರವನ್ನು ಕೂಡ ಪಡೆದುಕೊಂಡಿದ್ದಾರೆ! ಹೌದು, ಆಗಸ್ಟ್ 2ರ ಶುಕ್ರವಾರ ನಡೆದ ಪದಕ ವಿತರಣೆ ಸಮಾರಂಭದ ನಂತರ 30 ವರ್ಷದ ಶಟ್ಲರ್​ಗೆ ಅವರ ಗೆಳೆಯ ಸಹ ಶಟ್ಲರ್ ಲಿಯು ಯುಚೆನ್ ಮದುವೆ ಪ್ರಪೋಸಲ್​ ಸಲ್ಲಿಸಿದರು. ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಪಂದ್ಯಗಳನ್ನು ಆಯೋಜಿಸುವ ಲಾ ಚಾಪೆಲ್ ಅರೆನಾದಲ್ಲಿ ಲಿಯು ಮೊಣಕಾಲುಗಳ ಮೇಲೆ ನಿಂತು ಬ್ಯಾಡ್ಮಿಂಟನ್​ನಲ್ಲಿ ಚೀನಾಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟ ಹುವಾಂಗ್ ಅವರಿಗೆ ಮದುವೆ ಪ್ರಸ್ತಾಪ ಇಟ್ಟರು.

ಲಿಯು ಯುಚೆನ್ ತನ್ನ ಜೇಬಿನಿಂದ ಪೊಟ್ಟಣ ತೆಗೆದು ಮದುವೆಯ ಉಂಗುರವನ್ನು ತೊಡಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮದಿಂದ ಚಪ್ಪಾಳೆ ತಟ್ಟಿದರು. ಪ್ಯಾರಿಸ್​ನಲ್ಲಿ ನಡೆದ ಮಿಶ್ರ ಡಬಲ್ಸ್​ನಲ್ಲಿ ಅಗ್ರ ಶ್ರೇಯಾಂಕದ ಹುವಾಂಗ್ ಯಾಕಿಯಾಂಗ್ ಅವರು ಜೆಂಗ್ ಸಿ ವೀ ಅವರೊಂದಿಗೆ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: MS Dhoni : 2007 ವಿಶ್ವ ಕಪ್ ಹೀರೋ ಜೋಗಿಂದರ್​ ಶರ್ಮಾ ಭೇಟಿಯಾದ ಎಂ. ಎಸ್​ ಧೋನಿ

ಹುವಾಂಗ್ ಯಾಕಿಯಾಂಗ್ ಕೊರಳಲ್ಲಿ ಚಿನ್ನದ ಪದಕ ಧರಿಸಿದ್ದರು. ಪದಕ ಸಮಾರಂಭದ ನಂತರ ಅಖಾಡದಿಂದ ಹೊರಬರಲು ಕಾಯುತ್ತಿದ್ದಾಗ ಲಿಯು ಯುಚೆನ್ ಅಖಾಡಕ್ಕೆ ನಡೆದು ಶಟ್ಲರ್ ಅಚ್ಚರಿ ಒಟ್ಟರು. ಲಿಯು ಮೊಣಕಾಲುಗಳ ಮೇಲೆ ಕುಳಿತು ಅವಳನ್ನು ಮದುವೆಯಾಗುವ ಪ್ರಸ್ತಾಪ ಸಲ್ಲಿಸಿದಾಗ ಹುವಾಂಗ್ ಭಾವುಕರಾದರು. ಲಿಯು ಮತ್ತು ಸ್ಥಳದಲ್ಲಿ ಕಿಕ್ಕಿರಿದಿದ್ದ ಜನಸಮೂಹಕ್ಕೆ ಸಂತೋಷವಾಗುವಂತೆ, ಹುವಾಂಗ್ ‘ಒಪ್ಪಿಗೆ’ ಎಂದು ಹೇಳಿದರು.

ಉಂಗುರದಿಂದ ಆಶ್ಚರ್ಯವಾಯಿತು

ಆಶ್ಚರ್ಯಕರ ಮದುವೆ ಪ್ರಸ್ತಾಪ ಸ್ವೀಕರಿಸಿದ ನಂತರ ಮಾತನಾಡಿದ ಹುವಾಂಗ್ ಯಾಕಿಯಾಂಗ್, ಇದು ಅಚ್ಚರಿ. ನಿಶ್ಚಿತಾರ್ಥದ ಉಂಗುರದ ನಿರೀಕ್ಷೆ ಇರಲಿಲ್ಲ ಎಂದು ಹೇಳಿದರು. ನಾವಿಬ್ಬರೂ ಕ್ರೀಡಾಕೂಟಕ್ಕೆ ಮುಂಚಿತವಾಗಿ ಸಿದ್ಧತೆಯ ಬಗ್ಗೆ ಅವರು ಸಂಪೂರ್ಣವಾಗಿ ಗಮನ ಹರಿಸಿದ್ದೆವು ಎಂದು ಹೇಳಿದರು.

“ನಾನು ತುಂಬಾ ಸಂತೋಷವಾಗಿದ್ದೇನೆ, ಎಂದು ಹುವಾಂಗ್ ಹೇಳಿದ್ದಾರೆ. ಅವರು ಚಿನ್ನದ ಪದಕ ಪಡೆಯುವುದು ನಮ್ಮ ಪ್ರಯಾಣಕ್ಕೆ ದೊರೆತ ಮುನ್ನುಡಿಯಾಗಿದೆ. ನಿಶ್ಚಿತಾರ್ಥದ ಉಂಗುರದಿಂದ ನನಗೆ ಆಶ್ಚರ್ಯವಾಯಿತು. ನಾನು ಒಲಿಂಪಿಕ್ ಚಾಂಪಿಯನ್ ಆಗಲು ತರಬೇತಿಯತ್ತ ಗಮನ ಹರಿಸುತ್ತಿದ್ದೇನೆ. ನಾನು ಮದುವೆಯನ್ನು ನಿರೀಕ್ಷಿಸಿರಲಿಲ್ಲ” ಎಂದು ಅವರು ಹೇಳಿದರು.

ಲಿಯು ಯುಚೆನ್ ಮತ್ತು ಅವರ ಡಬಲ್ಸ್ ಪಾಲುದಾರ ಓ ಕ್ಸುವಾನ್ ಯಿ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಲಿಯು ಮತ್ತು ಕ್ಸುವಾನ್ ಯಿ ಇಲ್ಲಿ ಗುಂಪು ಹಂತದಿಂದಲೇ ಹೊರಕ್ಕೆ ಬಿದ್ದಿದ್ದರು.

ಹುವಾಂಗ್ ಯಾಕಿಯಾಂಗ್ ಮತ್ತು ಝೆನ್ ಸಿ ವೀ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್​​ನಲ್ಲಿ ಮೊದಲ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಅವರು ಕಿಮ್ ವೊನ್ ಹೋ ಮತ್ತು ಜಿಯೊಂಗ್ ನಾ ಯುನ್ ವಿರುದ್ಧ ಆರಂಭದಿಂದ ಅಂತ್ಯದವರೆಗೆ ಪ್ರಾಬಲ್ಯ ಸಾಧಿಸಿದರು. ಕೊರಿಯಾದ ಜೋಡಿಯನ್ನು 21-8, 21-11 ರಿಂದ ಸೋಲಿಸಿದ್ದರು. ಪಂದ್ಯ ಕೇವಲ 41 ನಿಮಿಷಗಳಲ್ಲಿ ಮುಕ್ತಾಯಗೊಂಡಿತ್ತು.

27ರ ಹರೆಯದ ಝೆಂಗ್, ಪ್ಯಾರಿಸ್ ಒಲಿಂಪಿಕ್ಸ್ ಒಲಿಂಪಿಕ್ಸ್​ನ್ಲ್ಲಿ ತನ್ನ ಕೊನೆಯ ಪ್ರದರ್ಶನ ಎಂದು ದೃಢಪಡಿಸಿದ್ದರು. ಜೆಂಗ್ ತನ್ನ ಕುಟುಂಬದೊಂದಿಗೆ ಒಲಿಂಪಿಕ್ಸ್ ಗೆ ಪ್ರಯಾಣಿಸಿ ಇದೀಗ ಚಿನ್ನ ಗೆದ್ದಿದ್ದಾರೆ.

Exit mobile version