Site icon Vistara News

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಹೋದ ಇಸ್ರೇಲ್ ಅಥ್ಲೀಟ್​ಗಳಿಗೆ ಜೀವ ಬೆದರಿಕೆ!

Paris Olympics 2024

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ (Paris Olympics 2024) ಮೂವರು ಇಸ್ರೇಲಿ ಅಥ್ಲೀಟ್​​ಗಳಿಗೆ ಜೀವ ಬೆದರಿಕೆಗಳು ಬಂದಿರುವ ಆಘಾತಕಾರಿ ಘಟನೆ ನಡೆದಿದೆ. ಈ ಬಗ್ಗೆ ಫ್ರೆಂಚ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್​ಗಳ ಕಚೇರಿ ಭಾನುವಾರ ತಿಳಿಸಿದೆ. ಸೈಬರ್ ಕ್ರೈಂ ವಿರೋಧಿ ಅಧಿಕಾರಿಗಳು ಶುಕ್ರವಾರ ಸಾಮಾಜಿಕ ನೆಟ್​ವರ್ಕ್​​ಗಳಲ್ಲಿ ಕ್ರೀಡಾಪಟುಗಳ ವೈಯಕ್ತಿಕ ಡೇಟಾವನ್ನು ಬಿಡುಗಡೆ ಮಾಡಿದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅದನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಟರ್​ಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲಿ ನಿಯೋಗದ ಸದಸ್ಯರ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಪ್ರಕಟಿಸಲು ಮತ್ತು ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಲು ಇರಾನಿನ ಹ್ಯಾಕರ್​​ಗಲು ಸಾಮಾಜಿಕ ಮಾಧ್ಯಮ ಚಾನೆಲ್​​ಗಳನ್ನು ರಚಿಸುತ್ತಿದ್ದಾರೆ ಎಂದು ಇಸ್ರೇಲ್​​ನ ರಾಷ್ಟ್ರೀಯ ಸೈಬರ್ ನಿರ್ದೇಶನಾಲಯ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಅದೇ ದಿನ, ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಮಯದಲ್ಲಿ ಇಸ್ರೇಲಿ ಕ್ರೀಡಾಪಟುಗಳು ಮತ್ತು ಪ್ರವಾಸಿಗರನ್ನು ಗುರಿಯಾಗಿಸಲು ಇರಾನ್ ಬೆಂಬಲಿತ ಸಂಭಾವ್ಯ ಪಿತೂರಿ ನಡೆದಿದೆ. ಇಸ್ರೇಲ್​ನ ವಿದೇಶಾಂಗ ಸಚಿವರು ತಮ್ಮ ಫ್ರೆಂಚ್ ಸಹವರ್ತಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶ್ವಸಂಸ್ಥೆಗೆ ಇರಾನಿನ ನಿಯೋಗ ಗುರುವಾರ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಭಯೋತ್ಪಾದಕ ಕೃತ್ಯಗಳಿಗೆ ನಮ್ಮ ತತ್ವಗಳಲ್ಲಿ ಸ್ಥಾನವಿಲ್ಲ. ಸುಳ್ಳು ಮತ್ತು ಮೋಸದ ಮೂಲಕ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ಇಸ್ರೇಲಿ ಕ್ರೀಡಾಪಟುಗಳನ್ನು ಅತ್ಯಂತ ಹೆಚ್ಚು ಕಾಳಜಿಯಿಂದ ನೋಡಲಾಗುತ್ತಿದೆ. ಒಲಿಂಪಿಕ್ಸ್ ಉದ್ದಕ್ಕೂ 24 ಗಂಟೆಗಳ ರಕ್ಷಣೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್​​ನ ಆಂತರಿಕ ಭದ್ರತಾ ಸೇವೆ ಶಿನ್ ಬೆಟ್ ಭದ್ರತೆಗೆ ಸಹಾಯ ಮಾಡುತ್ತಿದೆ.

ಇದನ್ನೂ ಓದಿ: Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

ಫ್ರೆಂಚ್ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ ಎಂದು ಇಸ್ರೇಲ್ ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಕ್ರೀಡಾಪಟುಗಳಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಇದು ಪ್ರಮುಖ ಸಂದೇಶವನ್ನು ಕಳುಹಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Exit mobile version