ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024 (Paris Olympics 2024) ಹಲವಾರು ವಿವಾದಗಳು ಘಟಿಸಿದೆ. ಇದೇ ವೇಳೆ ಕೆಲವು ಹೃದಯಸ್ಪರ್ಶಿ ಘಟನೆಗಳೂ ನಡೆದಿವೆ. ಅಂತೆಯೇ ಫ್ರೆಂಚ್ ಅಥ್ಲೀಟ್ ಆಲಿಸ್ ಫಿನಾಟ್ 3000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯ ಫೈನಲ್ ನಲ್ಲಿ ಭಾಗವಹಿಸಿದ್ದರು. ಅವರು ಓಟದಲ್ಲಿ ಯಾವುದೇ ಪದಕವನ್ನು ಗೆದ್ದಿಲ್ಲ. ಆದರೆ ಅವರು ಈವೆಂಟ್ನಲ್ಲಿ ಯುರೋಪಿಯನ್ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು. ತನ್ನ ದಾಖಲೆ ಮುರಿಯುವ ಪ್ರದರ್ಶನದ ನಂತರ ಟ್ರ್ಯಾಕ್ ಬದಿಯಲ್ಲೇ ತನ್ನ ಬಾಯ್ ಫ್ರೆಂಡ್ಗೆ ಪ್ರಪೋಸ್ ಮಾಡಿದರು. ಈ ವಿಡಿಯೊ ಸೋಶಿಯಲ್ಲ ಮೀಡಿಯಾಗಳಲ್ಲಿ ವೈರಲ್ ಆಗಿದೆ.
French athlete came in fourth in the 3000m steeplechase, a European record, and asked for her boyfriend's hand …pic.twitter.com/ofs9DocirE
— Figen (@TheFigen_) August 7, 2024
ಪ್ಯಾರಿಸ್ ಹೇಳಿ ಕೇಳಿ ಪ್ರಣಯದ ನಗರ. ಹೀಗಾಗಿ ಅಥ್ಲೀಟ್ ಟ್ರ್ಯಾಕ್ನಲ್ಲೇ ಪ್ರೀತಿಯ ಹುಡುಗನಿಗೆ ಪ್ರಪೋಸ್ ಮಾಡಿರುವುದು ವಿಶೇಷ ಎನಿಸಿತು. ಪ್ಯಾರಿಸ್ನಲ್ಲಿ ಕೇವಲ ಸ್ಪರ್ಧಾತ್ಮಕ ಮನೋಭಾವ ಮಾತ್ರವಲ್ಲ, ಪ್ರೀತಿಯೂ ಹೆಚ್ಚಿದೆ. ರೇಸ್ ಮುಗಿದ ನಂತರ ಸ್ಟ್ಯಾಂಡ್ ಗಳ ಕಡೆಗೆ ನಡೆದು ಫಿನಾಟ್ ಹೋಗುತ್ತಿದ್ದ ವೀಡಿಯೊ ಶೀಘ್ರದಲ್ಲೇ ವೈರಲ್ ಆಯಿತು. ಗೆಳೆಯನಿಗೆ ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ಮಂಡಿಯೂರಿ ಕುಳಿತಾಗ ಸುತ್ತಲೂ ಇದ್ದವರು ಚಪ್ಪಾಳೆ ತಟ್ಟಿದರು. ಅವರಿಗೆ ರಿಂಗ್ ಕೊಟ್ಟು ಮದುವೆಯಾಗುವಂತೆ ಕೋರಿದರು.
ಇದನ್ನೂ ಓದಿ: Neeraj Chopra : ನೀರಜ್ ಚೋಪ್ರಾನನ್ನ ಅರ್ಷದ್ ನದೀಮ್ ಸೋಲಿಸಿ ಬಂಗಾರ ಗೆಲ್ತಾರೆ; ಪಾಕ್ನ ಕ್ರಿಕೆಟಿಗರ ಶುಭಾಶಯ
ಫಿನೋಟ್ ಮತ್ತು ಸ್ಪೇನ್ ನ ಟ್ರಯಥ್ಲೆಟ್ ಆಗಿರುವ ಬ್ರೂನೋ ಮಾರ್ಟಿನೆಜ್ ಒಂಬತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. “ಒಂಬತ್ತು ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಓಡಿದೆ. ಒಂಬತ್ತು ನನ್ನ ಅದೃಷ್ಟದ ಸಂಖ್ಯೆ ಮತ್ತು ನಾವು ಒಂಬತ್ತು ವರ್ಷಗಳಿಂದ ಒಟ್ಟಿಗೆ ಇದ್ದೇವೆ. ನಾನು ಪ್ರಪೋಸ್ ಮಾಡುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡೆ ಎಂದು ಫಿನೋಟ್ ನಂತರ ಸುದ್ದಿಗಾರರಿಗೆ ತಿಳಿಸಿದರು.
“ನನ್ನ ಬಾಯ್ಫ್ರೆಂಡ್ ಇನ್ನೂ ಇನ್ನೂ ಪ್ರಪೋಸ್ ಮಾಡದ ಕಾರಣ, ಬಹುಶಃ ಅದು ನನಗೆ ಬಿಟ್ಟದ್ದು ಎಂದು ನಾನು ಭಾವಿಸಿದೆ.” ಎಂದು ಫಿನೋಟ್ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನಂತರ ಚೀನಾದ ಬ್ಯಾಡ್ಮಿಂಟನ್ ತಂಡದ ಲಿ ಯುಚೆನ್ ಅವರು ಮದುವೆ ಪ್ರಸ್ತಾಪ ಮಾಡಿದ್ದರು. ಅವರ ಸಹ ಆಟಗಾರ್ತಿ ಹುವಾಂಗ್ ಯಾ ಕಿಯಾಂಗ್ ತಕ್ಷಣವೇ ಆಯಿತು ಎಂದು ಒಪ್ಪಿಕೊಂಡಿದ್ದರು. ಹೀಗಾಗಿ ಕ್ರೀಡಾಕೂಟದ ಸಮಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಏಕೈಕ ಕ್ರೀಡಾಪಟು ಫಿನೋಟ್ ಅಲ್ಲ ಎಂದು ಹೇಳಬಹುದು.