ಬೆಂಗಳೂರು: ಹಾಲಿ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾಗ ನೀರಜ್ ಚೋಪ್ರಾ ಮಂಗಳವಾರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವುದಕ್ಕೆ ಸ್ಪರ್ಧೆ ಪ್ರಾರಂಭಿಸಲಿದ್ದಾರೆ. ಚೋಪ್ರಾ ಮತ್ತು ಕಿಶೋರ್ ಕುಮಾರ್ ಜೆನಾ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ಹಾಕಿಯಲ್ಲಿ ದೊಡ್ಡ ಪಂದ್ಯವೂ ಇದೆ. ಭಾರತೀಯ ಪುರುಷರ ತಂಡವು ಫೈನಲ್ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿದೆ. ಹರ್ಮನ್ ಪ್ರೀತ್ ಸಿಂಗ್ ಪಡೆ ಸೆಮಿಫೈನಲ್ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ. ಈ ಟಾಸ್ಕ್ ಸುಲಭವಲ್ಲ. ಆದರೆ ಪುರುಷರ ತಂಡವು ಆಸ್ಟ್ರೇಲಿಯಾ ಮತ್ತು ಗ್ರೇಟ್ ಬ್ರಿಟನ್ ವಿರುದ್ಧ ಎರಡು ಅದ್ಭುತ ಪ್ರದರ್ಶನಗಳನ್ನು ನೀಡಿ ಸೆಮಿಫೈನಲ್ ಗೆ ಪ್ರವೇಶಿಸಿದೆ.
Gold of India in Tokyo 2020
— Earth_Wanderer (@earth_tracker) August 2, 2024
After Abhinav Bindra Neeraj Chopra is the 2nd individual Indian who achieved gold 🥇 in Olympics and end a wait of a 100 years for an athletics medal.
pic.twitter.com/alRopYYazR
ಮಂಗಳವಾರ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಕಣಕ್ಕಿಳಿಯಲಿದ್ದು, ಸತತ ಮೂರು ಒಲಿಂಪಿಕ್ ಅಭಿಯಾನಗಳಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 16ರ ಸುತ್ತಿನಲ್ಲಿ ತಮ್ಮ ಅಭಿಯಾನ ಪ್ರಾರಂಭಿಸುತ್ತಾರೆ.
ಆಗಸ್ಟ್ 6, ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ
ಮಧ್ಯಾಹ್ನ 1:30: ಟೇಬಲ್ ಟೆನಿಸ್ – ಪುರುಷರ ತಂಡ ಸುತ್ತಿನ 16 ಪಂದ್ಯದಲ್ಲಿ ಭಾರತ ಮತ್ತು ಚೀನಾ.
ಭಾರತದ ಶರತ್ ಕಮಲ್, ಹರ್ಮೀತ್ ದೇಸಾಯಿ ಮತ್ತು ಮಾನವ್ ಠಕ್ಕರ್ ಕ್ವಾರ್ಟರ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಮತ್ತು ಚಿನ್ನದ ಪದಕ ನೆಚ್ಚಿನ ತಂಡವಾಗಿರುವ ಚೀನಾವನ್ನು ಎದುರಿಸಲಿದ್ದಾರೆ. ಚೀನಾದ ತಂಡವನ್ನು ಫ್ಯಾನ್ ಝೆಂಡಾಂಗ್, ಮಾ ಲಾಂಗ್ ಮತ್ತು ವಾನ್ಫ್ಗ್ ಚುಕಿನ್ ಮುನ್ನಡೆಸಲಿದ್ದಾರೆ.
ಮಧ್ಯಾಹ್ನ 1:50: ಅಥ್ಲೆಟಿಕ್ಸ್ – ಪುರುಷರ ಜಾವೆಲಿನ್ ಥ್ರೋ ಅರ್ಹತೆ ಸುತ್ತಿನಲ್ಲಿ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ. ಜೆನಾ ಎ ಗುಂಪಿನಲ್ಲಿದ್ದಾರೆ, ಅಂದರೆ ಅವರ ಅರ್ಹತೆ 1:50 ಕ್ಕೆ ಪ್ರಾರಂಭವಾಗುತ್ತದೆ. ನೀರಜ್ ‘ಬಿ’ ಗುಂಪಿನಲ್ಲಿದ್ದು, ಅರ್ಹತಾ ಸುತ್ತು ಮಧ್ಯಾಹ್ನ 3.20ಕ್ಕೆ ಆರಂಭವಾಗಲಿದೆ. 84 ಮೀಟರ್ ಅರ್ಹತಾ ಮಾನದಂಡವನ್ನು ಪೂರೈಸುವ ಕ್ರೀಡಾಪಟುಗಳು ಅಥವಾ ಅಗ್ರ 12 ಎಸೆತಗಾರರು ಫೈನಲ್ಗೆ ಪ್ರವೇಶಿಸುತ್ತಾರೆ.
ಮಧ್ಯಾಹ್ನ 2:50 : ಅಥ್ಲೆಟಿಕ್ಸ್ – ಕಿರಣ್ ಪಹಲ್ ಮಹಿಳೆಯರ 400 ಮೀಟರ್ ರೆಪೆಚೇಜ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ, ಪ್ರತಿ ರಿಪೆಚೇಜ್ ಸುತ್ತಿನ ವಿಜೇತರು ಮತ್ತು ಮುಂದಿನ ಇಬ್ಬರು ವೇಗವಾಗಿ ಸೆಮಿಫೈನಲ್ ಗೆ ಅರ್ಹತೆ ಪಡೆಯುತ್ತಾರೆ.
ಮಧ್ಯಾಹ್ನ 3 ಗಂಟೆಯಿಂದ: ಕುಸ್ತಿ – ಮಹಿಳೆಯರ 50 ಕೆ.ಜಿ ಫ್ರೀಸ್ಟೈಲ್ ಪ್ರಿ ಕ್ವಾರ್ಟರ್ ಫೈನಲ್ಸ್ನಲ್ಲಿ ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ. ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ಒಂದೇ ದಿನ ನಡೆಯಲಿದ್ದು, ವಿನೇಶ್ ಪದಕ ಸುತ್ತಿಗೆ ಅರ್ಹತೆ ಪಡೆಯಬಹುದು.
ಸಂಜೆ 6:30: ಟೇಬಲ್ ಟೆನಿಸ್: ಮಹಿಳಾ ತಂಡ ಕ್ವಾರ್ಟರ್ ಫೈನಲ್ ಪಂದ್ಯ; ಭಾರತ ಮತ್ತು ಯುಎಸ್ಎ ಅಥವಾ ಜರ್ಮನಿ.
ರಾತ್ರಿ 10:30: ಪುರುಷರ ಹಾಕಿ ಸೆಮಿಫೈನಲ್ನಲ್ಲಿ ಭಾರತ ಮತ್ತು ಜರ್ಮನಿ ಸ್ಪರ್ಧಿಸಲಿದೆ.