ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಭಾರತ ಆರು ಪದಕ ಗೆದ್ದಿದೆ. ಇದು ಟೋಕಿಯೊ 2020 ರ ದಾಖಲೆಯ 7 ಪದಕಗಳಿಗಿಂತ ಒಂದು ಕಡಿಮೆ. ಅಲ್ಲೊಂದು ಚಿನ್ನವೂ ಇತ್ತು. ಆದಾಗ್ಯೂ, ಟೋಕಿಯೊ 2020 ಮತ್ತು ಲಂಡನ್ 2012 ಒಲಿಂಪಿಕ್ಸ್ ಬಳಿಕ ಒಲಿಂಪಿಕ್ಸ್ನಲ್ಲಿ ಭಾರತದ ಮೂರನೇ ಅತ್ಯುತ್ತಮ ಪ್ರದರ್ಶನ ಇದು. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಅಶ್ವಾರೋಹಿ, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್, ನೌಕಾಯಾನ, ಶೂಟಿಂಗ್, ಈಜು, ಕುಸ್ತಿ, ಟೇಬಲ್ ಟೆನಿಸ್ ಮತ್ತು ಟೆನಿಸ್ ಸೇರಿದಂತೆ 16 ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಅಥ್ಲೆಟಿಕ್ಸ್ 29 ಸದಸ್ಯರ ತಂಡದೊಂದಿಗೆ ಅತಿದೊಡ್ಡ ಭಾರತೀಯ ಪ್ರಾತಿನಿಧ್ಯವನ್ನು ಹೊಂದಿತ್ತು. ಶೂಟಿಂಗ್ನಲ್ಲಿ ಭಾರತವು 21 ಶೂಟರ್ಗಳ ಅತಿದೊಡ್ಡ ತಂಡವು ಸ್ಪರ್ಧಿಸಿತ್ತು. ಭಾರತ ಪದಕ ಗಳಿಸಿರುವುದು ಕಡಿಮೆಯಾದರೂ ಈ ಬಾರಿ ಭಾರತೀಯ ಅಥ್ಲೀಟ್ಗಳು ಕೆಲವೊಂದು ಕ್ರೀಡೆಯಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಅವುಗಳ ಬಗ್ಗೆ ಇಲ್ಲಿದೆ ವಿವರ.
ನೀರಜ್ ಚೋಪ್ರಾ ಬೆಳ್ಳಿ ಪದಕ
ಪ್ಯಾರಿಸ್ 2024 ರಲ್ಲಿ ನೀರಜ್ ಚೋಪ್ರಾ 89.45 ಮೀಟರ್ ಜಾವೆಲಿನ್ ಎಸೆಯುವ ಮೂಲಕ ವೃತ್ತಿಜೀವನದ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತವನ್ನು ದಾಖಲಿಸಿದರು. ಆದರೆ ಅರ್ಷದ್ ನದೀಮ್ ಅವರು 92.97 ಮೀಟರ್ ಹೊಸ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದ ಕಾರಣ ನೀರಜ್ಗೆ ಬೆಳ್ಳಿ ಲಭಿಸಿತು. ಒಲಿಂಪಿಕ್ ಬೆಳ್ಳಿ ಪದಕ ಗೆಲ್ಲುವುದು ಸಣ್ಣ ಸಾಧನೆಯಲ್ಲ. ಒಲಿಂಪಿಕ್ಸ್ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಭಾರತದ ಎರಡನೇ ಪದಕ ಇದು. ಎರಡಕ್ಕೂ ನೀರಜ್ ವಾರಸ್ದಾರ.
ಟೋಕಿಯೊ 2020 ಚಿನ್ನದ ಪದಕಕ್ಕೆ ಬೆಳ್ಳಿ ಸೇರಿಸಿದ ನಂತರ ಚೋಪ್ರಾ ಭಾರತದಿಂದ ಎರಡು ಬಾರಿ ಒಲಿಂಪಿಕ್ ಪದಕ ಗೆದ್ದ ಐದನೇ ವ್ಯಕ್ತಿ. ನಾರ್ಮನ್ ಪ್ರಿಚರ್ಡ್, ಸುಶೀಲ್ ಕುಮಾರ್, ಪಿ.ವಿ. ಸಿಂಧು ಮತ್ತು ಮನು ಭಾಕರ್ ಭಾರತದಿಂದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತರು.
ಮನು ಭಾಕರ್ ಸಾಧನೆ
ಜುಲೈ 28 ರಂದು ಪ್ಯಾರಿಸ್ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಕಂಚಿನ ಪದಕ ಗೆದ್ದರು. ಈ ಮೂಲಕ ಒಲಿಂಪಿಕ್ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಒಂದು ದಿನ ಮೊದಲು ಭಾಕರ್ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ನ ಫೈನಲ್ಗೆ ಪ್ರವೇಶಿಸಿದ್ದರು. ಹೀಗಾಗಿ 2004 ರ ಅಥೆನ್ಸ್ ನಂತರ ಶೂಟಿಂಗ್ನಲ್ಲಿ ಒಲಿಂಪಿಕ್ ಫೈನಲ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಮನು- ಸರಬ್ಜೋತ್ ಸಾಧನೆ
ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 2024 ರಲ್ಲಿ ಶೂಟಿಂಗ್ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಶೂಟಿಂಗ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಇದು ಶೂಟಿಂಗ್ನಲ್ಲಿ ಭಾರತದ ಆರನೇ ಒಲಿಂಪಿಕ್ ಪದಕ..
ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಶೂಟಿಂಗ್ ಜೋಡಿ ಕೊರಿಯಾದ ಓಹ್ ಯೆ ಜಿನ್ ಮತ್ತು ವೊನ್ಹೋ ಲೀ ಅವರನ್ನು 16-10 ಅಂತರದಿಂದ ಸೋಲಿಸಿತು. ಓಹ್ ಯೆ ಜಿನ್ ಕೆಲವಏ ದಿನಗಳ ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮನು ಭಾಕರ್ ಒಂದೇ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಮನು ಭಾಕರ್ ಒಲಿಂಪಿಕ್ಸ್ನ ಒಂದು ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1900 ರಲ್ಲಿ ಪ್ಯಾರಿಸ್ನಲ್ಲಿ ಪುರುಷರ 200 ಮೀಟರ್ ಮತ್ತು ಪುರುಷರ 200 ಮೀಟರ್ ಹರ್ಡಲ್ಸ್ನಲ್ಲಿ ಬೆಳ್ಳಿ ಗೆದ್ದ ನಾರ್ಮನ್ ಪ್ರಿಚರ್ಡ್ ಈ ಸಾಧನೆ ಮಾಡಿದ್ದರು.
ಶೂಟಿಂಗ್ಗೆ ಮೂರು ಪದಕ
ಆಗಸ್ಟ್ 1ರಂದು ನಡೆದ ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳಲ್ಲಿ ಸ್ವಪ್ನಿಲ್ ಕುಸಾಳೆ ಕಂಚಿನ ಪದಕ ಗೆದ್ದರು. ಪ್ಯಾರಿಸ್ 2024 ರಲ್ಲಿ ಶೂಟಿಂಗ್ನಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಮೂರಕ್ಕೆ ಏರಿಸಿದರು. ಕ್ರೀಡಾಕೂಟದ ಯಾವುದೇ ಆವೃತ್ತಿಯಲ್ಲಿ ಭಾರತವು ಈ ಹಿಂದೆ ಒಂದೇ ಕ್ರೀಡೆಯಲ್ಲಿ ಮೂರು ಪದಕಗಳನ್ನು ಗೆದ್ದಿರಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಎರಡು ಪದಕ ಬಂದಿತ್ತು.
ಮರ್ಯಾದೆ ಕಾಪಾಡಿದ ಅಮನ್
ಭಾರತ ಕುಸ್ತಿಯಲ್ಲಿ ಈ ಬಾರಿ ಹೆಚ್ಚಿನ ಲಾಭ ಪಡೆಯಲಿಲ್ಲ. ವಿನೇಶ್ ಫೋಗಟ್ ಅನರ್ಹಗೊಳ್ಳದೇ ಹೋಗಿದ್ದರೆ ಅವರಿಗೊಂದು ಪದಕ ಖಾತ್ರಿಯಿತ್ತು. ಆದರೆ, ಕೊನೆಯಲ್ಲಿ 21 ವರ್ಷದ ಅಮನ್ ಕಂಚಿನ ಪದಕ ಗೆದ್ದರು. ಹೀಗಾಗಿ ಕುಸ್ತಿಯಲ್ಲಿ ಭಾರತದ ಮಾನ ಉಳಿಸಿದರು.
ಹಾಕಿಯ ಸಾಧನೆಗಳು ಇವು
ಪ್ಯಾರಿಸ್ 2024ರ ಒಲಿಂಪಿಕ್ಸ್ನಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಟೋಕಿಯೊದಲ್ಲಿ ಹಾಕಿಯಲ್ಲಿ ಕಂಚಿನ ಪದಕ ವಿಜೇತರಾದ ಮತ್ತೊಂದು ಸಾಧನೆ ಮಾಡಿತು. 1972 ರ ಮ್ಯೂನಿಚ್ ನಂತರ 52 ವರ್ಷಗಳಲ್ಲಿ ಮೊದಲ ಬಾರಿಗೆ ಹಾಕಿಯಲ್ಲಿ ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದು ಸಾಧನೆ ಮಾಡಿತು. ಇದು ಹಾಕಿಯಲ್ಲಿ ಭಾರತದ ದಾಖಲೆಯ 13 ನೇ ಪದಕವಾಗಿದೆ. ನಾಯಕ ಹರ್ಮನ್ಪ್ರೀತ್ ಸಿಂಗ್ ಪ್ಯಾರಿಸ್ ನಲ್ಲಿ ಒಟ್ಟು 10 ಗೋಲು ಹೊಡೆದರೆ, ಗೋಲ್ ಕೀಪರ್ ಶ್ರೀಜೇಶ್ ಅವರ ಉಳಿಸಿದ ಗೋಲ್ಗಳು ಅಷ್ಟೇ ಪ್ರಮುಖ.
ಆಸ್ಟ್ರೇಲಿಯಾ ಬಗ್ಗು ಬಡಿದ ಭಾರತ
ಪ್ಯಾರಿಸ್ 2024 ಒಲಿಂಪಿಕ್ಸ್ನಲ್ಲಿ ನಾಯಕ ಹರ್ಮನ್ಪ್ರೀತ್ ಸಿಂಗ್ ಅವರ ಗೋಲ್ಗಳ ಬಲದಿಂದ ಟೋಕಿಯೊ 2020 ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು. 1972ರ ಬಳಿಕ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕೊನೇ ಬಾರಿ ಗೆದ್ದಿತ್ತು.
ಪದಕ ಗೆಲ್ಲದಿದ್ದರೂ ಆರ್ಚರಿಯಲ್ಲಿ ವಿಶ್ವಾಸ
ಮಿಶ್ರ ತಂಡ ವಿಭಾಗದಲ್ಲಿ ಧೀರಜ್ ಬೊಮ್ಮದೇವರ ಮತ್ತು ಅಂಕಿತಾ ಭಕತ್ ನಾಲ್ಕನೇ ಸ್ಥಾನ ಪಡೆದರು. ಈ ಮೂಲಕ ಒಲಿಂಪಿಕ್ಸ್ನಲ್ಲಿ ಆರ್ಚ ಪಟು ಭಾರತಕ್ಕೆ ಅತ್ಯುತ್ತಮ ಫಲಿತಾಂಶ ತಂದುಕೊಟ್ಟರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅಮೆರಿಕದ ಬ್ರಾಡಿ ಎಲಿಸನ್ ಮತ್ತು ಕೇಸಿ ಕೌಫೊಲ್ಡ್ ವಿರುದ್ಧ ಬೊಮ್ಮದೇವರ ಮತ್ತು ಭಕತ್ 6-2 ಅಂತರದಲ್ಲಿ ಸೋತರು. ಇದೇ ಮೊದಲ ಬಾರಿಗೆ ಭಾರತೀಯ ಆರ್ಚರಿ ತಂಡ ಒಲಿಂಪಿಕ್ಸ್ನ ಸೆಮಿಫೈನಲ್ಗೆ ಏರಿದ್ದರು.
ಪದಕ ಗೆಲ್ಲದಿದ್ದರೂ ಉತ್ತಮ ಸಾಧನೆ ಮಾಡಿದ ಲಕ್ಷ್ಯ
ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಲಕ್ಷ್ಯ ಸೇನ್ ಪಾತ್ರರಾಗಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಸ್ಪರ್ಧಿಸಿದ ಅವರು ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸುವ ಮೂಲಕ ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 16ರ ಸುತ್ತಿನಲ್ಲಿ ಸಹ ಆಟಗಾರ ಎಚ್.ಎಸ್.ಪ್ರಣಯ್ ಅವರನ್ನು ಸೋಲಿಸಿದರು ಮತ್ತು ನಂತರ ಕ್ವಾರ್ಟರ್ ಫೈನಲ್ನಲ್ಲಿ ಚೌ ಟಿಯೆನ್-ಚೆನ್ ಅವರನ್ನೂ ಮಣಿಸಿದ್ದರು. ಸೆಮಿಫೈನಲ್ನಲ್ಲಿ ಚಾಂಪಿಯನ್ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೋತ ಅವರು ಕಂಚಿನ ಪದಕದ ಪಂದ್ಯದಲ್ಲಿ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಸೋಲು ಕಂಡರು.
ಮಣಿಕಾ ಭಾತ್ರಾಗೆ ಜಸ್ಟ್ ಮಿಸ್
ಮಣಿಕಾ ಬಾತ್ರಾ ಟೇಬಲ್ ಟೆನಿಸ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 18 ನೇ ಶ್ರೇಯಾಂಕದ ಮಣಿಕಾ 64ನೇ ಸುತ್ತಿನಲ್ಲಿ ವಿಶ್ವದ 103ನೇ ಶ್ರೇಯಾಂಕಿತ ಆಟಗಾರ್ತಿ ಗ್ರೇಟ್ ಬ್ರಿಟನ್ನ ಅನ್ನಾ ಹರ್ಸಿ ವಿರುದ್ಧ 4-1 ಅಂತರದಲ್ಲಿ ಜಯ ಸಾಧಿಸುವ ಮೂಲಕ ಅವರು ತಮ್ಮ ಅಭಿಯಾನ ಆರಂಭಿಸಿದ್ದರು. ಅವರು 32 ನೇ ಸುತ್ತಿನಲ್ಲಿ ಫ್ರಾನ್ಸ್ ನ ಪೃಥ್ವಿಕಾ ಪವಾಡೆ ಅವರನ್ನು ಸೋಲಿಸಿದರು. ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 8ನೇ ಶ್ರೇಯಾಂಕದ ಜಪಾನಿನ ಮಿಯು ಹಿರಾನೊ ವಿರುದ್ಧ 4-1 ಅಂತರದಿಂದ ಸೋತ ಮಣಿಕಾ ಅವರ ಅಭಿಯಾನ ಕೊನೆಗೊಂಡಿತು.
ಇದನ್ನೂ ಓದಿ: Marnus Labuschagne : ವಿಶ್ವ ಕಪ್ನಲ್ಲಿ ಭಾರತವನ್ನು ಸೋಲಿಸಲು ನೆರವಾದ ಬ್ಯಾಟ್ಗೆ ವಿದಾಯ ಹೇಳಿದ ಮರ್ನಸ್ ಲಾಬುಶೇನ್
ಒಲಿಂಪಿಕ್ ಚೊಚ್ಚಲ ಆಟಗಾರ್ತಿ ಶ್ರೀಜಾ ಅಕುಲಾ ಜುಲೈ 30ರಂದು ನಡೆದ 16 ನೇ ಸುತ್ತಿನಲ್ಲಿ ಸ್ವೀಡನ್ ಕ್ರಿಸ್ಟಿನಾ ಕಾಲ್ಬರ್ಗ್ ವಿರುದ್ಧ 4-0 ಮತ್ತು 32 ನೇ ಸುತ್ತಿನಲ್ಲಿ ಸಿಂಗಾಪುರದ ಜೆಂಗ್ ಜಿಯಾನ್ ವಿರುದ್ಧ 4-2 ಅಂತರದಿಂದ ಗೆದ್ದರು. ಆದರೆ, ತಮ್ಮ 26 ನೇ ಹುಟ್ಟುಹಬ್ಬದಂದು ಟೋಕಿಯೊ 2020 ಬೆಳ್ಳಿ ಪದಕ ವಿಜೇತ ಚೀನಾದ ಸನ್ ಯಿಂಗ್ಶಾ ವಿರುದ್ಧ 16 ನೇ ಸುತ್ತಿನಲ್ಲಿ ಸೋತರು.