Site icon Vistara News

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ 2024ರ (Paris Olympics 2024) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. 7500 ಅಥ್ಲೀಟ್​ಗಳು ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮುಂದೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಬಾರಿ ವಿಶೇಷ ಎನಿಸುವಂಥ ಅಥ್ಲೀಟ್​ಗಳ ಪರೇಡ್​ ನಡೆಯಿತು. ಪ್ಯಾರಿಸ್ ನದಿಯ ಸೀನ್​ ನದಿಯಲ್ಲಿ ಅಥ್ಲೀಟ್​ಗಳನ್ನು ದೋಣಿಯಲ್ಲಿ ಕರೆದುಕೊಂಡು ಹೋಗಲಾಯಿತು. ಟೆನಿಸ್ ತಾರೆ ಶರತ್ ಕಮಾಲ್​ ಹಾಗೂ ಷಟ್ಲರ್ ಪಿ. ವಿ ಸಿಂಧೂ ಭಾರತದ 117 ಅಥ್ಲೀಟ್​ಗಳ ನಿಯೋಗದ ನೇತೃತ್ವ ವಹಿಸಿದ್ದರು. ಅವರು ತ್ರಿವರ್ಣ ಧ್ವಜ ಹಿಡಿದು ದೋಣಿಯಲ್ಲಿ ಸಾಗಿದರು.

ಆರು ಕಿಲೋಮೀಟರ್ ಮೆರವಣಿಗೆ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು ಮತ್ತು 85 ದೋಣಿಗಳು 205 ರಾಷ್ಟ್ರಗಳ 6800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಸಾಗಿಸಿದವು. ಮಳೆಯ ಬೆದರಿಕೆ ಹೊರತಾಗಿಯೂ ಫ್ರೆಂಚ್ ರಾಜಧಾನಿಯ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಸೀನ್ ನದಿಯಲ್ಲಿ ಮಹತ್ವಾಕಾಂಕ್ಷೆಯ ಪ್ರದರ್ಶನ ನಡೆಯಿತು. ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ, ಉದ್ಘಾಟನಾ ಸಮಾರಂಭವು ಮುಖ್ಯ ಕ್ರೀಡಾಂಗಣದ ಹೊರಗೆ ನಡೆಯುತ್ತಿದೆ. ಸುಮಾರು 300,000 ಜನರು ನದಿಯ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸ್ಟ್ಯಾಂಡ್​ಗಳಲ್ಲ ಕುಳಿತು ವೀಕ್ಷಿಸಿದರು. ಇನ್ನೂ 200,000 ಜನರು ಬಾಲ್ಕನಿಗಳು ಮತ್ತು ಅಪಾರ್ಟ್ಮೆಂಟ್​ಗಳಲ್ಲಿ ಕುಳಿತು ವೀಕ್ಷಿಸಿದರು.

ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ‘ಪೆರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾಯಿತು, ಮಳೆ ಅಡ್ಡಿಪಡಿಸಿದ ಹೊರತಾಗಿಯೂ ಕಾರ್ಯಕ್ರಮ ವರ್ಣರಂಜಿತವಾಗಿ ಆರಂಭಗೊಂಡಿತು. ಫ್ರೆಂಚ್ ಫುಟ್ಬಾಲ್ ದಂತಕಥೆ ಜಿನೆಡಿನ್ ಜಿಡಾನೆ ಪ್ಯಾರಿಸ್​​ನ ಬೀದಿಗಳಲ್ಲಿ ಒಲಿಂಪಿಕ್ ಜ್ಯೋತಿ ಜತೆ ಓಡಿದರು.

ಕ್ರೀಡಾಪಟುಗಳು ಮಾತ್ರವಲ್ಲ, ವಿಶ್ವ ನಾಯಕರು ಶುಕ್ರವಾರ ಮಧ್ಯಾಹ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಎಲಿಸೀ ಪ್ಯಾಲೇಸ್ ಕಚೇರಿಗೆ ಆಗಮಿಸಿದ್ದರು/ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಅತಿಥಿಗಳನ್ನು ಎಲಿಸಿಯ ಅಂಗಳದಲ್ಲಿ ರೆಡ್​ ಕಾರ್ಪೆಟ್ ಸ್ವಾಗತ ನೀಡಿರು. ಸೀನ್ ನದಿಯಲ್ಲಿ ಸಮಾರಂಭಕ್ಕೆ ಮೊದಲು ಸುಮಾರು 85 ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರಿಗೆ ಸ್ವಾಗತ ನೀಡಲಾಯಿತು.

ಅಮೆರಿಕದ ಗಾಯಕಿ ಲೇಡಿ ಗಾಗಾ ಸಂಜೆಯ ವೇಳೆ ತಮ್ಮ ಪ್ರದರ್ಶನ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಿಸ್​ನಾದ್ಯಂತ ಅನೇಕ ಐತಿಹಾಸಿಕ ಸ್ಥಳಗಳ ಕಲಾವಿದರಿಂದ ಸಿಂಕ್ರೊನೈಸ್ಡ್ ನೃತ್ಯ ಪ್ರದರ್ಶನಗಳು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದವು.

ಮೊದಲ ದಿನದಂದು ಭಾರತಕ್ಕೆ 16 ಸ್ಪರ್ಧೆಗಳು

ಸ್ಪರ್ಧೆಗಳು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆರಂಭಿಕ ದಿನದಂದು ಭಾರತವು 16 ಸ್ಪರ್ಧೆಗಳಲ್ಲಿ 6ರಲ್ಲಿ ಭಾಗವಹಿಸಲಿದೆ. ಅವುಗಳೆಂದರೆ, ರೋಯಿಂಗ್, ಬ್ಯಾಡ್ಮಿಂಟನ್, ಶೂಟಿಂಗ್, ಟೇಬಲ್ ಟೆನಿಸ್, ಟೆನಿಸ್ ಮತ್ತು ಹಾಕಿ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

ಬಹುನಿರೀಕ್ಷಿತ ಕ್ರೀಡಾಕೂಟದ ಪ್ರಾರಂಭಕ್ಕೆ ಮುಂಚಿತವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಪ್ರತಿನಿಧಿಸುವ 117 ಅಥ್ಲೀಟ್​ಗಳ ಭಾರತದ ನಿಯೋಗಕ್ಕೆ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ ಆರಂಭವಾಗುತ್ತಿದ್ದು ಭಾರತೀಯ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಪ್ರತಿಯೊಬ್ಬ ಕ್ರೀಡಾಪಟುವೂ ಭಾರತದ ಹೆಮ್ಮೆ.. ಅವರೆಲ್ಲರೂ ತಮ್ಮ ಅಸಾಧಾರಣ ಪ್ರದರ್ಶನಗಳು ನಮಗೆ ಸ್ಫೂರ್ತಿ ನೀಡುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಬೆಳಗಿಸಲಿ ಮತ್ತು ಸಾಕಾರಗೊಳಿಸಲಿ ಎಂದು ಪ್ರಧಾನಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Exit mobile version