Site icon Vistara News

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಗಳ ವಿವರ ಇಲ್ಲಿದೆ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾಕೂಟದ 9ನೇ ದಿನದ ಸ್ಪರ್ಧೆಗಳು ಭಾನುವಾರ ನಡೆಯಲಿವೆ. ಟೋಕಿಯೊ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಭಾರತದ ನಾಲ್ಕನೇ ಪದಕವನ್ನು ಗಳಿಸಲು ಆಗಸ್ಟ್ 4ರಂದು ಕ್ವಾರ್ಟರ್ ಫೈನಲ್​​ನಲ್ಲಿ ಚೀನಾದ ಲಿ ಕಿಯಾನ್ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಸೆಮಿಫೈನಲ್ ನಲ್ಲಿ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸುವ ಮೂಲಕ ಪದಕ ಗಳಿಸುವ ಗುರಿ ಹೊಂದಿದ್ದಾರೆ ಭಾರತದ ಯಾವುದೇ ಪುರುಷ ಶಟ್ಲರ್ ಇದುವರೆಗೆ ಫೈನಲ್ ತಲುಪಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಪುರುಷರ ತಂಡವು ಕ್ವಾರ್ಟರ್ ಫೈನಲ್​ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ. ಹೀಗಾಗಿ ಹಾಕಿಯಲ್ಲಿ ಭಾರತಕ್ಕೆ ಮತ್ತೊಂದು ಪ್ರಮುಖ ಪಂದ್ಯವಾಗಿದೆ. ಶೂಟಿಂಗ್​ನಲ್ಲಿ ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಪುರುಷರ 25 ಮೀಟರ್ ರ್ಯಾಪಿಡ್​ ಫೈರ್ ಪಿಸ್ತೂಲ್​​ಗೆ ಅರ್ಹತೆ ಪಡೆಯಲು ಪ್ರಯತ್ನಿಸುತ್ತಾರೆ. ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ ಮಹಿಳಾ ಸ್ಕೀಟ್ ಅರ್ಹತಾ 2 ನೇ ದಿನಕ್ಕೆ ಮರಳಲಿದ್ದಾರೆ.

ಅಥ್ಲೆಟಿಕ್ಸ್​​ನಲ್ಲಿ ಪಾರುಲ್ ಚೌಧರಿ ಮಹಿಳೆಯರ 3,000 ಮೀಟರ್ ಸ್ಟೀಪಲ್ಚೇಸ್ ರೌಂಡ್ 1 ರಲ್ಲಿ ಭಾಗವಹಿಸಿದರೆ, ಜೆಸ್ವಿನ್ ಆಲ್ಡ್ರಿನ್ ಪುರುಷರ ಲಾಂಗ್ ಜಂಪ್ ಅರ್ಹತೆಯಲ್ಲಿ ಸ್ಪರ್ಧಿಸಲಿದ್ದಾರೆ. ವಿಷ್ಣು ಸರವಣನ್ ಮತ್ತು ನೇತ್ರಾ ಕುಮನನ್ ತಮ್ಮ ತಮ್ಮ ಸೇಯ್ಲಿಂಗ್​ ಸ್ಪರ್ಧೆಗಳಲ್ಲಿ ಇನ್ನೂ ಎರಡು ರೇಸ್ ಗಳಿಗೆ ಮರಳಲಿದ್ದಾರೆ.

ಇದನ್ನೂ ಓದಿ: Wasim Jaffer : ಪಂಜಾಬ್ ತಂಡದ ಕೋಚ್​ ಆಗಿ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್ ನೇಮಕ

ಆಗಸ್ಟ್ 4 ರಂದು ) ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಶೂಟಿಂಗ್: 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 1: ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ – ಮಧ್ಯಾಹ್ನ 12.30ಕ್ಕೆ

25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತಾ ಹಂತ 2: ವಿಜಯ್​ವೀರ್​ ಸಿಧು ಮತ್ತು ಅನೀಶ್ ಭನ್ವಾಲಾ – ಸಂಜೆ 4.30ಕ್ಕೆ

ಮಹಿಳಾ ಸ್ಕೀಟ್ ಅರ್ಹತಾ (ದಿನ 2): ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ – ಮಧ್ಯಾಹ್ನ 1 ಗಂಟೆಗೆ

ಮಹಿಳಾ ಸ್ಕೀಟ್ ಫೈನಲ್ (ಅರ್ಹತೆ ಪಡೆದರೆ): ಮಹೇಶ್ವರಿ ಚೌಹಾಣ್ ಮತ್ತು ರೈಜಾ ಧಿಲ್ಲಾನ್ – ಸಂಜೆ 7 ಗಂಟೆಗೆ

ಗಾಲ್ಫ್: ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ (ರೌಂಡ್ 4): ಶುಭಂಕರ್ ಶರ್ಮಾ ಮತ್ತು ಗಗನ್ಜೀತ್ ಭುಲ್ಲರ್ – ಮಧ್ಯಾಹ್ನ 12.30ಕ್ಕೆ

ಹಾಕಿ: ಪುರುಷರ ಕ್ವಾರ್ಟರ್ ಫೈನಲ್: ಭಾರತ ವಿರುದ್ಧ ಗ್ರೇಟ್ ಬ್ರಿಟನ್ – ಮಧ್ಯಾಹ್ನ 1:30ಕ್ಕೆ

ಅಥ್ಲೆಟಿಕ್ಸ್

ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ರೌಂಡ್ 1: ಪಾರುಲ್ ಚೌಧರಿ – ಮಧ್ಯಾಹ್ನ 1:35ಕ್ಕೆ

ಪುರುಷರ ಲಾಂಗ್ ಜಂಪ್ ಅರ್ಹತೆ: ಜೆಸ್ವಿನ್ ಆಲ್ಡ್ರಿನ್ – ಮಧ್ಯಾಹ್ನ 2:30ಕ್ಕೆ

ಬಾಕ್ಸಿಂಗ್: ಮಹಿಳೆಯರ 75 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್: ಚೀನಾ ಸ್ಪರ್ಧಿ ವಿರುದ್ಧ ಲೊವ್ಲಿನಾ ಬೊರ್ಗೊಹೈನ್ 3:02ಕ್ಕೆ

ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್: ಲಕ್ಷ್ಯ ಸೇನ್ ವಿರುದ್ಧ ವಿಕ್ಟರ್ ಅಕ್ಸೆಲ್ಸನ್ (ಡೆನ್ಮಾರ್ಕ್) – ಮಧ್ಯಾಹ್ನ 3:30ಕ್ಕೆ

ಸೇಯ್ಲಿಂಗ್​: ಪುರುಷರ ಡಿಂಗಿ ರೇಸ್ 7 ಮತ್ತು 8: ವಿಷ್ಣು ಸರವಣನ್ – ಮಧ್ಯಾಹ್ನ 3:35ಕ್ಕೆ

ಮಹಿಳಾ ಡಿಂಗಿ ರೇಸ್ 7 ಮತ್ತು 8: ನೇತ್ರಾ ಕುಮನನ್ – ಸಂಜೆ 6:05.ಕ್ಕೆ

Exit mobile version