ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ನ (Paris Olympics 2024) ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಹಾಕಿಯಲ್ಲಿ ಕಂಚಿನ ಪದಕ ಗೆದ್ದಿದೆ. ಈ ಮೂಲಕ ಒಲಿಂಪಿಕ್ಸ್ನ ಕಂಚಿನ ಪದಕ ಉಳಿಸಿಕೊಂಡಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ 41 ವರ್ಷಗಳ ಬಳಿಕ ಅಮೋಘ ಸಾಧನೆ ಮಾಡಿತ್ತು. ಅದೇ ಸಾಧನೆಯನ್ನು ಮತ್ತೆ ಪುನರಾವರ್ತನೆ ಮಾಡಿದೆ ಭಾರತ ತಂಡ. ಪದಕಗಳ ಕೊರತೆ ಎದುರಿಸುತ್ತಿರುವ ಭಾರತ ಅಥ್ಲೀಟ್ಗಳ ನಿಯೋಗಕ್ಕೆ ಹಾಗೂ ಕ್ರೀಡಾಭಿಮಾನಿಗಳಿಗೆ ಇದು ಅತ್ಯಂತ ಸಂಭ್ರಮದ ಸುದ್ದಿ.
ಒಲಿಂಪಿಕ್ ಹಾಕಿ ಇತಿಹಾಸದಲ್ಲಿ ಭಾರತವು ಅತ್ಯಂತ ಯಶಸ್ವಿ ತಂಡ. ಪುರುಷರ ತಂಡವು ಎಂಟು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದಿದೆ. ಕೊನೆಯ ಚಿನ್ನದ ಪದಕ 1980ರಲ್ಲಿ ಬಂದಿತು. ನಂತರ ತಂಡವು 41 ವರ್ಷಗಳ ಪದಕ ಬರವನ್ನು ಎದುರಿಸಿತು. ಟೋಕಿಯೊದಲ್ಲಿ ನಡೆದ 2020 ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು.
Harmanpreet Singh grew up helping his father in the field, but little did he know that this was training him to be a future drag-flicking champion!
— The Better India (@thebetterindia) August 8, 2024
You’ll always be our gold, Skipper! ✨🏑#India #Hockey #Paris2024 #Olympics #TeamIndia #HarmanpreetSingh pic.twitter.com/9Uzn0m0yJq
ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಎರಡೂ ತಂಡಗಳು ಗೋಲ್ ರಹಿತ ಆಟವನ್ನು ಆಡಿತು. ಆದರೆ, 2ನೇ ಕ್ವಾರ್ಟರ್ನಲ್ಲಿ ಸ್ಪೇನ್ ತಂಡದ ನಾಯಕ ಮಾರ್ಕ್ ಮಿರಾಲೆಸ್ 11ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದರೊಂದಿಗೆ ಸ್ಪೇನ್ ಮುನ್ನಡೆಯನ್ನು ಪಡೆದುಕೊಂಡಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಭಾರತ ತಂಡದ ನಾಯಕ ಗೋಲ್ ಬಾರಿಸುವ ಮೂಲಕ ಗೋಲ್ಗಳ ಸಮಬಲಗೊಳ್ಳುವಂತೆ ಮಾಡಿದರು. ಮೂರನೇ ಕ್ವಾರ್ಟರ್ನಲ್ಲಿ ಮತ್ತೊಂದು ಗೋಲ್ ಬಾರಿಸಿ ಅವರು ಮುನ್ನಡೆ ತಂದುಕೊಟ್ಟರು. ಅದೇ ಮುನ್ನಡೆಯನ್ನು ಕೊನೇ ತನಕ ಉಳಿಸಿಕೊಂಡು ಗೆಲುವು ಸಾಧಿಸಿತು.
#Olympics | 𝐓𝐇𝐄 𝐁𝐎𝐘𝐒 𝐁𝐑𝐈𝐍𝐆 𝐇𝐎𝐌𝐄 𝐁𝐑𝐎𝐍𝐙𝐄🥉🇮🇳 pic.twitter.com/GP8y5tUIuG
— Bajrang Punia 🇮🇳 (@BajrangPunia) August 8, 2024
ಗೋಲ್ ಕೀಪರ್ ಶ್ರೀಜೇಶ್ಗೆ ಉತ್ತಮ ವಿದಾಯ
ಒಲಿಂಪಿಕ್ಸ್ ಉದ್ದಕ್ಕೂ ಭಾರತಕ್ಕೆ ಗೆಲುವಿನಲ್ಲಿ ನೆರವಾಗಿದ್ದು ಗೋಲ್ ಕೀಪರ್ ಶ್ರೀಜೇಶ್. ಹೀಗಾಗಿ ಈ ಪದಕದೊಂದಿಗೆ ಅವರಿಗೆ ಉತ್ತಮ ವಿದಾಯ ದೊರಕಿದೆ. ಒಲಿಂಪಿಕ್ಸ್ ಆರಂಭಕ್ಕೆ ಮುನ್ನವೇ ಅವರು ಇದು ನನಗೆ ಕೊನೇ ಅಂತಾರಾಷ್ಟ್ರೀಯ ಟೂರ್ನಿ ಎಂದು ಹೇಳಿದ್ದರು. ಹೀಗಾಗಿ ಅವರು ಇಲ್ಲಿಗೆ ತಮ್ಮ ವೃತ್ತಿ ಕ್ರೀಡೆಯನ್ನು ಮುಗಿಸಲಿದ್ದಾರೆ. ಹೀಗಾಗಿ ತಂಡದ ಆಟಗಾರರು ಅವರಿಗೆ ಉತ್ತಮ ವಿದಾಯ ಎಂದು ಹೇಳಿದ್ದಾರೆ.
ಭಾರತದ ಹಾಕಿ ತಂಡದ ಸಾಧನೆ ಈ ರೀತಿ ಇದೆ
- ಒಲಿಂಪಿಕ್ ನಲ್ಲಿ ಹಾಕಿ ಪದಕಗಳ ಪಟ್ಟಿ
ಚಿನ್ನದ ಪದಕ , ಆಮ್ಸ್ಟರ್ಡ್ಯಾಮ್ 1928 - ಚಿನ್ನದ ಪದಕ, ಲಾಸ್ ಏಂಜಲೀಸ್ 1932
- ಚಿನ್ನದ ಪದಕ, ಬರ್ಲಿನ್ 1936
- ಚಿನ್ನದ ಪದಕ, ಲಂಡನ್ 1948
- ಚಿನ್ನದ ಪದಕ, ಹೆಲ್ಸಿಂಕಿ 1952
- ಚಿನ್ನದ ಪದಕ ಮೆಲ್ಬೋರ್ನ್ 1956
- ಬೆಳ್ಳಿ ಪದಕ ರೋಮ್ 1960
- ಚಿನ್ನದದ ಪದಕ, ಟೋಕಿಯೊ 1964
- ಕಂಚಿನ ಪದಕ, ಮೆಕ್ಸಿಕೊ ನಗರ 1968
- ಕಂಚಿನ ಪದಕ, ಮ್ಯೂನಿಚ್ 1972
- ಚಿನ್ನದ ಪದಕ, ಮಾಸ್ಕೋ 1980
- ಕಂಚಿನ ಪದಕ, ಟೋಕಿಯೊ 2021