ಬೆಂಗಳೂರು: ಪ್ಯಾರಿಸ್ 2024ರ ಒಲಿಂಪಿಕ್ಸ್ನ (Paris Olympics 2024) ನಾಲ್ಕನೇ ದಿನವಾದ ಮಂಗಳವಾರ ಭಾರತಕ್ಕೆ ಒಂದು ಪದಕ ಲಭಿಸಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಭಾರತದ ಪಾಲಿಗೆ ಇದು ವಿಶೇಷ ಸಾಧನೆಯೂ ಹೌದು. ಯಾಕೆಂದರೆ ಮನು ಭಾಕರ್ 125 ವರ್ಷಗಳ ಬಳಿಕ ಭಾರತ ಪರ ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ದಾಖಲೆಯನ್ನು ಮಾಡಿದ್ದಾರೆ. ಇದೇ ವೇಳೆ ಚೊಚ್ಚಲ ಪ್ರವೇಶದಲ್ಲಿ ಸರಬ್ಜಿತ್ ಪದಕವೊಂದಕ್ಕೆ ಕೊರಳೊಡ್ಡಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಸಾಗಲಿರುವ ಭಾರತ ಅಥ್ಲಿಟ್ಗಳ ನಿಯೋಗ ಐದನೇ ದಿನವಾದ ಬುಧವಾರ (ಜುಲೈ 31) ಹಲವಾರು ಸ್ಪರ್ಧೆಗಳಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಪ್ರಮುಖವಾಗಿ ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ತಂಡಗಳು ಪದಕ ಸನಿಹ ಹೋಗುವ ಪ್ರಯತ್ನ ಮಾಡಲಿವೆ.
ಬುಧವಾರ ಯಾವುದೇ ಪದಕ ಸ್ಪರ್ಧೆ ಇಲ್ಲ. ಆದರೆ ಭಾರತೀಯ ಕ್ರೀಡಾಪಟುಗಳು ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ. ಎರಡು ಬಾರಿಯ ಪದಕ ವಿಜೇತೆ ಪಿ.ವಿ.ಸಿಂಧು ಅವರು ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ ಗ್ರೂಪ್ ಹಂತದ ಪಂದ್ಯವನ್ನು ಗೆದ್ದರೆ 16 ನೇ ಸುತ್ತಿಗೆ ಪ್ರವೇಶ ಪಡೆಯಲಿದ್ದಾರೆ.
🇮🇳❤️ 𝗗𝗼𝘂𝗯𝗹𝗲 𝘁𝗵𝗲 𝗽𝗿𝗶𝗱𝗲, 𝗱𝗼𝘂𝗯𝗹𝗲 𝘁𝗵𝗲 𝘀𝗵𝗶𝗻𝗲! A picture that needs to be framed for ages.
— India at Paris 2024 Olympics (@sportwalkmedia) July 30, 2024
👉 𝗙𝗼𝗹𝗹𝗼𝘄 @sportwalkmedia 𝗳𝗼𝗿 𝗲𝘅𝘁𝗲𝗻𝘀𝗶𝘃𝗲 𝗰𝗼𝘃𝗲𝗿𝗮𝗴𝗲 𝗼𝗳 𝗜𝗻𝗱𝗶𝗮𝗻 𝗮𝘁𝗵𝗹𝗲𝘁𝗲𝘀 𝗮𝘁 𝘁𝗵𝗲 𝗣𝗮𝗿𝗶𝘀 𝗢𝗹𝘆𝗺𝗽𝗶𝗰𝘀 𝟮𝟬𝟮𝟰!… pic.twitter.com/Z6FvvtgcM8
ಬ್ಯಾಡ್ಮಿಂಟನ್ನಲ್ಲಿ ದೊಡ್ಡ ಪಂದ್ಯವೊಂದು ನಡೆಯಲಿದ್ದು ಲಕ್ಷ್ಯ ಸೇನ್ ಮತ್ತು ಜೊನಾಟನ್ ಕ್ರಿಸ್ಟಿ ನಾಕೌಟ್ ಸುತ್ತಿನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದೆ. ಪ್ರಣಯ್ ಕೂಡ ತಮ್ಮ ಗೆಲುವಿನ ಓಟ ಮುಂದುವರಿಸಲು ಮತ್ತು ಮುಂದಿನ ಸುತ್ತಿಗೆ ಮುನ್ನಡೆಯಲು ಬಯಸುತ್ತಿದ್ದಾರೆ. 50 ಮೀಟರ್ ರೈಫಲ್ 3 ಸ್ಥಾನಗಳ ಪುರುಷರ ಶೂಟರ್ಗಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಮಹಿಳಾ ಟ್ರ್ಯಾಪ್ ಶೂಟರ್ಗಳಾದ ರಾಜೇಶ್ವರಿ ಕುಮಾರಿ ಮತ್ತು ಶ್ರೇಯಸಿ ಸಿಂಗ್ ವೈಯಕ್ತಿಕ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯಲಿದ್ದಾರೆ.
ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ತರುಣ್ ದೀಪ್ ರಾಯ್ ಸ್ಪರ್ಧಿಸಿದರೆ, ಮಹಿಳಾ ವಿಭಾಗದಲ್ಲಿ ದೀಪಿಕಾ ಕುಮಾರಿ ಸ್ಪರ್ಧಿಸಲಿದ್ದಾರೆ.
ಜುಲೈ 31, ಬುಧವಾರದ ಭಾರತದ ವೇಳಾಪಟ್ಟಿ ಇಲ್ಲಿದೆ
ಮಧ್ಯಾಹ್ನ 12:30: ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಅರ್ಹತಾ ಸುತ್ತಿನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: IND vs SL : ಭಾರತ ವಿರುದ್ಧದ ಏಕ ದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ; ಹೊಸ ನಾಯಕನ ಘೋಷಣೆ
ಮಧ್ಯಾಹ್ನ 12.30: ಮಹಿಳೆಯರ ಟ್ರ್ಯಾಪ್ ಅರ್ಹತಾ ಸುತ್ತಿನ ಎರಡನೇ ದಿನ ಶ್ರೇಯಸಿ ಸಿಂಗ್ ಮತ್ತು ರಾಜೇಶ್ವರಿ ಕುಮಾರಿ ಕಣಕ್ಕಿಳಿಯಲಿದ್ದಾರೆ.
ಮಧ್ಯಾಹ್ನ 12:50: ಬ್ಯಾಡ್ಮಿಂಟನ್, ಮಹಿಳಾ ಸಿಂಗಲ್ಸ್ ಗ್ರೂಪ್ ಹಂತದ ಹೋರಾಟದಲ್ಲಿ ಪಿ.ವಿ.ಸಿಂಧು ಮತ್ತು ಕ್ರಿಸ್ಟಿನ್ ಕುಬಾ. ಈ ಪಂದ್ಯದಲ್ಲಿ ಗೆದ್ದರೆ ಸಿಂಧು ನಾಕೌಟ್ ಸುತ್ತಿಗೆ ಪ್ರವೇಶಿಸಲಿದ್ದಾರೆ.
ಮಧ್ಯಾಹ್ನ 1:30: ಈಕ್ವೆಸ್ಟ್ರಿಯನ್ ಇಂಡಿವಿಜುವಲ್ ಡ್ರೆಸೇಜ್: ಅನುಷ್ ಅಗರ್ವಾಲ್ಲಾ ಮತ್ತು ಕ್ಯಾರಾಮೆಲ್ಲೊ 2 ದಿನದಂದು ಕಣಕ್ಕಿಳಿಯಲಿದ್ದಾರೆ.
ಮಧ್ಯಾಹ್ನ 1:40: ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗ್ರೂಪ್ ಹಂತದಲ್ಲಿ ಲಕ್ಷ್ಯ ಸೇನ್ ಮತ್ತು ಜೊನಾಥನ್ ಕ್ರಿಸ್ಟಿ. ಈ ಗುಂಪಿನಿಂದ ರೌಂಡ್-ಆಫ್-16 ಸ್ಥಾನ ಯಾರು ಪಡೆಯುತ್ತಾರೆ ಎಂಬುದು ಇಲ್ಲಿ ನಿರ್ಧಾರವಾಗಲಿದೆ. ಕ್ರಿಸ್ಟಿ ವಿರುದ್ಧ ಲಕ್ಷ್ಯತಮ್ಮ ವೃತ್ತಿಜೀವನದಲ್ಲಿ 1-4 ರಿಂದ ಹಿನ್ನಡೆ ಹೊಂದಿದ್ದಾರೆ.
ಮಧ್ಯಾಹ್ನ 2:30: ಟೇಬಲ್ ಟೆನಿಸ್: ಮಹಿಳಾ ಸಿಂಗಲ್ಸ್ ರೌಂಡ್ ಆಫ್ 32ರಲ್ಲಿ ಶ್ರೀಜಾ ಅಕುಲಾ ಮತ್ತು ಜೆಂಗ್ ಜಿಯಾನ್ ಸ್ಪರ್ಧಿಸಲಿದ್ದಾರೆ. ಒಲಿಂಪಿಕ್ಸ್ನಲ್ಲಿ 16ನೇ ಸುತ್ತಿಗೆ ಪ್ರವೇಶಿಸಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಣಿಕಾ ಬಾತ್ರಾ ಪಾತ್ರರಾಗಿದ್ದು ಶ್ರೀಜಾ ಅದೇ ದಾರಿಯನ್ನು ಅನುಸರಿಸಲಿದ್ದಾರೆ.
ಮಧ್ಯಾಹ್ನ 3:34: ಮಹಿಳೆಯರ 75 ಕೆಜಿ ವಿಭಾಗದ ವಿಭಾಗದ 16ನೇ ಸುತ್ತಿನ ಸ್ಪರ್ಧೆಯಲ್ಲಿ ಲೊವ್ಲಿನಾ ಬೊರ್ಗೊಹೈನ್ ಮತ್ತು ನಾರ್ವೆಯ ಸುನ್ನಿವಾ ಹಾಫ್ಸಡ್ ಜೋಡಿ ಸ್ಪರ್ಧಿಸಲಿದೆ. ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಯಾಗಿದ್ದಾರೆ.
ಮಧ್ಯಾಹ್ನ 3:56: ಆರ್ಚರಿ – ಮಹಿಳೆಯರ ವೈಯಕ್ತಿಕ 64ನೇ ಸುತ್ತಿನಲ್ಲಿ ದೀಪಿಕಾ ಕುಮಾರಿ ಮತ್ತು ರೀನಾ ಪರ್ನತ್.
ಸಂಜೆ 7: ಶೂಟಿಂಗ್- ಮಹಿಳಾ ಟ್ರ್ಯಾಪ್ ಫೈನಲ್; ಶ್ರೇಯಸಿ ಅಥವಾ ರಾಜೇಶ್ವರಿ ಅರ್ಹತೆ ಪಡೆದರೆ ಪದಕದ ಸನಿಹ ಹೋಗಲಿದ್ದಾರೆ.
ರಾತ್ರಿ 9:15: ಆರ್ಚರಿ- ಪುರುಷರ ವೈಯಕ್ತಿಕ ರೌಂಡ್-64 ರಲ್ಲಿ ತರುಣ್ದೀಪ್ ರಾಯ್ ಮತ್ತು ಟಾಮ್ ಹಾಲ್ ಸ್ಪರ್ಧಿಸಲಿದ್ದಾರೆ.
ರಾತ್ರಿ 11: ಬ್ಯಾಡ್ಮಿಂಟನ್- ಪುರುಷರ ಸಿಂಗಲ್ಸ್ ಗ್ರೂಪ್ ಹಂತದಲ್ಲಿ ಎಚ್.ಎಸ್.ಪ್ರಣಯ್ ವಿರುದ್ಧ ಡುಕ್ ಫಾಟ್ ಲೆ.
12:18 ರಾತ್ರಿ : ಪುರುಷರ 71 ಕೆಜಿ ವಿಭಾಗದ 16 ಕೆಜಿ ವಿಭಾಗದಲ್ಲಿ ನಿಶಾಂತ್ ದೇವ್ ಮತ್ತು ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ.
ಇದನ್ನೂ ಓದಿ: Neeraj Chopra : ನಮಸ್ಕಾರ ಪ್ಯಾರಿಸ್; ಒಲಿಂಪಿಕ್ಸ್ ಕ್ರೀಡಾಗ್ರಾಮ ತಲುಪಿದ ಚಿನ್ನದ ಹುಡುಗ ನೀರಜ್ ಚೋಪ್ರಾ