Site icon Vistara News

Paris Olympics 2024 : ಪುರುಷ ಸ್ಪರ್ಧಿಯಿಂದ ಏಟು ತಿಂದ ಇಟಲಿಯ ಮಹಿಳಾ ಬಾಕ್ಸರ್​ಗೆ 41 ಲಕ್ಷ ಬಹುಮಾನ ಘೋಷಿಸಿದ ಬಾಕ್ಸಿಂಗ್​ ಸಂಸ್ಥೆ

Paris Olympics 2024

ಬೆಂಗಳೂರು : ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರಲ್ಲಿ (Paris Olympics 2024 ) ಪುರುಷ ಸ್ಪರ್ಧಿಯಿಂದ ಮೂಗಿಗೆ ಪಂಚ್​ ತಿಂದು ವಿವಾದಾತ್ಮಕ ಸೋಲಿಗೆ ಒಳಗಾದ ಇಟಲಿಯ ಮಹಿಳಾ ಬಾಕ್ಸರ್​ಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ 41 ಲಕ್ಷ (50 ಸಾವಿರ ಡಾಲರ್​) ಬಹುಮಾನ ಘೋಷಿಸಿದೆ. ಗುರುವಾರ ನಡೆದ ವೆಲ್ಟರ್​ವೇಟ್​ ರೌಂಡ್ ಆಫ್ 16 ಪಂದ್ಯದಲ್ಲಿ ಅಲ್ಜೀರಿಯಾದ ಇಮಾನೆ ಖೇಲಿಫ್ ವಿರುದ್ಧ ಕಾರಿನಿ 46 ಸೆಕೆಂಡುಗಳಲ್ಲಿ ಸೋತಿದ್ದರು. ಖೇಲಿಫ್ ಅವರು ಪುರುಷರ ದೇಹದಲ್ಲಿರುವ ಟೆಸ್ಟೋಸ್ಟೆರಾನ್ ಪ್ರಮಾಣ ಹೆಚ್ಚಿದೆ. ಹೀಗಾಗಿ ಅವರಿಗೆ ಸಾಮರ್ಥ್ಯ ಹೆಚ್ಚಿದೆ ಎನ್ನಲಾಗಿದೆ. ಈ ವಿಷಯ ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು.

ಕಾರಿನಿ ಅವರಿಗೆ 50,000 ಡಾಲರ್ ಬಹುಮಾನ ನೀಡಲಾಗುವುದು ಎಂದು ಅಸೋಸಿಯೇಷನ್ ಶುಕ್ರವಾರ ಪ್ರಕಟಿಸಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಂತರ ಬಾಕ್ಸಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹಿಂತೆಗೆದುಕೊಂಡಿತು. ಹೀಗಾಗಿ ಐಬಿಎ ಬ್ಯಾನ್ ಮಾಡಿದ ಖೇಲಿಫಾಗೆ ಒಲಿಂಪಿಕ್ಸ್​​ನಲ್ಲಿ ಅವಕಾಶ ಸಿಕ್ಕಿತು. ಇದೀಗ ಒಲಿಂಪಿಕ್ಸ್ ಸಂಸ್ಥೆ ಜತೆ ಜಿದ್ದಿಗೆ ಬಿದ್ದಿರುವ ಬಾಕ್ಸಿಂಗ್​ ಸಂಸ್ಥೆ ಕಾರಿನಿಗೆ 50,000 ಡಾಲರ್, ಇಟಲಿ ಫೆಡರೇಶನ್​​ಗೆ 25,000 ಡಾಲರ್ ಮತ್ತು ಕೋಚ್​ಗೆ ಹೆಚ್ಚುವರಿಯಾಗಿ 25,000 ಡಾಲರ್ ಕೊಡುವುವದಾಗಿ ಹೇಳಿದೆ. “ಒಲಿಂಪಿಕ್ಸ್ ಸಂಸ್ಥೆ ಮಹಿಳಾ ಬಾಕ್ಸಿಂಗ್ ಅನ್ನು ನಾಶ ಮಾಡಲು ಮುಂದಾಗುತ್ತಿದ್ದಾರೆ ” ಎಂದು ಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಹೇಳಿದ್ದಾರೆ. “ಸುರಕ್ಷತೆಯ ದೃಷ್ಟಿಯಿಂದ ಅರ್ಹ ಕ್ರೀಡಾಪಟುಗಳು ಮಾತ್ರ ರಿಂಗ್​​ನಲ್ಲಿ ಸ್ಪರ್ಧಿಸಬೇಕು. ಕಾರಿನಿಯ ಕಣ್ಣೀರನ್ನು ನೋಡಲಾಗಲಿಲ್ಲ, ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಐಬಿಎ ಅರ್ಹತಾ ಮಾನದಂಡಗಳಲ್ಲಿ ವಿಫಲವಾದ ಕಾರಣ 2023 ರ ವಿಶ್ವ ಚಾಂಪಿಯನ್​​ಷಿಪ್​ನಲ್ಲಿ ಅನರ್ಹಗೊಂಡಿದ್ದ ಅಲ್ಜೀರಿಯಾದ ಖೇಲಿಫ್ ಮತ್ತು ತೈವಾನ್ ಡಬಲ್ ವಿಶ್ವ ಚಾಂಪಿಯನ್ ಲಿನ್ ಯು-ಟಿಂಗ್ ಅವರಿಗೆ ಪ್ಯಾರಿಸ್​ನಲ್ಲಿ ಅನುಮತಿ ನೀಡಿರುವುದೇ ವಿವಾದಕ್ಕೆ ಕಾರಣವಾಗಿದೆ. ಅವರ ನಿಯಮಗಳ ಪ್ರಕಾರ, ಪುರುಷ ಎಕ್ಸ್​ವೈ ಕ್ರೋಮೋಸೋಮ್​ಗಳನ್ನು ಹೊಂದಿರುವ ಕ್ರೀಡಾಪಟುಗಳು ಮಹಿಳಾ ಸ್ಪರ್ಧೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ.

ಐಒಸಿ ಐಬಿಎಯನ್ನು ಬಾಕ್ಸಿಂಗ್ ಆಡಳಿತ ಮಂಡಳಿಯ ಸ್ಥಾನದಿಂದ ತೆಗೆದುಹಾಕಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ಬಾಕ್ಸಿಂಗ್ ಸ್ಪರ್ಧೆಯ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಹೀಗಾಗಿ ಖಲೀಫ್ ಮತ್ತು ಲಿನ್ ಯು-ಟಿಂಗ್ ಭಾಗವಹಿಸುವಿಕೆಯ ಬಗ್ಗೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಇದನ್ನೂ ಓದಿ: Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

ಖೇಲಿಫ್ ಪರ ಐಒಎ ಸಮರ್ಥನೆ

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಖೇಲಿಫ್ ಅವರ ಸ್ಪರ್ಧಿಸುವ ಹಕ್ಕಿನ ಪರವಾಗಿ ನಿಂತಿದೆ. ವಕ್ತಾರ ಮಾರ್ಕ್ ಆಡಮ್ಸ್ ಅವರ ಸ್ಥಾನಮಾನವನ್ನು ದೃಢಪಡಿಸಿದ್ದಾರೆ. “ಅಲ್ಜೀರಿಯಾದ ಬಾಕ್ಸರ್ ಹೆಣ್ಣಾಗಿ ಜನಿಸಿದ್ದಾಳೆ. ನೋಂದಾಯಿತ ಮಹಿಳೆಯಾಗಿದ್ದಾಳೆ. ಹೆಣ್ಣಾಗಿ ತನ್ನ ಜೀವನವನ್ನು ನಡೆಸಿದ್ದಾಕೆ, ಹೆಣ್ಣಾಗಿ ಬಾಕ್ಸಿಂಗ್ ರಿಂಗ್​ಗೆ ಇಳಿದಿದ್ದಾರೆ. ಮಹಿಳಾ ಪಾಸ್ಪೋರ್ಟ್ ಹೊಂದಿದ್ದಾಳೆ” ಎಂದು ಆಡಮ್ಸ್ ಶುಕ್ರವಾರ ಹೇಳಿದ್ದಾರೆ. ಖೇಲಿಫ್ ಅವರ ಭಾಗವಹಿಸುವಿಕೆಯು ಅವರ ಐಒಸಿಯ ಬದ್ಧತೆಗೆ ಸಾಕ್ಷಿ ಎಂದಿದ್ದಾರೆ.

Exit mobile version