Site icon Vistara News

Paris Olympics 2024 : ಭಾರತಕ್ಕೆ ಒಂದು ಪದಕ ಜಸ್ಟ್​​ ಮಿಸ್​; ಆರ್ಚರಿ ಕಂಚಿನ ಪದಕದ ಪಂದ್ಯದಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ​

Paris Olympics 2024

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ನ ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಮತ್ತೊಂದು ಆಘಾತ ಉಂಟಾಯಿತು. ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕದ ಹಣಾಹಣಿಯಲ್ಲಿ ಭಾರತ ಧೀರಜ್​ ಬೊಮ್ಮದೇವರ ಹಾಗೂ ಅಂಕಿತಾ ಅಮೆರಿಕ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡಿತು. ಅಂಕಿತಾ ಹಾಗೂ ಧೀರಜ್​ ಸೆಮಿಫೈನಲ್​ಗೇರಿದಾಗ ಭಾರತಕ್ಕೆ ಪದಕವೊಂದರ ಭರವಸೆ ಮೂಡಿತ್ತು. ಆದರೆ, ಕೊರಿಯಾ ವಿರುದ್ಧ ಸೆಮಿಫೈನಲ್ ಪಂದ್ಯ ಸೋಲು ಉಂಟಾಯಿತು. ಅಮೆರಿಕದ ತಂಡದ ಬಿಲ್ಲುಗಾರರು ಪದಕ ಗೆದ್ದು ಸಂಭ್ರಮಿಸಿದರು.

ಸ್ಪರ್ಧೆಯ ಆರಂಭದಲ್ಲೇ ಭಾರತ ಹಿನ್ನಡೆ ಅನುಭವಿಸಿತು. ಮೊದಲೆರಡು ಸೆಟ್​ಗಳನ್ನು ಸೋತು ಒತ್ತಡಕ್ಕೆ ಬಿತ್ತು. ಮೂರನೇ ಸೆಟ್​ ಗೆದ್ದರೂ ನಾಲ್ಕನೇ ಸೆಟ್ ಅನ್ನು 37 ಅಂಕಗಳೊಂದಿಗೆ ಗೆಲ್ಲುವ ಮೂಲಕ ಯುಎಸ್ಎ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಈ ಸೆಟ್​ನಲ್ಲಿ ಅಂಕಿತಾ 8 ಮತ್ತು 8 ಅಂಕ ಗಳಿಸಿದರೆ, ಧೀರಜ್ 9 ಮತ್ತು 10 ಅಂಕ ಗಳಿಸಿದರು. ಯುಎಸ್ಎ ಪರ ಬ್ರಾಂಡಿ 10 ಮತ್ತು 9 ಅಂಕಗಳನ್ನು ಗಳಿಸಿದರೆ, ಕೇಸಿ 9 ಮತ್ತು 9 ಅಂಕಗಳನ್ನು ಗಳಿಸಿದರು.

ಈ ಗೆಲುವಿನೊಂದಿಗೆ, ಬಿಲ್ಲುಗಾರಿಕೆಯಲ್ಲಿ ಪದಕ ಗೆದ್ದ ಮೊದಲ ಅಮೇರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕೇಸಿ ಪಾತ್ರರಾದರು.ಈ ಸೋಲಿನೊಂದಿಗೆ ಭಾರತಕ್ಕೆ ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಹೆಚ್ಚಿನ ಭರವಸೆಗಳು ಮೂಡಲಿಲ್ಲ. ಆದಾಗ್ಯೂ ಹಾಕಿ ತಂಡ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ವಿಶೇಷ ಸಾಧನೆ ಮಾಡಿತು. ಒಲಿಂಪಿಕ್ಸ್​ನಲ್ಲಿ 52 ವರ್ಷಗಳ ಬಳಿಕ ಆಸೀಸ್​ ಬಳಗವನ್ನು ಮಣಿಸಿ ಸಂಭ್ರಮಿಸಿತು. ಭಾರತ ಹಾಕಿ ತಂಡ ಕ್ವಾರ್ಟರ್​ ಫೈನಲ್​ಗೇರಿದೆ.

25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರ (Paris Olympics 2024) ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ (Manu Bhaker) ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ನಿಖರತೆ ಮತ್ತು ಕ್ಷಿಪ್ರ ಸುತ್ತುಗಳಲ್ಲಿ ಒಟ್ಟು 590 ಅಂಕಗಳನ್ನು ಗಳಿಸಿದ ಮನು. 2ನೇ ಸ್ಥಾನ ಪಡೆದು ಫೈನಲ್​ಗೇರಿದರು. ಹಂಗರಿಯ ವೆರೋನಿಕಾ ಮೇಜರ್ ಅವರಿಗಿಂತ 2 ಅಂಕಗಳ ಹಿಂದೆ ಉಳಿದರು. ವೆರೋನಿಕಾ ಒಲಿಂಪಿಕ್ ಅರ್ಹತಾ ಸುತ್ತಿನ ದಾಖಲೆಯನ್ನು 592 ಅಂಕಗಳೊಂದಿಗೆ ಸರಿಗಟ್ಟಿದರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

ಅರ್ಹತಾ ಸುತ್ತಿನ ಭಾಗವಾಗಿದ್ದ ಇಶಾ ಸಿಂಗ್ 18 ನೇ ಸ್ಥಾನ ಪಡೆದು ನಿರಾಸೆಗೆ ಒಳಗಾದರು. ಇದೇ ವೇಳೆ ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮನು ತನ್ನ ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದರು. ಮನು ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದುಕೊಂಡು ದಾಖಲೆ ಬರೆದಿದ್ದಾರೆ. ಈ ಸ್ಪರ್ಧೆಯಲ್ಲೂ ಗೆದ್ದರೆ ಅವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿಕೊಳ್ಳಲಿವೆ.

ಮನು ತನ್ನ ನಿಖರ ಸುತ್ತಿನ ಮೊದಲ ಸುತ್ತಿನಲ್ಲಿ ಅಸ್ಥಿರ ಆರಂಭ ಪಡೆದುಕೊಂಡಿದ್ದರು. ಏಕೆಂದರೆ ಅವರು ಮೊದಲ 5 ಶಾಟ್​ಗಳಲ್ಲಿ ಎರಡು ಬಾರಿ ಮಾತ್ರ 10 ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಆದಾಗ್ಯೂ, ಅವರು ಪುಟಿದೆದ್ದು ಒಟ್ಟು 5 ಬಾರಿ 10 ಅಂಕ ಗಳಿಸಿದರು.

ಎರಡನೇ ಸೀರಿಸ್​ನಲ್ಲಿ ಅವರು 3 ಬಾರಿ 10 ಅಂಕ ಗಳಿಸಿದರು. ಇನ್ನೂ 5 ಅಂಕಗಳನ್ನು ಸೇರಿಸಿ 98 ಅಂಕಗಳೊಂದಿಗೆ ಕೊನೆಗೊಳಿಸಿದರು. ಮೂರನೇ ಸರಣಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡರು. ಏಕೆಂದರೆ ಅವರು 9 ಬಾರಿ 10 ಅಂಕಗಳನ್ನು ಗಳಿಸಿದರು. ಆಗಸ್ಟ್ 3ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಅವರು ಸೆಣಸಲಿದ್ದಾರೆ

Exit mobile version