Site icon Vistara News

Paris Olympics 2024 : ಭಾರತದವರೇ ಆದ ಎಚ್​ಎಸ್​ ಪ್ರಣಯ್​ ಸೋಲಿಸಿ ಕ್ವಾರ್ಟರ್​​ ಫೈನಲ್ಸ್​ಗೇರಿದ ಲಕ್ಷ್ಯ ಸೇನ್​

Paris Olympics 2024

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನ (Paris Olympics 2024) ಪುರುಷರ ಸಿಂಗಲ್ಸ್​ನಲ್ಲಿ ಭಾರತದವರೇ ಆದ ಎಚ್​ಎಸ್​ ಪ್ರಣಯ್ ಅವರನ್ನು ಸೋಲಿಸಿರುವ 22ರ ಹರೆಯದ ಲಕ್ಷ್ಯ ಸೇನ್ ಕ್ವಾರ್ಟರ್​​ ಫೈನಲ್ಸ್​ಗೆ ಪ್ರವೇಶ ಪಡೆದಿದ್ದಾರೆ. ಲಾ ಚಾಪೆಲ್ ಅರೆನಾ ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಲಕ್ಷ್ಯ 21-12, 21-6 ಅಂತರದಲ್ಲಿ ಪ್ರಣಯ್ ವಿರುದ್ಧ ಭರ್ಜರಿ ಜಯ ಸಾಧಿಸಿದರು.

ವಿಯೆಟ್ನಾಂನ ಲೆ ಡುಕ್ ಫಾಟ್ ವಿರುದ್ಧದ ನಿನ್ನೆಯ ಪಂದ್ಯದ ನಂತರ ದಣಿದಿದ್ದ ಪ್ರಣಯ್ ಅವರಿಂದ ಲಕ್ಷ್ಯ ಹೆಚ್ಚು ಪ್ರತಿಕ್ರಿಯೆ ಪಡೆಯಲಿಲ್ಲ. . ಪ್ರಣಯ್ ಅವರು ಫಾಟ್​​ ವಿರುದ್ಧ 3 ಗೇಮ್​ಗಳ ರೋಚಕ ಪಂದ್ಯವನ್ನು ಗೆದ್ದಿದ್ದರು. ಕಳೆದ ತಿಂಗಳ ಆರಂಭದಲ್ಲಿ ಚಿಕೂನ್ ಗುನ್ಯಾಕ್ಕೆ ಒಳಗಾಗಿದ್ದ ಅವರು ಬುಧವಾರದ ಆಟದಿಂದಾಗಿ ದಣಿದಿದ್ದರು. ಪ್ರಣಯ್ ಪಂದ್ಯದ ಎರಡನೇ ಗೇಮ್ ನ ಅರ್ಧದಲ್ಲೇ ಸುಸ್ತಾದರು. ಲಕ್ಷ್ಯ ಆಟದಲ್ಲಿ 11-3 ರಿಂದ ಮುನ್ನಡೆ ಸಾಧಿಸಿದಾಗಲೇ ಅವರು ನಿರಾಸೆ ಗೊಂಡಿದ್ದರು. ಅಂತಿಮವಾಗಿ 6-21 ರಿಂದ ಸೋತರು/ ಅವರ ಚೊಚ್ಚಲ ಮತ್ತು ಬಹುಶಃ ಅಂತಿಮ ಒಲಿಂಪಿಕ್ ಪ್ರದರ್ಶನ ಇದಾಗಿದೆ.

ಲಕ್ಷ್ಯ ಮತ್ತು ಎಚ್.ಎಸ್.ಪ್ರಣಯ್ ಇಬ್ಬರೂ ಪರಸ್ಪರ ತಮ್ಮ ಸಾಮರ್ಥ್ಯವನ್ನು ಪಣಕ್ಕೊಡುವ ಮೂಲಕ ಪಂದ್ಯವು ಪ್ರಾರಂಭವಾಯಿತು. ಆರಂಭಿಕ ಪಂದ್ಯದ ಮೊದಲಾರ್ಧದಲ್ಲಿ ಆಟಗಾರರು ರ್ಯಾಲಿಗೆ ಹೆಚ್ಚು ಒತ್ತುಕೊಟ್ಟರು. ಅವರಿಬ್ಬರ ಆಟದ ಒಂದು ರ್ಯಾಲಿ 47 ಶಾಟ್​ಗಳ ತನಕ ಮುಂದುವರಿಯಿತು. ಇನ್ನು ಪಂದ್ಯದ ಆರಂಭದಲ್ಲಿಯೇ ಪ್ರಣಯ್ 1-5 ಹಿನ್ನಡೆ ಅನುಭವಿಸಿದ್ದರು. ಅದರಿಂದ ಪಾರಾಗಲು ಅವರಿಗೆ ಸಾಧ್ಯವೇ ಆಗಲಿಲ್ಲ.

ಆರಂಭಿಕ ಗೇಮ್ ನ ವಿರಾಮದ ವೇಳೆಗೆ ಲಕ್ಷ್ಯ 11-6ರಲ್ಲಿ ಮುನ್ನಡೆ ಸಾಧಿಸಿದರು. ಪ್ರಣಯ್ 7-13 ಅಂತರದಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ತಿರುಗೇಟು ನೀಡಲು ಯತ್ನಿಸಿದರು. ಅನುಭವಿ ಶಟ್ಲರ್ ತನ್ನ ಫೋರ್​ಹ್ಯಾಂಡ್​ ಮೂಲಕ ಕ್ರಾಸ್-ಕೋರ್ಟ್ ಸ್ಮ್ಯಾಶ್ ಹೊಡೆಯಲು ಮುಂದಾದರು. ಹೀಗಾಗಿ ಪ್ರಣಯ್ ಅವರಿಂದ ಲಕ್ಷ್ಯ ಒಂದೆರಡು ಬಾರಿ ತೊಂದರೆಗೀಡಾದರಯ, ಬಳಿಕ ಅವರು ತಮ್ಮ ದಾಳಿಯ ವೈಖರಿ ಬದಲಾಯಿಸಿದರು. ಲಕ್ಷ್ಯ ತಮ್ಮ ಡೌನ್-ದಿ-ಲೈನ್ ಸ್ಮ್ಯಾಶ್ ಆಡಲು ಆರಂಭಿಸಿದರು. ಇದು ಪ್ರಣಯ್​ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು.

ಇದನ್ನೂ ಓದಿ: Diksha Dagar : ಗಾಲ್ಫರ್​ ದೀಕ್ಷಾ ದಾಗರ್​ ಪ್ರಯಾಣಿಸುತ್ತಿದ್ದ ಕಾರು ಪ್ಯಾರಿಸ್​​ನಲ್ಲಿ ಅಪಘಾತ

ಎರಡನೇ ಗೇಮ್ ನಲ್ಲಿ ಪ್ರಣಯ್ ವಿರುದ್ಧ ಲಕ್ಷ್ಯ ಭರ್ಜರಿ ಮುನ್ನಡೆ ಸಾಧಿಸಿದರು ಅನುಭವಿ ಆಟಗಾರನನ್ನು ಲಕ್ಷ್ಯ ಮೀರಿಸಿದರು, ಅವರು ತಮ್ಮ ಜೀವನದ ಅತ್ಯುತ್ತಮ ಫಾರ್ಮ್​ನಲ್ಲಿ ಇರುವುದನ್ನು ತೋರಿಸಿದರು. ಲಕ್ಷ್ಯ ಕ್ವಾರ್ಟರ್ ಫೈನಲ್​​ನಲ್ಲಿ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ 34 ವರ್ಷದ ಅನುಭವಿ ಆಟಗಾರನನ್ನು ನಾಲ್ಕು ಬಾರಿ ಎದುರಿಸಿದ್ದಾರೆ. 1-3 ರ ದಾಖಲೆಯನ್ನು ಹೊಂದಿದ್ದಾರೆ. ಇವರಿಬ್ಬರು ಕೊನೆಯ ಬಾರಿಗೆ ಸಿಂಗಾಪುರ್ ಓಪನ್ 2023 ರಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿ ಲಕ್ಷ್ಯ 3 ಗೇಮ್ ಗಳ ಹೋರಾಟದಲ್ಲಿ ಚೌಗೆ ತಲೆಬಾಗಿದ್ದರು.

Exit mobile version