Site icon Vistara News

Paris Olympics 2024 : ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ ಭಾರತದ ಶೂಟಿಂಗ್​ ಸ್ಕೀಟ್ ಮಿಶ್ರ ತಂಡ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಭಾರತದ ಶೂಟಿಂಗ್​ (Olympics Shooting) ಸ್ಕೀಟ್ ಮಿಶ್ರ ತಂಡದ ಸದಸ್ಯರಾದ ಮಹೇಶ್ವರಿ ಚೌಹಾಣ್ ಮತ್ತು ಅನಂತಜೀತ್ ಸಿಂಗ್ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಸೋಮವಾರ ನಡೆದ ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ 4 ನೇ ಸ್ಥಾನ ಪಡೆಯಿತು. ಚೀನಾದೊಂದಿಗೆ ಅಂಕಗಳ ಸಮಬಲ ಸಾಧಿಸಿದ ಭಾರತ ಅರ್ಹತೆ ಪಡೆದುಕೊಂಡಿತು. ಎರಡೂ ತಂಡಗಳು 146 ಅಂಕಗಳನ್ನು ಗಳಿಸಿದ್ದವು.

ಈ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ನಂತರ ಇಟಲಿ ಮತ್ತು ಅಮೆರಿಕೆ ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲಿವೆ. ಇಟಲಿ 149 ಅಂಕ ಪಡೆದು ಅಗ್ರಸ್ಥಾನ ಗಿಟ್ಟಿಸಿದರೆ ಅಮೆರಿಕ ಒಂದು ಅಂಕ ಹಿಂದಕ್ಕೆ ಉಳಿಯಿತು. ಭಾರತದ ಪರ ಮಹೇಶ್ವರಿ ಮತ್ತು ಅನಂತ್​ಜೀತ್​​ ಉತ್ತಮ ಫಾರ್ಮ್​ನಲ್ಲಿದ್ದು ಅವರು ಕಂಚಿನ ಪದಕದ ಹಣಾಹಣಿಗೆ ಅರ್ಹತೆ ಪಡೆದುಕೊಂಡರು.

ಮಹೇಶ್ವರಿ ಮತ್ತು ಅನಂತಜೀತ್ ತಮ್ಮ ಮೊದಲ ಸುತ್ತುಗಳಲ್ಲಿ ಮೊದಲ 4 ಸರಣಿಗಳಲ್ಲಿ ತಪ್ಪುಗಲೇ ಇಲ್ಲದೆ ಪ್ರದರ್ಶನ ನೀಡಿದರು. ಮೊದಲ ಸುತ್ತಿನ ಅಂತಿಮ ಸರಣಿಯಲ್ಲಿ ಮಹೇಶ್ವರಿ ಒಂದು ಶಾಟ್ ತಪ್ಪಿಸಿಕೊಂಡರು. ಆದರೆ ಅನಂತ್ಜೀತ್ ಆವೇಗವನ್ನು ಕಾಯ್ದುಕೊಂಡರು. ಅವರು ಪೂರ್ಣ 29 ಅಂಕಗಳನ್ನು ಗಳಿಸುವ ಮೂಲಕ ತಂಡಕ್ಕೆ 49 ಅಂಕಗಳನ್ನು ತಂದುಕೊಟ್ಟರು.

ಎರಡನೇ ಸುತ್ತಿನಲ್ಲಿ ಮಹೇಶ್ವರಿ ಪರಿಪೂರ್ಣ 25 ಅಂಕಗಳನ್ನು ಗಳಿಸಿದರು. ಅನಂತ್​ಜಿತ್​ ತಮ್ಮ 25 ಶಾಟ್​ಗಳಿಂದ ಕೇವಲ 23 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಸಮಯದಲ್ಲಿ, ಅವರು ಅಗ್ರ ತಂಡಗಳೊಂದಿಗೆ ಸ್ಪರ್ಧಿಸುತ್ತಿದ್ದರು. ಎರಡನೇ ಇಟಾಲಿಯನ್ ತಂಡವಾದ ಮಾರ್ಟಿನಾ ಬಾರ್ಟೊಲೊಮಿ ಮತ್ತು ತಮ್ಮರೊ ಕಸ್ಸಾಂಡ್ರೊ ಅವರ ಸವಾಲು ಎದುರಿಸಿದ್ದರು.

ಇದನ್ನೂ ಓದಿ: Manu Bhaker : ಪ್ಯಾರಿಸ್​ ಒಲಿಂಪಿಕ್ಸ್​​ ಸಮಾರೋಪದಲ್ಲಿ ಮನು ಭಾಕರ್​​ ತ್ರಿವರ್ಣ ಧ್ವಜಧಾರಿ

ಅಂತಿಮ ಸುತ್ತಿನಲ್ಲಿ ಮಹೇಶ್ವರಿ 25 ಅಂಕಗಳನ್ನು ಗಳಿಸಿ ಮೂರು ಸುತ್ತುಗಳನ್ನು ಮುಗಿಸಿದರು. ಅನಂತ್ಜೀತ್ ತಮ್ಮ ಒಂದು ಶಾಟ್ ತಪ್ಪಿಸಿಕೊಂಡರು. ಅವರು 24 ಅಂಕ ಗಳಿಸುವ ಮೂಲಕ ತಂಡ 49 ಅಂಕ ಗಳಿಸಿತು. ಬಾರ್ಟೊಲೊಮಿ ಮತ್ತು ಕಸ್ಸಾಂಡ್ರೊ 144 ಅಂಕಗಳನ್ನು ಗಳಿಸಿದರೆ ಭಾರತದ ಜೋಡಿ 146 ಅಂಕಗಳನ್ನು ಗಳಿಸಿತು.

ಕ್ವಾರ್ಟರ್​ ಫೈನಲ್​ಗೇರಿದ ಭಾರತ ಮಹಿಳೆಯರ ಟೇಬಲ್ ಟೆನಿಸ್​ ತಂಡ

ಪ್ಯಾರಿಸ್: ಭಾರತದ ಮಹಿಳೆಯರ ಟೇಬಲ್​ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕ್ವಾರ್ಟರ್​ಫೈನಲ್​ಗೇರಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೊಮೇನಿಯಾ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮುನ್ನಡೆ ಸಾಧಿಸಿದೆ. ಅನುಭವಿ ಆಟಗಾರ್ತಿ ಮಣಿಕಾ ಭಾತ್ರಾ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಶ್ರೀಜಾ ಅಕುಲಾ-ಅರ್ಚನಾ ಕಾಮತ್ ಮತ್ತು ಮಣಿಕಾ ಬಾತ್ರಾ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

ಭಾರತ ತಂಡ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿತು. ರೊಮೇನಿಯಾ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು. ಐದನೇ ಪಂದ್ಯದಲ್ಲಿ ಬಾತ್ರಾ 11-5, 11-9, 11-9 ಸೆಟ್ ಗಳಿಂದ ಆದಿನಾ ಡಯಾಕೊನು ಅವರನ್ನು ಸೋಲಿಸಿದರು. ಮಹಿಳಾ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್​​ನಲ್ಲಿ ಭಾರತ ಯುಎಸ್ಎ ಅಥವಾ ಜರ್ಮನಿಯನ್ನು ಎದುರಿಸಲಿದೆ.

Exit mobile version