Site icon Vistara News

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024

ನವದೆಹಲಿ: ಭಾರತದ ಮಹಿಳಾ ಶೂಟರ್​ ಮನು ಭಾಕರ್ ಶನಿವಾರ (ಜುಲೈ 27) ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) 10 ಮೀಟರ್​ ಏರ್​ ಪಿಸ್ತೂಲ್ ವಿಭಾಗದಲ್ಲಿ ಫೈನಲ್​ಗೇರಿದ್ದಾರೆ. ಈ ಮೂಲಕ ಹಾಲಿ ಒಲಿಂಪಿಕ್ಸ್​​ನಲ್ಲಿ ಫೈನಲ್​ಗೇರಿದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಫ್ರಾನ್ಸ್ನ ಚಟೌರಾಕ್ಸ್​ನಲ್ಲಿ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ 22 ವರ್ಷದ ಭಾಕರ್ ಮೂರನೇ ಸ್ಥಾನ ಪಡೆದುಕೊಂಡು ಅಂತಿಮ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಭಾರತದ ಶೂಟರ್​ಗಳು ಮೊದಲ ದಿನದಂದು ನಿರಾಸೆಯ ಪ್ರದರ್ಶನ ನೀಡಿರುವ ಕಾರಣ ಮನು ಸಾಧನೆ ಭರವಸೆ ಎನಿಸಿಕೊಂಡಿದೆ.

ಭಾನುವಾರ ನಡೆಯಲಿರುವ ಫೈನಲ್ ಪ್ರವೇಶಿಸಲು ಆರು ಸರಣಿಗಳ ಶೂಟಿಂಗ್​ ಅರ್ಹತೆಯಲ್ಲಿ 580 ಅಂಕ ಗಳಿಸಿದ ಮನು ಸಂಭ್ರಮಿಸಿದರು. ಭಾರತದ ಮತ್ತೊಬ್ಬರು ಶೂಟರ್​ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ತಮ್ಮ ಅಭಿಯಾನ ಮುಗಿಸಿದರು. ಅವರು 573 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಗ್ರ ಎಂಟು ಶೂಟರ್​ಗಳು ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಹಂಗರಿಯ ವೆರೋನಿಕಾ ಮೇಜರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು 582 ಅಂಕಗಳನ್ನು ಪಡೆದರು. ಇನ್ನು ಕೊರಿಯಾದ ವೈ.ಜೆ ಓಹ್​ 52 ಅಂಕ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಮನು ಬಾಕರ್​ ಆರಂಭದಿಂದಲೇ ಉತ್ತಮ ಪ್ರದರ್ಶ ನೀಡಿದ್ದರು. ಮೊದಲ 10 ಶಾಟ್​ಗಳಲ್ಲಿ 97/100 ಗಳಿಸಿದರು 22 ವರ್ಷದ ಭಾರತೀಯ ಆಟಗಾರ್ತಿ ಎರಡನೇ ಸುತ್ತಿನಲ್ಲೂ 97 ಅಂಕ ಗಳಿಸಿಕೊಂಡರು. ಆರು ಸೀರಿಸ್​​ನ ಸ್ಪರ್ಧೆಯಲ್ಲಿ ಮನು 292/300 ಅಂಕಗಳನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

ರಿದಮ್ ಸಾಂಗ್ವಾನ್ ಅರ್ಧದ ಹಂತದಲ್ಲಿ 286/300 ರನ್ ಗಳಿಸಿದ್ದರು. ಅವರು ಈವೆಂಟ್ ಅನ್ನು 573-14x ನಿಂದ ಕೊನೆಗೊಳಿಸಿದರು. ಮೊದಲ ಸರಣಿಯಲ್ಲಿ 97/100 ರನ್ ಗಳಿಸಿದ ನಂತರ, ಸಾಂಗ್ವಾನ್ ಎರಡನೇ ಸೀರಿಸ್​ನಲ್ಲಿ 92 ರನ್ ಗಳಿಸಿದರು. ಅಗ್ರ ಎಂಟು ಶೂಟರ್ಗಳು ನಾಳೆ, ಭಾನುವಾರ ಮಧ್ಯಾಹ್ನ 3:30 ಕ್ಕೆ ನಡೆಯಲಿರುವ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.

ಫೈನಲ್​​ಗೆ ಅರ್ಹತೆ ಪಡೆದ ಅಗ್ರ ಎಂಟು ಶೂಟರ್​ಗಳ ವಿವರ

ಭಾರತಕ್ಕೆ ನಿರಾಸೆ

ಆರಂಭಿಕ ಎರಡು ಸ್ಪರ್ಧೆಗಳಲ್ಲಿ ಯಾವುದೇ ಭಾರತೀಯರು ಫೈನಲ್​​ಗೆ ಪ್ರವೇಶಿಸಲು ಸಾಧ್ಯವಾಗದ ಕಾರಣ ಭಾರತವು ಶೂಟಿಂಗ್​​ನಲ್ಲಿ ಕಳಪೆ ಆರಂಭವನ್ನು ಹೊಂದಿತ್ತು. 10 ಮೀಟರ್ ಏರ್ ರೈಫಲ್ ಮಿಶ್ರ ತಂಡಗಳು 28 ತಂಡಗಳ ಸ್ಪರ್ಧೆಯಲ್ಲಿ 6 ಮತ್ತು 12 ನೇ ಸ್ಥಾನಗಳನ್ನು ಗಳಿಸಿದವು. ಹೀಗಾಗಿ ಪದಕ ಪಂದ್ಯಗಳಿಗೆ ಅಗತ್ಯವಾದ ಅಗ್ರ ನಾಲ್ಕು ಸ್ಥಾನಗಳಿಗೆ ಹೋಗಲು ವಿಫಲಗೊಂಡಿತು. ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ 33 ಅಥ್ಲೀಟ್​ಗಳ ವಿಭಾಗದಲ್ಲಿ 9ನೇ ಸ್ಥಾನ ಪಡೆದು ಫೈನಲ್​ಗೆ ಪ್ರವೇಶಿಸುವಲ್ಲಿ ವಿಫಲರಾದರು. ಮತ್ತೊಬ್ಬ ಶೂಟರ್ ಅರ್ಜುನ್ ಸಿಂಗ್ ಚೀಮಾ 18ನೇ ಸ್ಥಾನ ಪಡೆದರು.

Exit mobile version