ಬೆಂಗಳೂರು: ಪ್ರೇಮಿಗಳ ನಗರಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನ 4ನೇ ದಿನವಾದ ಜುಲೈ 30ರಂದು (Paris Olympics 2024) ಭಾರತದ ಶೂಟರ್ ಮನು ಭಾಕರ್ ಇತಿಹಾಸ ನಿರ್ಮಿಸುವ ಗುರಿ ಹೊಂದಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ (ಕಂಚು) ಗೆದ್ದ ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮತ್ತೊಂದು ಕಂಚಿನ ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಸ್ವಾತಂತ್ರ್ಯದ ನಂತರ ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಯಾವುದೇ ಭಾರತೀಯ ಕ್ರೀಡಾಪಟು ಎರಡು ಪದಕಗಳನ್ನು ಗೆದ್ದಿಲ್ಲ. ಹೀಗಾಗಿ ಮನು ಗೆದ್ದರೆ ದೊಡ್ಡ ಸಾಧನೆಯಾಗಲಿದೆ.
1900ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಾರ್ಮನ್ ಪ್ರಿಚರ್ಡ್ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಲ್ಲಿಂದ ಭಾರತ ಸಾಧನೆ ಮಾಡಿಲ್ಲ. ಮಂಗಳವಾರ ಅರ್ಜೆಂಟೀನಾ ವಿರುದ್ಧದ ಕಠಿಣ ಹೋರಾಟದ ಪಂದ್ಯವನ್ನು ಡ್ರಾದ ನಂತರ ಪುರುಷರ ಹಾಕಿ ತಂಡವು ಐರ್ಲೆಂಡ್ ವಿರುದ್ಧ ಆಡಲಿದೆ.
ಭಾಕರ್ ಮತ್ತು ಸರಬ್ಜೋತ್ ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಬಿಲ್ಲುಗಾರ ಧೀರಜ್ ಬೊಮ್ಮದೇವರ ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಜನ್ ಕೌರ್ ಮತ್ತು ಅಂಕಿತಾ ಭಕತ್ ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.
ಪುರುಷರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ 2 ನೇ ದಿನದಂದು ಟ್ರ್ಯಾಪ್ ಶೂಟರ್ ಪೃಥ್ವಿರಾಜ್ ತೊಂಡೈಮನ್ ಪುಟಿದೇಳಲು ಪ್ರಯತ್ನಿಸಿದರೆ, ರಾಜೇಶ್ವರಿ ಕುಮಾರಿ ಮತ್ತು ಶ್ರೇಯಸಿ ಸಿಂಗ್ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಅರ್ಹತೆಯ ಮೊದಲ ದಿನದಂದು ಅಭಿಯಾನಪ್ರಾರಂಭಿಸಲಿದ್ದಾರೆ.
#WATCH | Prime Minister Narendra Modi interacts with Olympic Bronze Medalist Manu Bhaker and congratulated her on winning a Bronze medal in Women’s 10 M Air Pistol at #ParisOlympics2024 pic.twitter.com/IHrumNS5yv
— ANI (@ANI) July 28, 2024
ಬಾಕ್ಸರ್ಗಳು ಕಣಕ್ಕೆ
ಭಾರತದ ಆರು ಭಾರತೀಯ ಬಾಕ್ಸರ್ ಗಳಲ್ಲಿ ಮೂವರು ನಾಳೆ ಕಣಕ್ಕಿಳಿಯಲಿದ್ದಾರೆ. ಪುರುಷರ 51 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್, ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಮತ್ತು ಮಹಿಳೆಯರ 54 ಕೆಜಿ ವಿಭಾಗದಲ್ಲಿ ಪ್ರೀತಿ ಪವಾರ್ ಸ್ಪರ್ಧಿಸಲಿದ್ದಾರೆ.
ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾ ವಿರುದ್ಧದ ಅಂತಿಮ ಗ್ರೂಪ್ ಪಂದ್ಯದಲ್ಲಿ ತಮ್ಮ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ. ಮಹಿಳಾ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸೋಲುಗಳ ಬಳಿಕ ಮತ್ತೊಂದ ಪಂದ್ಯ ಆಡಲಿದ್ದಾರೆ.
ಇದನ್ನೂ ಓದಿ: Paris Olympics 2024 : ಪುರುಷರ ಆರ್ಚರಿ ತಂಡಕ್ಕೆ ಆಘಾತ, ಕ್ವಾರ್ಟರ್ಫೈನಲ್ನಲ್ಲಿ ಸೋಲು
ಶೂಟಿಂಗ್, ಬಾಕ್ಸಿಂಗ್ ಮತ್ತು ಬ್ಯಾಡ್ಮಿಂಟನ್ ಜೊತೆಗೆ, ಪುರುಷರ ಸಿಂಗಲ್ಸ್ ಸ್ಕಲ್ಸ್ನಲ್ಲಿ ಬಲರಾಜ್ ಪನ್ವಾರ್ ಮತ್ತು ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸ್ಸಿಂಗ್ ಅರ್ಹತಾ ಸ್ಪರ್ಧೆಯಲ್ಲಿ ಅನುಷ್ ಅಗರ್ವಾಲ್ಲಾ ಸ್ಪರ್ಧಿಸಲಿದ್ದಾರೆ.
ಭಾರತದ ಪಂದ್ಯಗಳ ವಿವರ ಇಲ್ಲಿದೆ
- ಶೂಟಿಂಗ್: ಪುರುಷರ ಟ್ರ್ಯಾಪ್ ಅರ್ಹತಾ ಸುತ್ತಿನ 2ನೇ ದಿನ; ಪೃಥ್ವಿರಾಜ್ ತೊಡೈಮನ್, ಮಧ್ಯಾಹ್ನ 12.30ಕ್ಕೆ
- ಶೂಟಿಂಗ್: ಟ್ರ್ಯಾಪ್ ಮಹಿಳಾ ಅರ್ಹತಾ ಸುತ್ತಿನ ಮೊದಲ ದಿನ, ಶ್ರೇಯಸಿ ಸಿಂಗ್/ ರಾಜೇಶ್ವರಿ ಕುಮಾರಿ, ಮಧ್ಯಾಹ್ನ 12.30ಕ್ಕೆ
- ಶೂಟಿಂಗ್: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ, ಕಂಚಿನ ಪದಕ ಪಂದ್ಯ, ಮನು ಭಾಕರ್-ಸರಬ್ಜೋತ್ ಸಿಂಗ್, ಮಧ್ಯಾಹ್ನ 1 ಗಂಟೆಗೆ
- ಟೇಬಲ್ ಟೆನಿಸ್- ಮಹಿಳೆಯರ ಸಿಂಗಲ್ಸ್, ಶ್ರೀಜಾ ಅಕುಲಾ
- ರೋಯಿಂಗ್- ಪುರುಷರ ಸಿಂಗಲ್ಸ್ ಸ್ಕಲ್ ಕ್ವಾರ್ಟರ್ ಫೈನಲ್ 4, ಬಲರಾಜ್ ಪನ್ವಾರ್ , ಮಧ್ಯಾಹ್ನ 1.40ರಿಂದ
- ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸೇಜ್- ಅನುಷ್ ಅಗರ್ವಾಲಾ, ಮಧ್ಯಾಹ್ನ 2.30 ರಿಂದ
- ಹಾಕಿ: ಪುರುಷರ ಪೂಲ್ ಬಿ ಪಂದ್ಯ: ಐರ್ಲೆಂಡ್ ವಿರುದ್ಧ , ಸಂಜೆ 4.45ಕ್ಕೆ
- ಆರ್ಚರಿ: ಮಹಿಳೆಯರ ವೈಯಕ್ತಿಕ 32ನೇ ಸುತ್ತು, ಅಂಕಿತಾ ಭಕತ್, ಸಂಜೆ 5.14ಕ್ಕೆ
- ಆರ್ಚರಿ: ಮಹಿಳಾ ವೈಯಕ್ತಿಕ 32ನೇ ಸುತ್ತು, ಭಜನ್ ಕೌರ್, ಸಂಜೆ 5.27ಕ್ಕೆ
- ಬ್ಯಾಡ್ಮಿಂಟನ್: ಪುರುಷರ ಡಬಲ್ಸ್ ಗ್ರೂಪ್ ಸಿ: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ, ಸಂಜೆ 5.30
- ಬ್ಯಾಡ್ಮಿಂಟನ್: ಮಹಿಳಾ ಡಬಲ್ಸ್ ಗ್ರೂಪ್ ಸಿ: ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ, ಸಂಜೆ 6.20ಕ್ಕೆ
- ಬಾಕ್ಸಿಂಗ್: ಪುರುಷರ 51 ಕೆ.ಜಿ ವಿಭಾಗ : ಅಮಿತ್ ಪಂಗಲ್, ಸಂಜೆ 7.16ಕ್ಕೆ
- ಬಾಕ್ಸಿಂಗ್: ಪುರುಷರ 57 ಕೆ.ಜಿ ವಿಭಾಗ ಜೈಸ್ಮಿನ್ ಲಂಬೋರಿಯಾ, ರಾತ್ರಿ 9.08ರಿಂದ
- ಆರ್ಚರಿ: ಪುರುಷರ ವೈಯಕ್ತಿಕ ಸುತ್ತಿನಲ್ಲಿ 32 ಧೀರಜ್ ಬೊಮ್ಮದೇವರ, 10.46ರಿಂದ
- ಬಾಕ್ಸಿಂಗ್: ಮಹಿಳೆಯರ 54 ಕೆ.ಜಿ ವಿಭಾಗ, ಪ್ರೀತಿ, 01.06 ಗಂಟೆಗೆ