Site icon Vistara News

Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

Paris Olympics 2024

ಪ್ಯಾರಿಸ್ : ಭಾರತದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕ್ರಿಕೆಟ್​​ ಕೆಲಸದಿಂದ ವಿಮುಖರಾಗಿದ್ದು. ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರ (Paris Olympics 2024) ವೀಕ್ಷಣೆಗೆ ಪ್ಯಾರಿಸ್​​ಗೆ ತೆರಳಿದ್ದಾರೆ. ಅಲ್ಲಿ ಅವರು ಭಾರತದ ಪುರುಷರ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರ ಪಂದ್ಯವನ್ನು ವೀಕ್ಷಿಸಿದ್ದಾರೆ. ವಿಶೇಷವೆಂದರೆ ಬಾಲಾಜಿ ಮತ್ತು ಬೋಪಣ್ಣ ಅವರು ರೋಲ್ಯಾಂಡ್-ಗ್ಯಾರೋಸ್ – ಕೋರ್ಟ್ 14 ರಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್ಫಿಲ್ಸ್ ಮತ್ತು ಎಡ್ವರ್ಡ್ ರೋಜರ್ ವಾಸೆಲಿನ್ ವಿರುದ್ಧ ಸೆಣಸಿದ್ದಾರೆ. ಈ ಪಂದ್ಯವನ್ನು ಅವರು ವೀಕ್ಷಿಸಿದ್ದಾರೆ.

ದ್ರಾವಿಡ್ ಪ್ಯಾರಿಸ್​​ನಲ್ಲಿರುವ ಇಂಡಿಯಾ ಹೌಸ್​ಗೆ ಭೇಟಿ ನೀಡಿದ್ದಾರೆ. ಇದು ಭಾರತೀಯ ಅಭಿಮಾನಿಗಳು ಮತ್ತು ಕ್ರೀಡಾಪಟುಗಳಿಗೆ ಫ್ರೆಂಚ್ ರಾಜಧಾನಿಯಲ್ಲಿ ತವರು ದೇಶದ ಅನುಭವ ಪಡೆಯಲು ಒಂದು ತಾಣವಾಗಿದೆ. ತಮ್ಮ ಭೇಟಿಯ ಸಮಯದಲ್ಲಿ, ಮಾಜಿ ಕ್ರಿಕೆಟಿಗ ಕೇಂದ್ರದ ವೈಭವಕ್ಕೆ ಸಾಕ್ಷಿಯಾದರು. ವಿದೇಶಿಯರಿಗೆ ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿಯ ಒಂದು ನೋಟವನ್ನು ಇಲ್ಲಿ ನೀಡಲಾಗುತ್ತಿದೆ.

2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ದ್ರಾವಿಡ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರು. ಬಾರ್ಬಡೋಸ್​​ನಲ್ಲಿ ನಡೆದ ಐಸಿಸಿ ಟ್ರೋಫಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್​ಗಳ ರೋಚಕ ಗೆಲುವು ಸಾಧಿಸುವ ಮೂಲಕ ಮೆನ್ ಇನ್ ಬ್ಲೂ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು. 17 ವರ್ಷಗಳ ನಂತರ ಎರಡನೇ ಟಿ 20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ: IND vs SL T20 : ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಜಯ, ಸರಣಿ ಕೈವಶ

ದ್ರಾವಿಡ್ ಅವರ ನಾಯಕತ್ವದಲ್ಲಿ 2007 ರ ಏಕದಿನ ವಿಶ್ವಕಪ್​​ನ ಮೊದಲ ಹಂತದಲ್ಲಿಯೇ ಭಾರತವು ಟೂರ್ನಿಯಿಂದ ಹೊರಕ್ಕೆ ಹೋಗಿತ್ತು. ಆ ಬೇಸರವನ್ನು 51 ವರ್ಷದ ಧೋನಿ ಅಂತಿಮವಾಗಿ ಐಸಿಸಿ ಟ್ರೋಫಿಯನ್ನು ಗೆಲ್ಲುವ ಮೂಲಕ ಕಳೆದುಕೊಂಡಿದ್ದರು.

ಪ್ಯಾರಿಸ್ ನಲ್ಲಿ ಖಾತೆ ತೆರೆದ ಮನು ಭಾಕರ್

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್​​ನಲ್ಲಿ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ತನ್ನ ಖಾತೆಯನ್ನು ತೆರೆದಿದೆ. ಶೂಟಿಂಗ್ ಪದಕಕ್ಕಾಗಿ 12 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದ 22 ವರ್ಷದ ಮನು , ಕ್ರೀಡೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಬುಟಾ ಕ್ರಮವಾಗಿ ಮಹಿಳಾ ಮತ್ತು ಪುರುಷರ 10 ಮೀಟರ್ ಏರ್ ರೈಫಲ್ ಫೈನಲ್​ನಲ್ಲಿ ಕಾಣಿಸಿಕೊಂಡರೂ ಕ್ರಮವಾಗಿ 7 ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

Exit mobile version