Site icon Vistara News

Bikini vs : Hijab : ಸ್ಪೇನ್​, ಈಜಿಪ್ಟ್​ ನಡುವಿನ ಬೀಚ್ ವಾಲಿಬಾಲ್ ಪಂದ್ಯದ ವೇಳೆ ಕಿಡಿ ಹಚ್ಚಿದ ಬಿಕಿನಿ ವರ್ಸಸ್ ಹಿಜಾಬ್​ ಚರ್ಚೆ

Paris Olympics 2024

ಪ್ಯಾರಿಸ್ : ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ (Paris Olympics 2024) ಕ್ರೀಡಾಕೂಟದಲ್ಲಿ ಸ್ಪೇನ್ ಮತ್ತು ಈಜಿಪ್ಟ್ ನಡುವಿನ ಬೀಚ್ ವಾಲಿಬಾಲ್ ಪಂದ್ಯವು ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಚರ್ಚೆ ಹುಟ್ಟುಹಾಕಿತು. ಇಲ್ಲಿ ಆಟಗಾರ್ತಿಯರ ಪ್ರದರ್ಶನಕ್ಕಿಂತ ಅವರ ಉಡುಪು ಹೆಚ್ಚು ಗಮನ ಸೆಳೆಯಿತು. ಯಾಕೆಂದರೆ ಇಲ್ಲಿ ಈಜಿಪ್ಟ್ ಆಟಗಾರ್ತಿಯರು ಹಿಜಾಬ್ (Bikini vs : Hijab) ಹಾಕಿಕೊಂಡು ಆಡಿದರೆ ಸ್ಪೇನ್​ನ ಆಟಗಾರ್ತಿಯರು ಮೈ ಮಾಟ ತೋರಿಸುತ್ತಾ ಬಿಕಿನಿಯಲ್ಲಿ ಆಡಿದರು.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬೀಚ್ ವಾಲಿಬಾಲ್ ಪಂದ್ಯದಲ್ಲಿ ಈಜಿಪ್ಟ್ ಮಹಿಳಾ ಬೀಚ್ ವಾಲಿಬಾಲ್ ತಂಡವು ಸ್ಪೇನ್ ವಿರುದ್ಧ ಸೆಣಸಿತು. ಇದು ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಎರಡೂ ತಂಡಗಳಿಗೆ ಅಗತ್ಯವಾಗಿದ್ದ ಹಣಾಹಣಿಯಾಗಿತ್ತು. ಆದಾಗ್ಯೂ ಇಲ್ಲಿ ಫಲಿತಾಂಶದ ಕಡಗೆ ಜನ ಗಮನ ಹರಿಸಲಿಲ್ಲ. ಉಡುಪುಗಳ ಬಗ್ಗೆ ಚರ್ಚೆ ನಡೆಯಿತು. ಪಂದ್ಯದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ, ಎರಡೂ ತಂಡಗಳ ಉಡುಗೆಗಳಲ್ಲಿನ ವ್ಯತ್ಯಾಸವು ದೊಡ್ಡ ಚರ್ಚೆಯ ವಿಷಯವಾಯಿತು. ಇದು ಬೀಚ್ ವಾಲಿಬಾಲ್​ನಲ್ಲಿ ಕ್ರೀಡಾ ಉಡುಪು ಆಯ್ಕೆಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತು. ಅದಕ್ಕೆ ಇನ್ನೊಂದು ಕಾರಣವೆಂದರೆ ಫ್ರಾನ್ಸ್​ನಲ್ಲಿ ಹಿಜಾಬ್ ಬ್ಯಾನ್​. ಒಲಿಂಪಿಕ್ಸ್​ಗೆ ಮೊದಲೇ ಅಲ್ಲಿ ಹಿಜಾಬ್ ಬ್ಯಾನ್ ಮಾಡಲಾಗಿತ್ತು. ಆದಾಗ್ಯೂ ಈಜಿಫ್ಟ್ ಆಟಗಾರರು ಅಲ್ಲಿ ಹಿಜಾಬ್ ಸಮೇತ ಕಣಕ್ಕೆ ಇಳಿದ ಕಾರಣ ವಿವಾದಕ್ಕೆ ಒಳಗಾಗಬೇಕಾಗಿದೆ.

ಪಂದ್ಯದಲ್ಲಿ ಸ್ಪೇನ್ ಅತ್ಯುತ್ತಮ ಕೌಶಲ್ಯಗಳನ್ನು ಪ್ರದರ್ಶಿಸಿತು. ಪಂದ್ಯವನ್ನು ನೇರ ಸೆಟ್ ಗಳಲ್ಲಿ ಗೆದ್ದಿತು. ಆದರೆ ಆನ್ ಚರ್ಚೆಯು ಆಟವನ್ನು ಮೀರಿತ್ತು. ನಿಷೇಧದಿಂದಾಗಿ ಈಜಿಪ್ಟ್ ಆಟಗಾರರು ಹಿಜಾಬ್ ಧರಿಸುವುದರ ವಿರುದ್ಧ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪೇನ್ ತಮ್ಮ ಆಟದಿಂದ ಅದ್ಭುತವಾಗಿದ್ದರೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಟಾರ್ ಜೋಡಿ ಲಿಲಿಯಾನಾ ಫರ್ನಾಂಡಿಸ್ ಮತ್ತು ಪೌಲಾ ಸೋರಿಯಾ ಗುಟೆರೆಜ್ ಅವರನ್ನು ಬಿಟ್ಟು ಈಜಿಫ್ಟ್ ಆಟಗಾರರ ಬಗ್ಗೆಯೇ ಚರ್ಚೆ ನಡೆಸಿದರು. ಫಲಿತಾಂಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಸ್ಪೇನ್ ಗುರುವಾರ ಈಜಿಪ್ಟ್ ಅನ್ನು ನೇರ ಸೆಟ್​ಗಳಿಂದ ಸೋಲಿಸಿತು.

ಬಿಕಿನಿ ಕಡ್ಡಾಯ

ಬೀಚ್​ ವಾಲಿಬಾಲ್​ ಪಂದ್ಯಕ್ಕೆ ಬಿಕಿನಿ ಕಡ್ಡಾಯ. ಅಂತೆಯೇ ಸ್ಪೇನ್​ ಆಟಗಾರರು ಬಿಕಿನಿ ಧರಿಸಿದ್ದರೆ ಈಜಿಪ್ಟ್ ಬೀಚ್ ವಾಲಿಬಾಲ್ ಆಟಗಾರರು ಹಿಜಾಬ್ ಉದ್ದನೆಯ ಕಪ್ಪು ತೋಳಿನ ಶರ್ಟ್ ಮತ್ತು ಕಪ್ಪು ಉದ್ದದ ಲೆಗ್ಗಿಂಗ್ಸ್ ಧರಿಸಿದ್ದರು. ಇದಕ್ಕೂ ಮುನ್ನ ಈಜಿಫ್ಟ್​​ನ ಬೀಚ್ ವಾಲಿಬಾಲ್ ತಂಡದ ಸದಸ್ಯರು ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಫ್ರಾನ್ಸ್ ಹಿಜಾಬ್ ನಿಷೇಧದ ವಿರುದ್ಧ ಮಾತನಾಡಿದ್ದರು.

ಇದನ್ನೂ ಓದಿ: Paris Olympics 2024 : ಪೋಲ್ ವಾಲ್ಟ್ ‌ಪಟುವಿಗೆ ಮರ್ಮಾಘಾತ! ಪದಕ ತಪ್ಪಿಸಿದ ಮರ್ಮಾಂಗ! ವಿಡಿಯೊ ನೋಡಿ

“ನಾನು ನನ್ನ ಹಿಜಾಬ್​​ನಲ್ಲಿ ಆಡಲು ಬಯಸುತ್ತೇನೆ. ಅವರು ಬಿಕಿನಿಯಲ್ಲಿ ಆಡಲು ಬಯಸುತ್ತಾಳೆ” ಎಂದು ಈಜಿಪ್ಟ್​​ನ ದೋವಾ ಎಲ್ಘೋಬಾಶಿ ಹೇಳಿದ್ದಾರೆ. ನೀವು ನಗ್ನವಾಗಿರಲು ಅಥವಾ ಹಿಜಾಬ್ ಧರಿಸಲು ಬಯಸಿದರೆ ನಿಮ್ಮ ಆಯ್ಕೆ. ಎಲ್ಲಾ ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳ ಪ್ರಾತಿನಿಧ್ಯ ಎಂದು ಅವರು ಹೇಳಿದ್ದಾರೆ.

“ಹಿಜಾಬ್ ಧರಿಸುವಂತೆ ನಾನು ನಿಮಗೆ ಹೇಳುವುದಿಲ್ಲ ಮತ್ತು ಬಿಕಿನಿ ಧರಿಸಲು ನೀವು ನನಗೆ ಹೇಳುವಂತಿಲ್ಲ. ಹೇಗೆ ಉಡುಗೆ ತೊಡಬೇಕೆಂದು ಯಾರೂ ನನಗೆ ಹೇಳಲು ಸಾಧ್ಯವಿಲ್ಲ. ನಮ್ಮದು ಸ್ವತಂತ್ರ ದೇಶ, ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಮಾಡಲು ಅವಕಾಶ ನೀಡಬೇಕು” ಎಂದು ಅವರು ಹೇಳಿದ್ದಾರೆ.

Exit mobile version