ಬೆಂಗಳೂರು: ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಐಪಿಎಲ್ (IPL 2024) ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಭರ್ಜರಿ 8 ವಿಕೆಟ್ಗಳ ಗೆಲುವು ಸಾಧಿಸಿದೆ. 262 ರನ್ಗಳ ವಿಶ್ವ ದಾಖಲೆಯ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ. ಸ್ಮರಣೀಯ ವಿಜಯದ ನಂತರ ಪಂಜಾಬ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ‘ಮಿಶ್ತಿ ದೋಯಿ’ ಎಂಬ ಪ್ರಸಿದ್ಧ ಬಂಗಾಳಿ ಸಿಹಿ ಖಾದ್ಯವನ್ನು ಆನಂದಿಸಿದರು. ಅದರ ವಿಡಿಯೊವನ್ನು ಪಂಜಾಬ್ ತಂಡ ಶೇರ್ ಮಾಡಿದೆ.
Ajj di raat, 𝐌𝐢𝐬𝐡𝐭𝐢 𝐃𝐨𝐢 de naa! 🤩#SaddaPunjab #PunjabKings #JazbaHaiPunjabi #TATAIPL2024 #KKRvPBKS pic.twitter.com/OC8WZBZ1tA
— Punjab Kings (@PunjabKingsIPL) April 26, 2024
ಕಿಂಗ್ಸ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅರ್ಶ್ದೀಪ್ ಸಿಂಗ್ ಪ್ರಸಿದ್ಧ ಭಕ್ಷ್ಯವಾದ ಮಿಶ್ತಿ ದೋಯಿಯನ್ನು ಹರ್ಪ್ಪ್ರೀತ್ ಬ್ರಾರ್ ಅವರೊಂದಿಗೆ ಸವಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ಆಟಗಾರರು ಆನಂದಿಸಲು ಇತರ ಭಕ್ಷ್ಯಗಳ ಬಫೆ ಇತ್ತು.
ಅಪ್ರತಿಮ ‘ಜಟ್ ಡೋಂಟ್ ಕೇರ್’ ಹಾಡನ್ನು ಹಿನ್ನೆಲೆಯಲ್ಲಿ ನುಡಿಸುವುದನ್ನು ಕೇಳಬಹುದು. ಈ ಹಾಡು ಕಳೆದ ವರ್ಷ ಪಂಜಾಬ್ ಡ್ರೆಸ್ಸಿಂಗ್ ರೂಮ್ನಲ್ಲಿ ಹವಾ ಸೃಷ್ಟಿಸಿತ್ತು. ಈ ಸಂಪ್ರದಾಯವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2024 ಆವೃತ್ತಿಯಲ್ಲಿಯೂ ಮುಂದುವರಿಯಿತು.
ಅತಿ ಹೆಚ್ಚು ರನ್ ಚೇಸ್ ಮಾಡಿ ದಾಖಲೆ ಬರೆದ ಪಿಬಿಕೆಎಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸ್ಯಾಮ್ ಕರ್ರನ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಪಂಜಾಬ್ ಪರ ರಾಹುಲ್ ಚಹರ್ 4 ಓವರ್ಗಳಲ್ಲಿ 33 ರನ್ ನೀಡಿ ನರೈನ್ ವಿಕೆಟ್ ಪಡೆದರು.
ಇದನ್ನೂ ಓದಿ: Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ
ಇದಕ್ಕೆ ಉತ್ತರವಾಗಿ ಪ್ರಭ್ಸಿಮ್ರಾನ್ ಸಿಂಗ್ ಸಿಂಗ್ ಪವರ್ಪ್ಲೇನಲ್ಲಿ ಕೇವಲ 20 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಲಿಯಾಮ್ ಲಿವಿಂಗ್ಸ್ಟನ್ ಬದಲಿಗೆ ಈ ಪಂದ್ಯದಲ್ಲಿ ಪುನರಾಗಮನ ಮಾಡಿದ ಜಾನಿ ಬೈರ್ಸ್ಟೋವ್ 48 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು. ಎಂಟು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ಗಳನ್ನು ಬಾರಿಸಿ ಪಂಜಾಬ್ ಅನ್ನು ಸ್ಮರಣೀಯ ಗೆಲುವಿನತ್ತ ಕೊಂಡೊಯ್ದರು. ಅಲ್ಲದೆ ಈ ತಂಡದ ಆಟಗಾರರು ಪುರುಷರ ಟಿ 20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಚೇಸ್ ದಾಖಲಿಸಿದರು. ಅಂತಿಮವಾಗಿ ಎಂಟು ವಿಕೆಟ್ಗಳಿಂದ ಗೆದ್ದರು. ಬೈರ್ಸ್ಟೋವ್ ಅವರೊಂದಿಗೆ ಮೂರನೇ ವಿಕೆಟ್ಗೆ 37 ಎಸೆತಗಳಲ್ಲಿ 84 ರನ್ಗಳ ಜೊತೆಯಾಟದ ಸಂದರ್ಭದಲ್ಲಿ ಶಶಾಂಕ್ ಸಿಂಗ್ 28 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು.