ನವ ದೆಹಲಿ: ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ದರ (Oil prices) ಕಡಿಮೆಯಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಕಳೆದ ಜನವರಿಯಿಂದ ಇಲ್ಲಿಯವರೆಗಿನ ಅವಧಿಯ ಕನಿಷ್ಠ ಮಟ್ಟದಲ್ಲಿದೆ. ಸೋಮವಾರ ಪ್ರತಿ ಬ್ಯಾರೆಲ್‌ಗೆ 2.6 ಡಾಲರ್ ತಗ್ಗಿದ್ದು, 80.97 ಡಾಲರ್‌ಗೆ ಇಳಿದಿದೆ. ಒಪೆಕ್ ಮತ್ತು ರಷ್ಯಾದಿಂದ ಮತ್ತೊಂದು ಸುತ್ತಿನ ತೈಲೋತ್ಪಾದನೆ ಕಡಿತದ ವರದಿಗಳು ದರವನ್ನು ಮತ್ತಷ್ಟು ಇಳಿಸಿದೆ. ಬೇಡಿಕೆ ಕುಸಿತವಾಗುವ ಆತಂಕ ಉಂಟಾಗಿರುವುದು ಇದಕ್ಕೆ ಕಾರಣ.
ಕಳೆದ ಮಾರ್ಚ್ ನಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರ 112 ಡಾಲರ್‌ಗಳ ಉನ್ನತ ಮಟ್ಟದಲ್ಲಿ ಇತ್ತು. ಈ ಇಳಿಕೆಯ ಪರಿಣಾಮ ಪೆಟ್ರೋಲ್-ಡೀಸೆಲ್ ದರ ತಗ್ಗುವ ಸಾಧ್ಯತೆ ಇದೆ. ಬೆಂಗಳೂರುನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.94 ರೂ. ಹಾಗೂ ಡೀಸೆಲ್ ದರ 87.89 ರೂ.ನಷ್ಟು ಇತ್ತು.